ಡ್ರಗ್ಸ್ ಮಾರಾಟ ಬಗ್ಗೆ ನಿಗಾವಹಿಸಲು ಜಿಲ್ಲಾಧಿಕಾರಿ ಸೂಚನೆ
ಡ್ರಗ್ಸ್ ಮಾರಾಟ ಬಗ್ಗೆ ನಿಗಾವಹಿಸಲು ಜಿಲ್ಲಾಧಿಕಾರಿ ಸೂಚನೆ
ಚಿತ್ರ : ಕೋಲಾರ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಕಾರ್ಯಕ್ರಮ ಹಾಗೂ ತೀವ್ರತರ ಅತೀಸಾರ ಭೇದಿ ತಡೆಗಟ್ಟುವ ಅಭಿಯಾನ, ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಜಿಲ್ಲಾ ಕಾರ್ಯಪಡೆ ಸಮಿತಿಯ ಸಭೆ ಉದ್ದೇಶಿಸಿ ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ಮಾತನಾಡಿದರು.


ಕೋಲಾರ, ೧೮ ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಜಿಲ್ಲಾ ಔಷಧಿ ನಿಯಂತ್ರಕರಿಗೆ ಔಷಧಿ ಮಳಿಗೆಗಳಿಗೆ ಭೇಟಿ ನೀಡಿ ಡ್ರಗ್ಸ್ ಮಾರಾಟ ಬಗ್ಗೆ ವರದಿ ಮಾಡುವಂತೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಕ್ತ ಕ್ರಮ ವಹಿಸಿ ಯೋಜನೆಗಳನ್ನು ನೀಡಲು ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ಸೂಚಿಸಿದರು.

ಕೋಲಾರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಕಾರ್ಯಕ್ರಮ ಹಾಗೂ ತೀವ್ರತರ ಅತೀಸಾರ ಭೇದಿ ತಡೆಗಟ್ಟುವ ಅಭಿಯಾನ, ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಜಿಲ್ಲಾ ಕಾರ್ಯಪಡೆ ಸಮಿತಿಯ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಏಡ್ಸ್ ಕಾರ್ಯಕ್ರಮದಡಿ ಸರ್ಕಾರದ ವಿವಿಧ ಯೋಜನೆಗಳಾದ ಹೆಚ್.ಐ.ವಿ. ಸೊಂಕಿತ ಮಹಿಳೆಯರಿಗೆ ಧನಶ್ರೀ ಯೋಜನೆ, ಹೆಚ್.ಐ.ವಿ. ಸೋಂಕಿತ ಹಾಗೂ ಲೈಂಗಿಕ ಕಾರ್ಯಕರ್ತೆಯರಿಗೆ ಸಹಾಯಧನ ಹಾಗೂ ಸಾಲ ಸೌಲಭ್ಯ, ಹೆಚ್.ಐ.ವಿ. ಸೋಂಕಿತ ಮಕ್ಕಳಿಗೆ ವಿಶೇಷ ಪಾಲನಾ ಯೋಜನೆ, ಪುನರ ವಸತಿ ಯೋಜನೆ ಹಾಗೂ ಮೈತ್ರಿಯೋಜನೆ, ಲಿಂಗತ್ವ ಅಲ್ಪಸಂಖ್ಯಾತರಿಗೆ, ಚೇತನಯೋಜನೆ ಲೈಂಗಿಕ ಕಾರ್ಯಕರ್ತೆಯರಿಗಾಗಿ ಸೇವೆಗಳನ್ನು ನೀಡಲಾಗುತ್ತಿದೆ. ಹಾಗೂ ಜಿಲ್ಲೆಯಲ್ಲಿ ಸಕ್ರಿಯವಾಗಿರುವ ಮಹಿಳಾ ಲೈಂಗಿಕ ಕಾರ್ಯಕರ್ತೆಯರು ಒಟ್ಟು-೪೪೭೬ ಇವರಲ್ಲಿ ಹೆಚ್.ಐ.ವಿ. ಸೋಂಕಿಗೆ ಒಳಗಾಗಿ ಎ.ಆರ್.ಟಿ.ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ೬೯. ಸಕ್ರಿಯವಾಗಿರುವ ಪುರುಷ ಲೈಂಗಿಕ ಕಾರ್ಯಕರ್ತೆರು(ಎಂ.ಎಸ್.ಎಂ) ಒಟ್ಟು? ೩೪೮೦,ಹೆಚ್.ಐ.ವಿ. ಸೋಂಕಿಗೆ ಒಳಗಾಗಿ ಎ.ಆರ್.ಟಿ.ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ-೫೯ ಸೂಜಿ ಸಿರಂಜ್ಗಳಿಂದ ಡ್ರಗ್ಸ್ ತೆಗೆದುಕೊಳ್ಳುವವರ ಸಂಖ್ಯೆ - ೧೨೯೮ ಹೆಚ್.ಐ.ವಿ. ಸೋಂಕಿಗೆ ಒಳಗಾಗಿ ಎ.ಆರ್.ಟಿ.ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ-೦೮ ಎಂಬ ಮಾಹಿತಿಯನ್ನು ಏಡ್ಸ್ ನೋಡಲ್ ಅಧಿಕಾರಿ ಸಭೆಯಲ್ಲಿ ತಿಳಿಸಿದರು.

ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲು ಕ್ರಮ ವಹಿಸುವುದು ಮತ್ತು ಎಲ್ಲಾ ೫ ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುವಂತೆ ಕ್ರಮ ವಹಿಸುವುದು.

ದಡಾರ ಪ್ರಕರಣಗಳು ಹೆಚ್ಚಿರುವ ಪ್ರದೇಶಗಳಲ್ಲಿ ವಿಶೇಷ ಲಸಿಕಾ ಅಭಿಯಾನ ಹಾಗೂ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಸಹಕರಿಸುವುದು ಮತ್ತು ಎಲ್ಲಾ ೫ ವರ್ಷದೊಳಗಿನ ಮಕ್ಕಳಿಗೆ ವಿಟಮಿನ್-ಎ ನೀಡಲು ಸಹಕರಿಸುವುದು ಹಾಗೂ ಎಲ್ಲಾ ಮಕ್ಕಳು ದಢಾರ ರುಬೆಲ್ಲ ಲಸಿಕೆ ಜೊತೆ ವಿಟಮಿನ್-ಎ ಪಡೆದಿರುವ ಕುರಿತು ಖಾತರಿಪಡಿಸಿಕೊಳ್ಳುವುದು.

ಈ ಸಂದರ್ಭದಲ್ಲಿ ಇಲಾಖೆಯ ಅಧಿಕಾರಿಗಳು ಮೇಲ್ವಿಚಾರಣೆ ನಡೆಸಿ ಅರ್ಹ ಎಲ್ಲಾ ಮಕ್ಕಳು ದಢಾರ ರುಬೆಲ್ಲಾ ಮೊದಲನೇ ಹಾಗೂ ಎರಡನೇ ಡೋಸ್ ಲಸಿಕೆ ಪಡೆದಿರುವ ಕುರಿತು ಖಾತರಿಪಡಿಸಿಕೊಳ್ಳುವುದು.

ತಾಯಂದಿರ ಸಭೆಗಳಲ್ಲಿ ಬಾಲವಿಕಾಸ ಸಮಿತಿ ಸಭೆಗಳಲ್ಲಿ ಎರಡೂ ಡೋಸ್ ದಡಾರ ರುಬೆಲ್ಲಾ ಲಸಿಕೆ ತಪ್ಪದೇ ಪಡೆಯುವ ಮಹತ್ವದ ಕುರಿತು ಮಾಹಿತಿ ನೀಡುವುದು ಮತ್ತು ಸ್ತ್ರೀಶಕ್ತಿ ಗುಂಪುಗಳು ಮಕ್ಕಳನ್ನು ಲಸಿಕೆ ಹಾಕಿಸಲು ಮಕ್ಕಳನ್ನು ಕರೆತರುವುದು.

ಸಿ.ಡಿ.ಪಿ.ಓಗಳು ತಾಲ್ಲೂಕು ಮಟ್ಟದ ಅನುಷ್ಠಾನ ಸಮಿತಿ ಸದಸ್ಯರಾಗಿದ್ದು, ಮೇಲ್ವಿಚಾರಣೆ ನಡೆಸುವುದು ಹಾಗೂ ಜಿಲ್ಲಾ ಮಟ್ಟದ ಮತ್ತು ತಾಲ್ಲೂಕು ಮಟ್ಟದ ಟಾಸ್ಕ ಪೋರ್ಸ್ ಸಭೆಗಳಲ್ಲಿ, ಮೇಲ್ವಿಚಾರಣಾ ವರದಿಯನ್ನು ಪ್ರಸ್ತುತಪಡಿಸಿ ಸೂಕ್ತ ಕ್ರಮಗಳ ಕುರಿತು ಚರ್ಚಿಸುವುದು.

ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ, ಉಪಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಓ.ಆರ್.ಎಸ್. ಕಾರ್ನರ್ ಮಾಡಲಾಗಿದೆ.ಎಲ್ಲಾ ಪೋಷಕರಿಗೆ ಶುದ್ಧ ಕುಡಿಯುವ ನೀರು, ಎದೆ ಹಾಲಿನ ಮಹತ್ವ, ಪೌಷ್ಠಿಕ ಆಹಾರ ಸೇವನೆ, ಶೌಚಾಲಯ ಬಳಸುವುದು ಹಾಗೂ ಕೈ ತೊಳೆಯುವ ವಿಧಾನಗಳ ಬಗ್ಗೆ ಪ್ರಾತ್ಯಕ್ಷತೆ ಮೂಲಕ ಆರೋಗ್ಯ ಶಿಕ್ಷಣ ನೀಡುವುದರಿಂದ ನಮ್ಮ ಜಿಲ್ಲೆಯಲ್ಲಿ ಅತೀಸಾರ ಭೇದಿಯಿಂದ ಮರಣ ಹೊಂದುವ ಮಕ್ಕಳನ್ನು ರಕ್ಷಿಸಬಹುದೆಂದು ತಿಳಿಸಿದರು.

ಬಂಗಾರಪೇಟೆ-೬೯೬, ಕೋಲಾರ೫೬೪, ಮಲೂರು-೪೨೯, ಮುಳಬಾಗಿಲು-೫೫೮, ಶ್ರೀನಿವಾಸಪುರ-೪೩೪ ಸಂಖ್ಯೆಯಲ್ಲಿ ಓ.ಆರ್.ಎಸ್./ ಜಿಂಕ್ ಕಾರ್ನರ್ಗಳನ್ನು ಸ್ಥಾಪಿಸಲಾಗಿದೆ ಎಂದು ಸಭೆಗೆ ತಿಳಿಸಿದರು.

೦-೫ ವರ್ಷದೊಳಗಿನ ಮಕ್ಕಳು ಅತೀಸಾರ ಬೇಧಿಯಿಂದ ಮರಣವಾಗದಂತೆ ತಡೆಗಟ್ಟಲು ಸಂಬಂಧಿಸಿದ ಇಲಾಖೆಗಳು ಸಹಕಾರ ನೀಡುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ ಒಟ್ಟು ೭೨ ಮಂಗಳಮುಖಿಯರಿಗೆ ಮತ್ತು ೧೭೬ ದಮನಿತ ಮಹಿಳೆಯರಿಗೆ ನಿವೇಶನವನ್ನು ನೀಡಬೇಕು ಎಂದು ಕೇಳಿದಾಗ ಜಿಲ್ಲಾಧಿಕಾರಿಗಳು ಸಭೆಯಲ್ಲಿದ್ದ ಅಧಿಕಾರಿಗಳಿಗೆ ಸೂಚಸಿ ಶೀಘ್ರದಲ್ಲಿಯೇ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶ್ರೀನಿವಾಸ್,ಜಿಲ್ಲಾ ಆಸ್ಪತ್ರೆ ಅಧಿಕಾರಿ ಜಗದೀಶ್, ಎಸ್.ಎಂ.ಓ., ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿಗಳು ಹಾಗೂ ಎಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು, ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು ಸೇರಿದಂತೆ ಮತ್ತಿತರರು ಭಾಗವಹಿಸಿದರು.

ಚಿತ್ರ : ಕೋಲಾರ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಕಾರ್ಯಕ್ರಮ ಹಾಗೂ ತೀವ್ರತರ ಅತೀಸಾರ ಭೇದಿ ತಡೆಗಟ್ಟುವ ಅಭಿಯಾನ, ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಜಿಲ್ಲಾ ಕಾರ್ಯಪಡೆ ಸಮಿತಿಯ ಸಭೆ ಉದ್ದೇಶಿಸಿ ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ಮಾತನಾಡಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande