ಏಷ್ಯಾ ಕಪ್ 2025 : ಸೂಪರ್ 4ಕ್ಕೆ ಪಾಕಿಸ್ತಾನ ಪ್ರವೇಶ
ದುಬೈ, 18 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಏಷ್ಯಾ ಕಪ್ 2025ರ 10ನೇ ಪಂದ್ಯದಲ್ಲಿ ಪಾಕಿಸ್ತಾನವು ಯುಎಇ ವಿರುದ್ಧ 41 ರನ್‌ಗಳ ಜಯ ಸಾಧಿಸಿ ಸೂಪರ್ 4 ಹಂತಕ್ಕೆ ಪ್ರವೇಶಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿತು. ಫಖರ್ ಜಮಾನ್ ಅರ್ಧಶತಕ ಬ
ಏಷ್ಯಾ ಕಪ್ 2025 : ಸೂಪರ್ 4ಕ್ಕೆ ಪಾಕಿಸ್ತಾನ ಪ್ರವೇಶ


ದುಬೈ, 18 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಏಷ್ಯಾ ಕಪ್ 2025ರ 10ನೇ ಪಂದ್ಯದಲ್ಲಿ ಪಾಕಿಸ್ತಾನವು ಯುಎಇ ವಿರುದ್ಧ 41 ರನ್‌ಗಳ ಜಯ ಸಾಧಿಸಿ ಸೂಪರ್ 4 ಹಂತಕ್ಕೆ ಪ್ರವೇಶಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿತು. ಫಖರ್ ಜಮಾನ್ ಅರ್ಧಶತಕ ಬಾರಿಸಿದರು; ಶಾಹೀನ್ ಅಫ್ರಿದಿ ಕೊನೆಯಲ್ಲಿ 14 ಎಸೆತಗಳಲ್ಲಿ ಅಜೇಯ 29 ರನ್ ಗಳಿಸಿದರು. ಯುಎಇ ಪರ ಜುನೈದ್ ಸಿದ್ದಿಕಿ 4/18 ಹಾಗೂ ಸಿಮ್ರನ್‌ಜೀತ್ 3/26 ವಿಕೆಟ್ ಪಡೆದರು.

ಗುರಿಯನ್ನು ಬೆನ್ನಟ್ಟಿದ ಯುಎಇ 105 ರನ್‌ಗಳಿಗೆ ಆಲೌಟ್ ಆಯಿತು. ರಾಹುಲ್ ಚೋಪ್ರಾ (35) ಮತ್ತು ರಾಹುಲ್ ಪರಾಶರ್ (20) ಭರವಸೆ ಮೂಡಿಸಿದರೂ, ಉಳಿದ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಪಾಕಿಸ್ತಾನ ಪರ ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್ ಹಾಗೂ ಅಬ್ರಾರ್ ಅಹ್ಮದ್ ತಲಾ ಎರಡು ವಿಕೆಟ್ ಪಡೆದರು.

ಈ ಗೆಲುವಿನೊಂದಿಗೆ ಪಾಕಿಸ್ತಾನ ಸೂಪರ್ 4ಕ್ಕೆ ಭಾರತದೊಂದಿಗೆ ಅರ್ಹತೆ ಪಡೆದಿದೆ. ಯುಎಇ ಮತ್ತು ಓಮನ್ ಹೊರಬಿದ್ದರೆ, ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ನಡುವೆ ಇನ್ನೂ ಹೋರಾಟ ಮುಂದುವರಿದಿದೆ.

ಬಲೂಚಿಸ್ತಾನದಲ್ಲಿ ಸ್ಫೋಟ:ಮೂವರು ಸಾವನ್ನಪ್ಪಿ, ನಾಲ್ವರು ಗಾಯ

ಇಸ್ಲಾಮಾಬಾದ್, ಸೆಪ್ಟೆಂಬರ್ 18 (ಎಚ್‌ಎಸ್): ಪಾಕಿಸ್ತಾನದ ಬಲೂಚಿಸ್ತಾನದ ಡೇರಾ ಬುಗ್ಟಿ ಜಿಲ್ಲೆಯ ಸುಯಿ ಪ್ರದೇಶದಲ್ಲಿ ಬುಧವಾರ ಎರಡು ಪ್ರತ್ಯೇಕ ನೆಲಬಾಂಬ್ ಸ್ಫೋಟಗಳು ಸಂಭವಿಸಿ ಮೂವರು ನಾಗರಿಕರು ಸಾವನ್ನಪ್ಪಿ, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೊದಲ ಸ್ಫೋಟದಲ್ಲಿ ಮಹಿಳೆ, ಆಕೆಯ ಎಂಟು ವರ್ಷದ ಮಗಳು ಹಾಗೂ ಗುಲಾಮ್ ನಬಿ ಸಾವಿಗೀಡಾದರೆ, ಎರಡನೇ ಸ್ಫೋಟದಲ್ಲಿ ಇಬ್ಬರು ಪುರುಷರು, ಒಬ್ಬ ಮಹಿಳೆ ಮತ್ತು ಆಕೆಯ 10 ವರ್ಷದ ಮಗ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.

ಲೆವೀಸ್ ಮತ್ತು ಫ್ರಾಂಟಿಯರ್ ಕಾರ್ಪ್ಸ್ ಪಡೆಗಳು ಸ್ಥಳವನ್ನು ಸುತ್ತುವರಿದು ಶೋಧ ಕಾರ್ಯಾಚರಣೆ ನಡೆಸುತ್ತಿದ್ದು, ಸ್ಫೋಟಕಗಳ ಸ್ವರೂಪವನ್ನು ತಜ್ಞರು ಪರಿಶೀಲಿಸುತ್ತಿದ್ದಾರೆ. ಸ್ಫೋಟದ ಜವಾಬ್ದಾರಿಯನ್ನು ಇನ್ನೂ ಯಾವುದೇ ಗುಂಪು ಹೊತ್ತುಕೊಂಡಿಲ್ಲ.

ಇದೇ ವೇಳೆ, ಖುಜ್ದಾರ್ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಗಳು ಐದು ಉಗ್ರರನ್ನು ಹತಮಾಡಿದ್ದು, ಶಸ್ತ್ರಾಸ್ತ್ರಗಳು ಹಾಗೂ ಸ್ಫೋಟಕಗಳನ್ನು ವಶಪಡಿಸಿಕೊಂಡಿವೆ ಎಂದು ISPR ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande