ಕೋಳೂರು ಮೂಲೆ ಮಠದ ಪಾರ್ವತಮ್ಮ ನಿಧನ
ಬಳ್ಳಾರಿ, 17 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಗಣಿ ಉದ್ಯಮಿ ಶ್ರೀಮತಿ ಕೋಳೂರು ಮೂಲೆ ಮಠದ ಪಾರ್ವತಮ್ಮ - ಶ್ರೀಮತಿ ಕೆ.ಎಂ. ಪಾರ್ವತಮ್ಮ (86) ಅವರು ಬುಧವಾರ ಬೆಳಿಗ್ಗೆ 7.30 ರ ಸುಮಾರಿಗೆ ಬೆಂಗಳೂರಿನ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರಿಗೆ ಓರ್ವ ಪುತ್ರ, ಇಬ್ಬರು ಪುತ್ರಿಯರು ಇದ್
Death


ಬಳ್ಳಾರಿ, 17 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಗಣಿ ಉದ್ಯಮಿ ಶ್ರೀಮತಿ ಕೋಳೂರು ಮೂಲೆ ಮಠದ ಪಾರ್ವತಮ್ಮ - ಶ್ರೀಮತಿ ಕೆ.ಎಂ. ಪಾರ್ವತಮ್ಮ (86) ಅವರು ಬುಧವಾರ ಬೆಳಿಗ್ಗೆ 7.30 ರ ಸುಮಾರಿಗೆ ಬೆಂಗಳೂರಿನ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೃತರಿಗೆ ಓರ್ವ ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ.

ವೀರಶೈವ ಲಿಂಗಾಯತ ಸಮಾಜದಲ್ಲಿ ಕೊಡುಗೈ ದಾನಿಗಳಾಗಿದ್ದ ಕೆ.ಎಂ. ಪಾರ್ವತಮ್ಮ ಅವರು ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ - ಏಳ್ಗೆಗಾಗಿ ಶ್ರಮಿಸಿದ್ದರು.

ಮೃತರ ಪಾರ್ಥಿವ ಶರೀರವು ಬುಧವಾರ ಸಂಜೆ ಬಳ್ಳಾರಿ ನಗರವನ್ನು ತಲುಪಿದ್ದು, ಅವರ ಮನೆಯಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿದೆ‌

ಮೃತರ ಅಂತ್ಯಕ್ರಿಯೆಯು ಗುರುವಾರ ಮಧ್ಯಾಹ್ನ 1 ಗಂಟೆಯ ನಂತರ ಕುರುಗೋಡು ತಾಲೂಕಿನ ಕೋಳೂರು ಗ್ರಾಮದಲ್ಲಿರುವ ಸ್ವಂತ ಭೂಮಿಯಲ್ಲಿ ವೀರಶೈವ ವಿಧಿ ಸಂಪ್ರದಾಯಗಳ ಪ್ರಕಾರ ಗುರು - ಹಿರಿಯರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

ಮೃತರ ಆತ್ಮಕ್ಕೆ ಶಾಂತಿ‌ ಕೋರಿ ಜನಪ್ರತಿನಿಧಿಗಳು, ವೀರಶೈವ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು, ಆಜೀವ ಸದಸ್ಯರು, ಅಖಿಲ ಕರ್ನಾಟಕ ಬೇಡ ಜಂಗಮ ಸಂಘಟನೆಗಳ ಒಕ್ಕೂಟ, ಕಮ್ಮರಬೇಡು ಮಠದ ಕಲ್ಯಾಣ ಶ್ರೀಗಳು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಅಖಿಲ ಭಾರತ ವೀರಶೈವ ಮಹಾಸಭಾದ ಪದಾಧಿಕಾರಿಗಳು - ಆಜೀವ ಸದಸ್ಯರು ಹಾಗೂ ಸಂಘ - ಸಂಸ್ಥೆಗಳವರು, ಸಾರ್ವಜನಿಕರು ತೀವ್ರ ಶೋಕ ಸಂತಾಪ ಸೂಚಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande