ಶಿವಮೊಗ್ಗ, 17 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : 2023-24, 2024-25 ನೇ ಸಾಲಿನ ಸಾಗರ ನಗರಸಭಾ ಸಾಮಾನ್ಯ ನಿಧಿ ಮತ್ತು ಎಸ್‌ಎಫ್‌ಸಿ ಮುಕ್ತ ನಿಧಿ, ಮಂಜೂರಾದ ಕ್ರಿಯಾ ಯೋಜನೆಯಡಿಯಲ್ಲಿ ಉಳಿಕೆ ಕಾರ್ಯಕ್ರಮಗಳ ಹಾಗೂ 2025-26 ನೇ ಸಾಲಿನ ಸಾಮಾನ್ಯ ನಿಧಿ ಮತ್ತು ಎಸ್‌ಎಫ್‌ಸಿ ಮುಕ್ತನಿಧಿ ಮಂಜೂರಾತಿ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಾಗೂ ವಿಕಲಚೇತನ ಫಲಾನುಭವಿಗಳಿಂದ ವೈಯಕ್ತಿಕ ಕಾರ್ಯಕ್ರಮಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ನಿಗದಿತ ನಮೂನೆಯನ್ನು ಸಾಗರ ನಗರಸಭೆ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಕಚೇರಿಗೆ ಅ .16 ರೊಳಗಾಗಿ ಸಲ್ಲಿಸುವಂತೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08183-226021 ನ್ನು ಹಾಗೂ ವಿಷಯ ನಿರ್ವಾಹಕರನ್ನು ಸಂಪರ್ಕಿಸುವುದು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa