ಜಾಗತಿಕ ಮಾರುಕಟ್ಟೆಯಲ್ಲಿ ಉತ್ಸಾಹ
ನವದೆಹಲಿ, 16 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಅಮೆರಿಕಾದ ಬಡ್ಡಿದರ ಇಳಿಕೆ ನಿರೀಕ್ಷೆಯಿಂದ ಜಾಗತಿಕ ಮಾರುಕಟ್ಟೆಗಳಲ್ಲಿ ಉತ್ಸಾಹ ಗೋಚರಿಸಿದೆ. ವಾಲ್ ಸ್ಟ್ರೀಟ್‌ನಲ್ಲಿ ಎಸ್ & ಪಿ 500 ಶೇ. 0.47, ನಾಸ್ಡಾಕ್ ಶೇ. 0.94 ಏರಿಕೆಯೊಂದಿಗೆ ಮುಕ್ತಾಯವಾಗಿದ್ದು, ಡೌ ಜೋನ್ಸ್ ಫ್ಯೂಚರ್ಸ್ ಕೂಡಾ ಏರಿಕೆಯಲ್ಲ
Global market


ನವದೆಹಲಿ, 16 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಅಮೆರಿಕಾದ ಬಡ್ಡಿದರ ಇಳಿಕೆ ನಿರೀಕ್ಷೆಯಿಂದ ಜಾಗತಿಕ ಮಾರುಕಟ್ಟೆಗಳಲ್ಲಿ ಉತ್ಸಾಹ ಗೋಚರಿಸಿದೆ. ವಾಲ್ ಸ್ಟ್ರೀಟ್‌ನಲ್ಲಿ ಎಸ್ & ಪಿ 500 ಶೇ. 0.47, ನಾಸ್ಡಾಕ್ ಶೇ. 0.94 ಏರಿಕೆಯೊಂದಿಗೆ ಮುಕ್ತಾಯವಾಗಿದ್ದು, ಡೌ ಜೋನ್ಸ್ ಫ್ಯೂಚರ್ಸ್ ಕೂಡಾ ಏರಿಕೆಯಲ್ಲಿದೆ.

ಯುರೋಪಿನಲ್ಲಿ ಸಿಎಸಿ ಶೇ. 0.91, ಡಿಎಎಕ್ಸ ಶೇ. 0.21 ಏರಿಕೆಯಾಗಿದ್ರೆ, ಎಫ್ಟಿಎಸ್ಸಿ ಶೇ. 0.07 ಕುಸಿತ ಕಂಡಿತು. ಏಷ್ಯಾದಲ್ಲಿ ಮಿಶ್ರ ವ್ಯವಹಾರ ನಡೆಯುತ್ತಿದ್ದು, ಕೋಸ್ಪಿ ಶೇ. 1.28, ತೈವಾನ್ ವೆಟೆಡ್ ಶೇ. 0.94 ಏರಿಕೆಯಾಗಿದ್ದರೆ, ಶಾಂಘೈ, ಜಕಾರ್ತಾ ಹಾಗೂ ಸ್ಟ್ರೈಟ್ಸ್ ಟೈಮ್ಸ್ ಸೂಚ್ಯಂಕಗಳು ಸ್ವಲ್ಪ ಕುಸಿದಿವೆ.

ಒಟ್ಟಾರೆ, ಜಾಗತಿಕ ಮಾರುಕಟ್ಟೆಗಳಲ್ಲಿ ಬಲದ ಚಿಹ್ನೆಗಳು ಗೋಚರಿಸುತ್ತಿವೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande