ಕೊಪ್ಪಳ : ಗೌರಿಶಂಕರ ಮಹಿಳಾ ಸಂಘದಿಂದ ಶಿಕ್ಷಕರ ದಿನಾಚರಣೆ
ಕೊಪ್ಪಳ, 15 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಇಲ್ಲಿನ ಬನ್ನಿಕಟ್ಡಿ ಹತ್ತಿರದ ಗೌರಿಶಂಕರ ಮಹಿಳಾ ಸಂಘದಿಂದ ಶಿಕ್ಷಕರ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಿಕ್ಷಕರಾದ ಸುಧೀಂದ್ರ ಕುಮಾರ್ ದೇಸಾಯಿ, ಬಾಲನಾಗಮ್ಮ, ಗಾಯತ್ರಿ ಶಿವನಗುತ್ತಿ, ಶೀಲಾ ಹಾಲಿಗೇರಿ, ವಿಜಯ್ ಕುಮ
ಕೊಪ್ಪಳ : ಗೌರಿಶಂಕರ ಮಹಿಳಾ ಸಂಘದಿಂದ ಶಿಕ್ಷಕರ ದಿನಾಚರಣೆ


ಕೊಪ್ಪಳ, 15 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಇಲ್ಲಿನ ಬನ್ನಿಕಟ್ಡಿ ಹತ್ತಿರದ ಗೌರಿಶಂಕರ ಮಹಿಳಾ ಸಂಘದಿಂದ ಶಿಕ್ಷಕರ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಶಿಕ್ಷಕರಾದ ಸುಧೀಂದ್ರ ಕುಮಾರ್ ದೇಸಾಯಿ, ಬಾಲನಾಗಮ್ಮ, ಗಾಯತ್ರಿ ಶಿವನಗುತ್ತಿ, ಶೀಲಾ ಹಾಲಿಗೇರಿ, ವಿಜಯ್ ಕುಮಾರ್ ಪದಕಿ ಮತ್ತು ಲತಾ ಮಟ್ಟಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ವಕೀಲರಾದ ವಿ. ಎಂ. ಭೂಸನೂರಮಠ ಅವರು, ಶಿಕ್ಷಕರೆಂದರೆ ಎರಡನೇ‌ ತಾಯಿ ತಂದೆಯರಿದ್ದಂತೆ, ಅವರು ದೇಶವನ್ನು ಕಟ್ಟುವ ನಿಜವಾದ ಶಕ್ತಿವಂತರು ಮತ್ತು ಅವರಿಗೆ ತಾಯಿ ಮನಸ್ಸು ಇದ್ದರೆ ಖಂಡಿತ ಎಲ್ಲರ ಬಾಳು ಬೆಳಗುತ್ತದೆ ಎಂದರು.

ಸಂಘದ ಅಧ್ಯಕ್ಷೆ ಗೌರಿ ಅಮರೇಶ ಅಧ್ಯಕ್ಷತೆವಹಿಸಿದ್ದರು. ಕಾರ್ಯಕ್ರಮದಲ್ಲಿ ಹಿರಿಯರಾದ‌ ಮಲ್ಲಿಕಾರ್ಜುನ ಸಜ್ಜನ್, ಉಪಾಧ್ಯಕ್ಷರಾದ ಶೋಭಾ ಸೊಪ್ಪಿಮಠ ಇದ್ದರು. ಪೂಜಾ ಕುರಗೋಡ ಸ್ವಾಗತಿಸಿದರು, ಸೌಮ್ಯ ನಾಲ್ವಾಡ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾವ್ಯ ಸಜ್ಜನ್ ನಿರೂಪಿಸಿದರು. ದೀಪಾ ಬಳ್ಳಾಬಳ್ಳಿ ವಂದಿಸಿದರು. ಸಂಘದ ಪ್ರಮುಖರಾದ ಸೌಮ್ಯ ಅಳವಂಡಿ, ಶ್ವೇತಾ ಕೋಣಂಗಿ, ಪ್ರತೀಕ್ಷಾ, ಸರಸ್ವತಿ ಕುರಗೋಡ, ಭಾಗ್ಯ ಶಿಗನಹಳ್ಳಿ ಕಾರ್ಯಕ್ರಮ ನಡೆಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande