ಕೊಪ್ಪಳ, 15 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಒಬ್ಬ ವ್ಯಕ್ತಿಯು ಇನ್ನೊಬ್ಬರ ಮೇಲೆ ಅವಲಂಬನೆ ಆಗದೆ ಸ್ವಾವಲಂಬಿ ಜೀವನ ಸಾಗಿಸಿದಾಗ ಆ ವ್ಯಕ್ತಿಯ ವ್ಯಕ್ತಿತ್ವ ಹಾಗೂ ಗೌರವ ಸಮಾಜದಲ್ಲಿ ಇಮ್ಮಡಿ ಆಗುತ್ತದೆ ಎಂದು ಕೊಪ್ಪಳದ ಡಾ. ಪ್ರವೀಣ ಪೋ. ಪಾಟೀಲ ಅವರು ತಿಳಿಸಿದ್ದಾರೆ.
ನಿಂಗೋಜಿ ಶಿಕ್ಷಣ ಹಾಗೂ ಗ್ರಾಮೀಣ ಅಭಿವ್ರದ್ಧಿ ಟ್ರಸ್ಟ ಕೊಪ್ಪಳˌ ಎಸ್.ಎ.ನಿಂಗೋಜಿ ಮಹಿಳಾ ಮಹಾವಿದ್ಯಾಲಯ ˌ ನಿಂಗೋಜಿ ಆಯುರ್ವೇದ ಮಹಾ ವಿದ್ಯಾಲಯ ಹಾಗೂ ನಿಂಗೋಜಿ ಬಿ.ಇಡಿ. ಕಾಲೇಜ ಯಲಬುರ್ಗಾ ಇವುಗಳ ಸಂಯುಕ್ತಾಶ್ರಯದಲ್ಲಿ ನಗರದ ಸಾಹಿತ್ಯ ಭವನದಲ್ಲಿ ಆಯೋಜಿಸಿದ ಯು.ಜಿ.ಸಿ. ˌ ನೆಟ್ ಹಾಗೂ ಕೆ—ಸೆಟ್ ಪರೀಕ್ಷೆಯ ಪೂರ್ವ ಸಿದ್ಧತೆ ಕುರಿತು ಉಚಿತ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.
ಉದ್ಯೋಗಾರ್ಥಿಗಳು ಹಣ ಕೊಟ್ಟು ತರಬೇತಿ ಪಡೆದು ಕೊಳ್ಳುತ್ತಾರೆ ಆದರೆ ನಿಂಗೋಜಿ ಶಿಕ್ಷಣ ಸಂಸ್ಥೆಯವರು ಉಚಿತವಾಗಿ ತರಬೇತಿನೀಡಿ ಉನ್ನತ ಹುದ್ಧೆಯನ್ನು ಅಲಂಕರಿಸಲು ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಾ ಸಹಕರಿಸುತ್ತಿರುವದಕ್ಕೆ ಅವರನ್ನು ಅಭಿನಂದಿಸಲೆ ಬೇಕು ಎಂದರಲ್ಲದೆ ಆ ಮನೆತನ ಜಿಲ್ಲೆಯಲ್ಲಿ ಸುಪ್ರಸಿದ್ಧವಾಗಿದೆ ಎಲ್ಲಾ ರಂಗಗಳಲ್ಲಿಯೂ ತಮ್ಮದೆ ಆದ ಸೇವೆಯನ್ನು ಮಾಡುತ್ತಿರುವದನ್ನು ಗಮನಿಸುತ್ಥಾ ಬಂದಿದ್ಧೇನೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಪತ್ರಕರ್ತ ಮಂಜುನಾಥ ಜಿ. ಗೊಂಡಬಾಳ ಮಾತನಾಡಿ, ದುಡ್ಡು ಕೊಟ್ಟರೂ ಶಿಕ್ಷಣ ಸಿಗಲಾರದ ಈ ಸಮಯದಲ್ಲಿ ಉಚಿತ ತರಬೇತಿಯನ್ನು ಆಯೋಜಿಸಿ ಶೈಕ್ಷಣಿಕವಾಗಿ ಮುಂದೆ ಬರಲು ನಿಸ್ವಾರ್ಥ ಸೇವೆಗೆ ಮುಂದಾಗಿರುವ ನಿಂಗೋಜಿ ಶಿಕ್ಷಣ ಸಂಸ್ಥೆ ಜನಮುಖಿಯಾಗಿ ಕೆಲಸ ಮಾಡುತ್ತಿರುವದು ಶ್ಲಾಘನೀಯವಾಗಿದೆ, ಹೆಣ್ಣು ಮಕ್ಕಳು ಈಗ ಎಲ್ಲದರಲ್ಲೂ ಮುಂದೆ ಇದ್ದಾರೆ, ಈಗಲೂ ದೇಶ ಮುನ್ನಡೆಸಲು ಅವರೇ ನಿಲ್ಲಬೇಕಿದೆ, ಗಂಡುಮಕ್ಕಳು ಮಾನಸಿಕವಾಗಿ ಗಟ್ಟಿಯಾಗುತ್ತಿಲ್ಲ ಎಂದರು.
ಗದುಗಿನ ಪಿ.ಪಿ..ಜಿ.ಕಾಲೇಜಿನ ಪ್ರಾಧ್ಯಾಪಕ ಡಾ| ವೀರಣ್ಣ ಎ. ನಿಂಗೋಜಿ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಸದುದ್ಧೇಶವನ್ನು ಇಟ್ಟುಕೊಂಡು ಸಂಸ್ಥೆಯನ್ನು ಹುಟ್ಟುಹಾಕಲಾಗಿದೆ ಬಿ.ಇಡಿ. ಆಯುರ್ವೆದಿಕ್ ಮೆಡಿಕಲ್ ಕಾಲೇಜುˌ ಮಹಿಳಾ ಡಿಗ್ರಿ ಕಾಲೇಜ್, ಪಿ.ಯು.ಕಾಲೇಜ ಗಳನ್ನು ಈಗಾಗಲೆ ಪ್ರಾರಂಭಿಸಲಾಗಿದೆ. ಉನ್ನತ ವ್ಯಾಸಂಗ ಮಾಡಿದವರು ಉನ್ನತ ಹುದ್ದೆಗೆ ನೇಮಕಾತಿ ಆಗಲಿ ಎನ್ನುವ ಉದ್ಧೇಶದಿಂದ ಈ ಕಾರ್ಯಗಾರವನ್ನು ಉಚಿತವಾಗಿ ಹಮ್ಮಿಕೊಳ್ಳಲಾಗಿದೆ ಎಂದರು.
ಆಯುರ್ವೆದಿಕ್ ಕಾಲೇಜಿನ ಪ್ರಾಚಾರ್ಯ ಡಾ| ಪ್ರವೀಣಕುಮಾರ ಹಿರೇಮಠ ಮಾತನಾಡಿ, ನಮ್ಮ ಆಯರ್ವೆದಿಕ್ ಕಾಲೇಜಿನಲ್ಲಿ ತಪಾಸಿಸುವ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದು ಅದರ ಸದುಪಯೋಗವನ್ನು ಜಿಲ್ಲೆಯ ಜನತೆ ಪಡೆದುಕೊಳ್ಳಬೇಕೆಂದು ಹೇಳಿದರು.
ಅಧ್ಯಕ್ಷತೆಯನ್ನು ಟ್ರಸ್ಟಿನ ಸಂಸ್ಥಾಪಕ ಅಧ್ಯಕ್ಷರಾದ ಹಿರಿಯ ನ್ಯಾಯವಾದಿ ಶಶಿಕಾಂತ ನಿಂಗೋಜಿ ವಹಿಸಿದ್ದರು.
ವೇದಿಕೆ ಮೇಲೆ ಪ್ರಲ್ಹಾದ ಅಗಳಿ, ಸಂಪತಕುಮಾರ ಆಕಳವಾಡಿˌ ಬಸವರಾಜ ಸಂಕನಗೌಡರ, ಬಿ.ಎಸ್.ವೀರಾಪೂರ, ಡಾ. ಪ್ರಕಾಶ ಹಳ್ಳಿಗುಡಿ, ಪ್ರಾ. ರುದ್ರಮುನಿˌ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ವೀರಣ್ಣ ಮ. ನಿಂಗೋಜಿ, ಆನಂದ ಜಿ. ಗೊಂಡಬಾಳ,ಶಿಕ್ಷಕ ಹನುಮೇಶ ಈಳಗೇರ ಉಪಸ್ಥಿತರಿದ್ದರು.
ಆಂದ್ರಪ್ರದೇಶದ ನೆಲ್ಲೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ಸಹ ಪ್ರಾಧ್ಯಾಪಕರಾದ ಡಾ. ಪ್ರಕಾಶ ಬಡಿಗೇರ ರವರು ಮಾತನಾಡಿ ನಮ್ಮ ಭಾಗದ ಜನರು ಉನ್ನತ ಹುದ್ಧೆಯಲ್ಲಿ ಇರಬೇಕು ಎನ್ನುವ ಕನಸನ್ನು ಕಾಣುವವರ ಉದ್ದೇಶ ಈಡೇರಿಸಲು ನಿಂಗೋಜಿ ಶಿಕ್ಷಣ ಸಂಸ್ಥೆಯ ಪ್ರಯತ್ನ ಫಲಿಸಲಿ ಎನ್ನುವ ಆಸೆ ನನ್ನದೂ ಆಗಿದೆ ನಾನು ಸಹ ಉಚಿತವಾಗಿಯೆ ತರಬೇತಿ ನೀಡಲು ಬಂದಿದ್ದೇನೆ ಎಂದರು.
ಸಂಪನ್ಮೂಲ ವ್ಯಕ್ತಿ ನೀಡುವ ತರಬೇತಿ ಹಲವಾರು ಪ್ರಾತ್ಯಕ್ಷಿಕೆ ಮಾಡುವಾಗ ಉದ್ಯೊಗಾಕಾಂಕ್ಷಿಗಳು ಆಸಕ್ತಿಯಿಂದ ಕೇಳುತ್ತಾ ಉಪಯುಕ್ತವಾದ ಮಾಹಿತಿಯನ್ನು ಟಿಪ್ಪಣೆ ಮಾಡುತ್ತಾ ನಾವು ಉನ್ನತ ಹುದ್ದೆಗೆ ಹೋಗಲು ತರಬೇತಿ ಪೂರಕವಾಗಿದೆ ಹಾಗೂ ಆತ್ಮ ವಿಶ್ವಾಸವನ್ನು ತುಂಬಿಸಿದೆ ಎಂದು ಅಭಿಪ್ರಾಯಪಟ್ಟರು.
ಸುಮಾರು ಐದುನೂರಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ತರಬೇತಿಯ ಸದುಪಯೋಗವನ್ನು ಪಡೆದುಕೊಂಡರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್