ವಿಜಯಪುರ, 15 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಮನೆಯೊಂದರಲ್ಲಿ ಅಡುಗೆ ಸಿಲಿಂಡರ್ ಸೋರಿ ಆಗಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ತಳವಾರ್ ಓಣಿಯಲ್ಲಿ ನಡೆದಿದೆ.
ರಾಮಚಂದ್ರ ಹಟ್ಟಿ ಮನೆಯಲ್ಲಿ ಅಡುಗೆ ಸಿಲಿಂಡರ್ ಸೋರಿ ಮನೆಯಲ್ಲಿನ ವಸ್ತುಗಳು ಹಾನಿಯಾಗಿವೆ. ಯಾವುದೇ ಪ್ರಾಣ ಹಾನಿಯಾಗಿಲ್ಲ.
ಅಡುಗೆ ಸಿಲಿಂಡರ್ ಸೋರಿ ಮನೆಯಲ್ಲಿ ಬೆಂಕಿ ಆವರಿಸಿದೆ, ಅದಕ್ಕಾಗಿ ತಕ್ಷಣವೇ ಮನೆ ಕುಟುಂಬಸ್ಥರು ಓಡಿ ಹೊರಗೆ ಬಂದಿದ್ದಾರೆ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯರ ನೆರವಿನಿಂದ ಬೆಂಕಿಯನ್ನು ನ0ದಿಸಲಾಯಿತ್ತು. ಅವಘಡದಿಂದ ಅಪಾರ ಪ್ರಮಾಣದ ಮನೆಯಲ್ಲಿನ ವಸ್ತುಗಳಿಗೆ ಹಾನಿ ಉಂಟಾಗಿದೆ. ಚಡಚಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande