ಬೆಂಗಳೂರು, 15 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಸ್ಯಾಂಡಲ್‌ವುಡ್ ನಟ ಉಪೇಂದ್ರ ಹಾಗೂ ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ಅವರ ಮೊಬೈಲ್‌ಗಳು ಹ್ಯಾಕ್ ಆಗಿರುವ ಘಟನೆ ನಡೆದಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹಂಚಿಕೊಂಡ ದಂಪತಿ, ನಮ್ಮಿಬ್ಬರ ಫೋನ್‌ಗಳು ಹ್ಯಾಕ್ ಆಗಿವೆ. ಯಾರಾದರೂ ನಮ್ಮ ಹೆಸರಲ್ಲಿ ಹಣ ಕೇಳಿದರೆ ನಂಬಿ ಕೊಡಬೇಡಿ. ಮೊದಲು ನಾವು ಸಾರ್ವಜನಿಕವಾಗಿ ತಿಳಿಸುತ್ತಿದ್ದೇವೆ. ಪೊಲೀಸರಿಗೆ ದೂರು ಕೊಡಲಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಘಟನೆಯ ಕುರಿತು ಪ್ರಿಯಾಂಕಾ ಮಾಹಿತಿ ನೀಡಿದ್ದು, ನಾನು ಆನ್‌ಲೈನ್‌ನಲ್ಲಿ ವಸ್ತುವೊಂದನ್ನು ಆರ್ಡರ್ ಮಾಡಿದ್ದೆ. ನಂತರ ಒಬ್ಬ ಹ್ಯಾಕರ್ ಕರೆ ಮಾಡಿ, ಹ್ಯಾಶ್ ಒತ್ತಿ, ಈ ನಂಬರ್, ಆ ನಂಬರ್ ಒತ್ತಿ ಎಂದು ಹೇಳಿ ಗೊಂದಲ ಸೃಷ್ಟಿಸಿದರು. ಆ ಬಳಿಕ ಉಪೇಂದ್ರ ಅವರ ಫೋನ್‌ನಿಂದ ಕರೆ ಮಾಡಿದಾಗ ಅವರ ಫೋನ್ ಕೂಡ ಹ್ಯಾಕ್ ಆಯಿತು ಎಂದು ಹೇಳಿದ್ದಾರೆ.
ಅಪರಿಚಿತರಿಂದ ಬಂದ ಸಂದೇಶಗಳು ಅಥವಾ ಕರೆಗಳಿಗೆ ಸ್ಪಂದಿಸದೆ, ಎಚ್ಚರಿಕೆಯಿಂದ ಇರಲು ಅಭಿಮಾನಿಗಳಿಗೆ ಉಪೇಂದ್ರ ದಂಪತಿ ಮನವಿ ಮಾಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa