ಪಲಾಮ, 14 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಜಾರ್ಖಂಡ್ ಪಲಮು-ಮನಾಟು ಗಡಿಭಾಗದ ಕಾಶ್ ಮತ್ತು ಬನ್ಶಿ ಖುರ್ದ್ ಕಾಡುಗಳಲ್ಲಿ ಭದ್ರತಾ ಪಡೆ–ಟಿಎಸ್ಪಿಸಿ ಉಗ್ರರ ನಡುವೆ ಭಾನುವಾರ ನಡೆದ ಎನ್‌ಕೌಂಟರ್‌ನಲ್ಲಿ ಐದು ಲಕ್ಷ ರೂ. ಬಹುಮಾನಿತ ಕಮಾಂಡರ್ ಮುಖ್‌ದೇವ್ ಯಾದವ್ ಹತನಾಗಿದ್ದಾನೆ.
ಸ್ಥಳದಿಂದ ಮೃತದೇಹ ಹಾಗೂ ಐಎನ್‌ಎಸ್‌ಎಎಸ್ ರೈಫಲ್ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‌ಪಿ ರಿಷ್ಮಾ ರಮೇಶನ್ ತಿಳಿಸಿದ್ದಾರೆ. ಕೋಬ್ರಾ, ಜಾಗ್ವಾರ್ ಹಾಗೂ ಪಲಾಮು ಪೊಲೀಸರು ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಸೆಪ್ಟೆಂಬರ್ 3ರಂದು ಇದೇ ಉಗ್ರ ಸಂಘಟನೆಯೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಪೊಲೀಸರು ಹುತಾತ್ಮರಾಗಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa