ವಿಜಯಪುರ, 13 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಆಂಜನೇಯನ ದೇವಸ್ಥಾನದ ಸುತ್ತ ಭಂಡಾರದ ಮಳೆ ಸುರಿದಿದ್ದು, ಭಕ್ತರು ಆಶ್ಚರ್ಯ ಚಕಿತಗೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಹೆಗ್ಗೂರು ಗ್ರಾಮದಲ್ಲಿ ನಡೆದಿದೆ.
ಹೆಗ್ಗೂರು ಗ್ರಾಮದ ಆರಾಧ್ಯ ದೈವ ಸಂಜೀವ ಮೂರ್ತಿ ದೇವಸ್ಥಾನ ಉರ್ಫ್ ಆಂಜನೇಯನ ದೇವಸ್ಥಾನದ ಸುತ್ತ ಭಂಡಾರದ ಪುಡಿ ಲಭ್ಯವಾಗಿದೆ.
ಸ್ಥಳೀಯರ ಮಾಹಿತಿ ಪ್ರಕಾರ ಕಳೆದ ದಿನ ಸೆ.12.ರ ಸಂಜೆ ಹೊತ್ತು ಕೆಲ ಹೊತ್ತು ಮಳೆ ರೂಪದಲ್ಲಿ ಭಂಡಾರ ಸಿಂಪರಣೆ ಆಗಿದೆ. ಇದನ್ನ ಕಣ್ಣಾರೆ ನೋಡಿದ್ದಾಗಿ ಗ್ರಾಮದ ಹಿರಿಯ ಜೀವಿ ತೊಂಭತ್ತು ವರ್ಷದ ಸಿದ್ದವ್ವ ಎನ್ನುವ ವಯೋವೃದ್ಧರು ಹೇಳಿಕೊಂಡಿದ್ದಾರೆ.
ದೇವಸ್ಥಾನಕ್ಕೆ ಇಂದು ಬೆಳಿಗ್ಗೆ ದೇವರ ದರ್ಶನಕ್ಕೆ ಆಗಮಿಸಿದ ಭಕ್ತರು ಕೂಡ ದೇವಸ್ಥಾನದ ಸುತ್ತ ಸಿಂಪರಣೆಯಾಗಿರುವ ಭಂಡಾರವನ್ನು ಕಂಡು ಆಶ್ಚರ್ಯ ಚಕಿತರಾಗಿದ್ದಾರೆ.
ಹಣೆ ಮೇಲೆ ಹಚ್ಚಿಕೊಂಡು ಭಾವಪರವಶರಾಗಿದ್ದಾರೆ. ಈ ಗ್ರಾಮಸ್ಥರು ತಮ್ಮ ಹಳೆ ಹೆಗ್ಗೂರು ಗ್ರಾಮ ಮುಳುಗಡೆ ಕಂಡ ಬಳಿಕ ಈಗ ಈ ಹೊಸ ಹೆಗ್ಗೂರು ಗ್ರಾಮವಾಗಿ ಪುನರ್ ನಿರ್ಮಾಣಗೊಂಡಿದ್ದು,ಹಳೆ ಊರು ಮುಳುಗಿದ ಬಳಿಕ ಎಲ್ಲ ಗ್ರಾಮಸ್ಥರು ಸ್ಥಳಾಂತರಗೊಂಡಿದ್ದಾರೆ.
ಈ ದೇವಸ್ಥಾನ ಜಾಗೃತ ದೇವಸ್ಥಾನವಾಗಿದೆ ಎಂಬುದು ಭಕ್ತರ ನಂಬಿಕೆ.ಸುತ್ತ ಹತ್ತು ಗ್ರಾಮಗಳ ಜನರು ಕೂಡ ಈ ಸಂಜೀವ ಮೂರ್ತಿ ದೇವಸ್ಥಾನಕ್ಕೆ ನಡೆದುಕೊಳ್ಳುತ್ತಾರೆ.
ಗ್ರಾಮದ ರಕ್ಷಕ ಎನ್ನುವ ನಂಬಿಕೆ ಇದೆ. ಹೀಗಾಗಿ ಸಧ್ಯ ದೇವಸ್ಥಾನದ ಸುತ್ತ ನಿನ್ನೆ ಸಂಜೆ ಮಳೆ ರೂಪದಲ್ಲಿ ಸಿಂಪರಣೆಯಾಗಿರುವ ಭಂಡಾರ ಎಲ್ಲರಲ್ಲಿ ಆಶ್ಚರ್ಯವನ್ನುಂಟು ಮಾಡಿದೆ.
ಈ ಕುರಿತು ಸ್ಥಳೀಯ ಭಕ್ತ ಕೆಂಚಪ್ಪ ಅವರು ಕೂಡ ದೇಸ್ಥಾನದ ಸುತ್ತ ನೋಡಿದಾಗ ಭಂಡಾರ ದೊರೆತಿದ್ದು ಇದು ಮಳೆ ಸಿಂಪರಣೆಯಾಗಿದೆ. ಇದು ಒಳ್ಳೆಯದಕ್ಕಾಗಿದೆ ಎನ್ನುವುದು ಭಕ್ತರ ನಂಬಿಕೆಯಾಗಿದೆ. ಇದೆಲ್ಲದರ ನಡುವೆ ಹೀಗೂ ಸಾಧ್ಯಾನಾ ಎನ್ನುವ ಪ್ರಶ್ನೆ ಕಾಡುತ್ತೆ. ಇದು ಮಾನವ ನಿರ್ಮಿತವೇ ಅಥವಾ ನಿಜವಾಗಲೂ ಮಳೆ ರೂಪದಲ್ಲಿ ಭಂಢಾರ ಸಿಂಪರಣೆಯಾಗಿದೆ ಎನ್ನುವುದು ಮಾತ್ರ ನಿಗೂಢವಾಗಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande