ಅಕ್ರಮ ಗಣಿಗಾರಿಕೆ ಸಂಪತ್ತು ವಸೂಲಾತಿ ಆಯುಕ್ತರ ನೇಮಕಕ್ಕೆ ಗೆಜೆಟ್ : ಸಚಿವ ಎಚ್ ಕೆ ಪಾಟೀಲ
ಗದಗ, 10 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಯಿಂದ ಉತ್ಪತ್ತಿಯಾದ ಅಂದಾಜು 78 ಸಾವಿರ ಕೋಟಿ ಮೊತ್ತವನ್ನು ವಸೂಲಿ ಮಾಡಲು ರಾಜ್ಯ ಸರ್ಕಾರ ಸೆ.9 ರಂದು ಗೆಜೆಟ್ ಹೊರಡಿಸಿದೆ. ಸರ್ಕಾರದ ಕಾರ್ಯದರ್ಶಿ ಸಮಾನಾಂತರ ಅಧಿಕಾರಿಯನ್ನು ಆಯುಕ್ತರಾಗಿ ನೇಮಕ ಮಾಡಲಾಗುವುದು ಎಂದು ಕಾನೂನು
ಪೋಟೋ


ಗದಗ, 10 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಯಿಂದ ಉತ್ಪತ್ತಿಯಾದ ಅಂದಾಜು 78 ಸಾವಿರ ಕೋಟಿ ಮೊತ್ತವನ್ನು ವಸೂಲಿ ಮಾಡಲು ರಾಜ್ಯ ಸರ್ಕಾರ ಸೆ.9 ರಂದು ಗೆಜೆಟ್ ಹೊರಡಿಸಿದೆ. ಸರ್ಕಾರದ ಕಾರ್ಯದರ್ಶಿ ಸಮಾನಾಂತರ ಅಧಿಕಾರಿಯನ್ನು ಆಯುಕ್ತರಾಗಿ ನೇಮಕ ಮಾಡಲಾಗುವುದು ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಗದಗ ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆ ಮತ್ತು ಅಪರಾಧ ಉತ್ಪತ್ತಿಯಿಂದ ಸ್ವತ್ತು ವಸೂಲಾತಿ ಮತ್ತು ಜಪ್ತಿಗೆ ಆಯುಕ್ತರ ನೇಮಕದ ಕುರಿತು ಗೆಜೆಟ್ ಹೊರಡಿಸಲಾಗಿದೆ. ಆಯುಕ್ತರ ನೇಮಕ ಕುರಿತು ವಿಧಾನಸಭೆ ಮತ್ತು ವಿಧಾನ ಪರಿಷತ್ ನಲ್ಲಿ ಮಸೂದೆ ಮಂಡನೆ ಆಗಿತ್ತು. ಸೆ.9 ರಂದು ಮಂಗಳವಾರ ರಾಜ್ಯಪಾಲರು ಮಸೂದೆ ಕರಡು ಪ್ರತಿಗೆ ಅಂಕಿತ ಹಾಕಿದ್ದಾರೆ. ತದ ನಂತರ ಸರ್ಕಾರ ಶ್ರೀಘ್ರದಲ್ಲಿ ಗೆಜೆಟ್ ಹೊರಡಿಸಿದೆ. ಈ ಕಾನೂನಿಂದ ಆಥಿರ್ಕ ಶಿಸ್ತು ಪಾಲನೆ ಮಾಡಿದಂತೆ ಆಗುತ್ತದೆ ಎಂದರು.

ರಾಜ್ಯದಲ್ಲಿ 2009 - 10ರ ಅವಧಿಯಲ್ಲಿ 12000 ಕೋಟಿ ರೂ. ಮೊತ್ತದ ಅಕ್ರಮ ಗಣಿಗಾರಿಕೆ ನಡೆದಿದೆ ಎಂದು ಅಂದಾಜಿಸಲಾಗಿತ್ತು. ಪ್ರಸ್ತುತ ಅಕ್ರಮ ಗಣಿ ಸಂಪತ್ತಿನ ಬೆಲೆ 78000 ಕೋಟಿ ರೂ. ಆಗಬಹುದು ಎಂದು ಸಚಿವ ಸಂಪುಟ ಸಭೆಯಲ್ಲಿ ಅಂದಾಜಿಸಲಾಗಿತ್ತು. ಈಗ ಒಂದು ಲಕ್ಷ ಕೋಟಿಗೂ ಅಧಿಕ ಸಂಪತ್ತು ಲೂಟಿ ಆಗಿದೆ ಎಂದು ಆರೋಪಿಸಿದರು.

ಅಕ್ರಮ ಗಣಿ ಸಂಪತ್ತು ವಸೂಲಾತಿಗಾಗಿ ಕಳೆದ ಜು. 5 ರಂದು ಸಚಿವ ಸಂಪುಟದ ಉಪ ಸಮಿತಿ ಅಧ್ಯಕ್ಷನಾಗಿ ನನ್ನನ್ನು ನೇಮಕ ಮಾಡಲಾಗಿತ್ತು. ಅದರ ಭಾಗವಾಗಿ ಆ. 8 ರಂದು ಸಮಿತಿಯು ವರದಿ ರ್ಪೂಣ ಗೊಳಿಸಿ ಆ. 12ಕ್ಕೆ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು. ಆ.14 ರಂದು ಸಚಿವ ಸಂಪುಟ ಸಭೆಯಲ್ಲಿ ವರದಿ ಯಥಾವತ್ತಾಗಿ ಸ್ವೀಕರಿಸಲಾಯಿತು. ಮುಂದುವರಿದು ಈಗ ಗೆಜೆಟ್ ಪ್ರಕಟನೆಗೊಂಡು ಕಾನೂನು ಜಾರಿ ಆಗಿದೆ ಎಂದರು.

ಈ ವೇಳೆ ಇಂಧನ ಸಚಿವ ಕೆ.ಜೆ. ಜಾರ್ಜ, ಶಾಸಕ ಜಿ.ಎಸ್. ಪಾಟೀಲ, ಮಾಜಿ ಶಾಸಕ ಡಿ ಆರ್ ಪಾಟೀಲ, ಬಿ.ಬಿ. ಅಸೂಟಿ ಇತರರು ಇದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande