ಕೈ ಗಡಿಯಾರ ವಿಚಾರ ! ವಿದ್ಯಾರ್ಥಿ ಸಾವು
ವಿಜಯಪುರ, 07 ಆಗಸ್ಟ್ (ಹಿ.ಸ.) : ಆ್ಯಂಕರ್ : 5ನೇ ತರಗತಿ ಬಾಲಕನ ಮೇಲೆ 9ನೇ ತರಗತಿ ಬಾಲಕರಿಂದ ಹಲ್ಲೆಗೈದು ತದನಂತರ 5 ದಿನಗಳ ಬಳಿಕ‌ ಬಾಲಕ ಅಸುನೀಗಿರುವ ಘಟನೆ ವಿಜಯಪುರ ತಾಲೂಕಿನ ಯೋಗಾಪೂರ ಗ್ರಾಮದಲ್ಲಿ ನಡೆದಿದೆ. 5ನೇ ತರಗತಿ ಬಾಲಕ ಅನ್ಸ್ (11) ಸಾವು. ಬಿಹಾರ್ ಮೂಲದ ಸುನೀಲ್ ಪುತ್ರ ಅನ್ಸ್ ಸಾವನ್ನಪ್ಪ
ಹಲ್ಲೆ


ವಿಜಯಪುರ, 07 ಆಗಸ್ಟ್ (ಹಿ.ಸ.) :

ಆ್ಯಂಕರ್ : 5ನೇ ತರಗತಿ ಬಾಲಕನ ಮೇಲೆ 9ನೇ ತರಗತಿ ಬಾಲಕರಿಂದ ಹಲ್ಲೆಗೈದು ತದನಂತರ 5 ದಿನಗಳ ಬಳಿಕ‌ ಬಾಲಕ ಅಸುನೀಗಿರುವ ಘಟನೆ ವಿಜಯಪುರ ತಾಲೂಕಿನ ಯೋಗಾಪೂರ ಗ್ರಾಮದಲ್ಲಿ ನಡೆದಿದೆ.

5ನೇ ತರಗತಿ ಬಾಲಕ ಅನ್ಸ್ (11) ಸಾವು. ಬಿಹಾರ್ ಮೂಲದ ಸುನೀಲ್ ಪುತ್ರ ಅನ್ಸ್ ಸಾವನ್ನಪ್ಪಿದ್ದಾನೆ. ಇನ್ನು ತಡರಾತ್ರಿ ಶ್ರೀಸತ್ಯ ಸಾಯಿಬಾಬಾ ಶಾಲೆಯ ಎದುರು ಶವ ಇಟ್ಟು ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ.

ಶಾಲಾ ಆಡಳಿತ ಮಂಡಳಿ ನಿರ್ಲಕ್ಷ್ಯಕ್ಕೆ ಸಾವು ಎಂದು ಕುಟುಂಬಸ್ಥರ ಆರೋಪಿಸಿ, ಆಕ್ರೋಶ ವ್ಯಕ್ತಪಡಿಸಿದರು.

ಕುಟುಂಬಸ್ಥರ ಪ್ರತಿಭಟನೆಗೆ ಸ್ಥಳೀಯರ ಸಾತ್ ನೀಡಿದ್ದರು. ಅಲ್ಲದೇ, 5 ದಿನಗಳ ಹಿಂದೆ ಕೈಗಡಿಯಾರಕ್ಕಾಗಿ ಗಲಾಟೆ ಆಗಿದೆ. ಅನ್ಸ್ ಕಯ್ಯಲ್ಲಿ ವಾಚ್ ಗಾಗಿ ಗಲಾಟೆ ಆಗಿದ್ದು, ಅನ್ಸ್‌ನನ್ನ ಥಳಿಸಿ ವಾಚ್ ಕಿತ್ತುಕೊಂಡಿದ್ದ 9ನೇ ತರಗತಿಯ ಮೂವರು ವಿದ್ಯಾರ್ಥಿಗಳು.‌ ಹಲ್ಲೆ ಬಳಿಕ ಅಸ್ವಸ್ಥಗೊಂಡಿದ್ದ ಅನ್ಸ್‌ನ್ನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ಕುಟುಂಬಸ್ಥರು.

ನಿಮ್ಮ‌ ಮಗ ಸತ್ತಿದ್ದಾನಾ ಎಂದು ಅನ್ಸ್ ತಂದೆ ತಾಯಿಯನ್ನ ಬೈದು‌ ಕಳಿಸಿದ್ದ ಶಾಲಾ ಮುಖ್ಯಸ್ಥರು.‌ ಈಗ ಬಾಲಕ‌ ಸತ್ತ ಬಳಿಕ ಶವ ಇಟ್ಟು ಶಾಲಾ‌ ಆಡಳಿತ ಮಂಡಳಿ ನಿರ್ಲಕ್ಷ್ಯಕ್ಕೆ ಸಾವು ಎಂದು ಆಕ್ರೋಶ ಹೊರಹಾಕಿದ್ದಾರೆ.

ಸ್ಥಳಕ್ಕೆ ಡಿವೈಎಸ್ಪಿ ಬಸವರಾಜ್ ಯಲಿಗಾರ್, ಗಾಂಧಿ ಸಿಪಿಐ ಮಲ್ಲಯ್ಯ ಮಠಪತಿ ಭೇಟಿ ಪರಿಶೀಲನೆ ನಡೆಸಿ, ಕುಟುಂಬಸ್ಥರ ಮನವೊಲಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande