ಗದಗ, 24 ಆಗಸ್ಟ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯ ಶಿರಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ಭಬ್ಬಿ ಮತ್ತು ಬನ್ನಿಕೊಪ್ಪ ಗ್ರಾಮಗಳಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಅಂತರರಾಜ್ಯ ಗ್ಯಾಂಗ್ ಕಳ್ಳರನ್ನು ಶಿರಹಟ್ಟಿಯ ಪೊಲೀಸರು ಬಂಧಿಸಿದ್ದಾರೆ.
ಶಿರಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ಛಬ್ಬಿ ಮತ್ತು ಬನ್ನಿಕೊಪ್ಪ ಗ್ರಾಮದಲ್ಲಿ ಕೃಷ್ಣಪ್ಪ ನೇಮಪ್ಪ ಲಮಾಣಿ ಮತ್ತು ಬನ್ನಿಕೊಪ್ಪ ಗ್ರಾಮದ ಶಾರದಾ ಕುಬೇರಪ್ಪ ಸೊರಟೂರ ಇವರ ಮನೆಯ ಬಾಗಿಲುಗಳ ಬೀಗ ಮುರಿದು ಎರಡೂ ಮನೆಗಳಲ್ಲಿ ಇಟ್ಟಿದ್ದ ಒಟ್ಟು 50 ಗ್ರಾಂ ಬಂಗಾರದ ಆಭರಣಗಳನ್ನು ಮತ್ತು 700 ಗ್ರಾಂ ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿತ್ತು.
ಆರೋಪಿಗಳ ಪತ್ತೆಗೆ ಎಸ್‌ಪಿ ರೋಹನ್ ಜಗದೀಶ, ಉಪಾಧೀಕ್ಷಕ ಮುರ್ತುಜಾ ಖಾದ್ರಿ,ಮಹಾಂತೇಶ ಸಜ್ಜನ, ಶಿರಹಟ್ಟಿ ಸಿಪಿಐ ನಾಗರಾಜ ಮಾಡಳ್ಳಿ ನೇತೃತ್ವದಲ್ಲಿ ತಂಡ ರಚನೆ ಮಾಡಿ ಆರೋಪಿತರ ಪತ್ತೆ ಕಾರ್ಯ ಕೈಗೊಳ್ಳಲಾಗಿತ್ತು.
ತಂಡವು ಆ.11ರಂದು ಬೆಳಿಗ್ಗೆ ಶಿರಹಟ್ಟಿ ಹೊರವಲಯದ ವರವಿ ರಸ್ತೆಯಲ್ಲಿ ಆರೋಪಿತರ ಪತ್ತೆ ಕಾರ್ಯದಲ್ಲಿ ನಿರತರಾಗಿದ್ದಾಗೆ ಒಂದು ಕಾರ್ ಬಂದಿದ್ದು, ಪೊಲೀಸ್ ಜೀಪನ್ನು ನೋಡಿ ಕಾರ್ ಚಾಲಕ ಅನುಮಾನಾಸ್ಪದ ರೀತಿಯಲ್ಲಿ ನಡೆದುಕೊಂಡಾಗ ಕಾರ್‌ನ್ನು ಬೆನ್ನತ್ತಿ ಹಿಡಿದು ಕಾರಿನಲ್ಲಿದ್ದ ಮೂವರನ್ನು ವಿಚಾರಣೆ ನಡೆಸಿದಾಗ ಸಮರ್ಪಕ ಉತ್ತರ ನೀಡಿರಲಿಲ್ಲ.
ಕಾರನ್ನು ಶೋಧಿಸಿದಾಗ ಕೆಲ ಆಭರಣಗಳು ಪತ್ತೆಯಾಗಿದ್ದವು. ಆರೋಪಿಗಳನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ ಸಂದರ್ಭದಲ್ಲಿ ವಾಲ್ಮೀಕಿ ತಂದೆ ರಾಂಭೋ ಶೇಖಾವತ್, ಕಂಟ್ಯಾ ತಂದೆ ವಿಜಯ ರಾಠೋಡ, ಕರಣ ತಂದೆ ಭಗತ್ ಶೇಖಾವತ್ ಇವರಿಂದ ಛಬ್ಬಿ ಮತ್ತು ಬನ್ನಿಕೊಪ್ಪ ಗ್ರಾಮದ ಎರಡು ಮನೆಗಳಲ್ಲಿ ಕಳುವಾಗಿದ್ದ 50 ಗ್ರಾಂ ಬಂಗಾರ ಮತ್ತು 700 ಗ್ರಾಂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣದಲ್ಲಿ ಆರೋಪಿತರನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದ ಶಿರಹಟ್ಟಿ ಸಿಪಿಐ ನಾಗರಾಜ ಮಾಡಳ್ಳಿ, ಮಹಿಳಾ ಠಾಣೆಯ ಪಿಐ ಎಲ್.ಕೆ. ಜೂಲಕಟ್ಟಿ, ಲಕ್ಷ್ಮೀಶ್ವರ ಪಿಎಸ್‌ಐ ನಾಗರಾಜ ಗಡಾದ, ಟಿ.ಕೆ. ರಾಠೋಡ, ಸಿಬ್ಬಂದಿಗಳಾದ ಆರ್.ಎಸ್. ಯರಗಟ್ಟಿ, ಎಸ್.ಸಿ. ಕಪ್ಪತ್ತನವರ, ಎಂ.ಎ. ಶೇಖ, ಆನಂದ ಕಮ್ಮಾರ, ಸಿ.ಎಸ್. ಮಠಪತಿ, ಡಿ.ಎಸ್. ನದಾಫ್, ಹೆಚ್.ಐ. ಕಲ್ಲಣ್ಣವರ, ಪಾಂಡುರಂಗರಾವ್ ಸೋಮು ವಾಲ್ಮೀಕಿ, ವಿದ್ಯಾ ಹದ್ದಿ, ಶಿರಹಟ್ಟಿ ಪಿಎಸ್‌ಐ ಚನ್ನಯ್ಯ ದೇವೂರ, ಎಸ್.ಟಿ. ಕಡಬಿನ, ಎಎಸ್‌ಐ ಮಹಾವೀರ ಸದರನ್ನವರ, ಸಿಬ್ಬಂದಿಗಳಾದ ಸೋಮಶೇಖರ ರಾಮಗೇರಿ, ಹನುಮಂತ ದೊಡ್ಡಮನಿ, ಬಸವರಾಜ ಮುಳಗುಂದ, ಚರಂತಯ್ಯ ಗುಂಡೂರಮಠ, ರಾಜೇಶ ವೀರಾಪೂರ, ಠಾಕಪ್ಪ ಕಾರಭಾರಿ, ಆನಂದಸಿಂಗ್ ದೊಡ್ಡಮನಿ, ಜಾಫರ್ ಬಚ್ಚೇರಿ, ಮೆಹಬೂಬ ವಡ್ಡಟ್ಟಿ, ಗುರು ಬೂದಿಹಾಳ, ಸಂಜು ಕೊರಡೂರ ಇವರುಗಳ ಕಾರ್ಯಕ್ಕೆ ಎಸ್‌ಪಿ ರೋಹನ್ ಜಗದೀಶ ಮೆಚ್ಚುಗೆ ವ್ಯಕ್ತಪಡಿಸಿ ಬಹುಮಾನ ಘೋಷಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP