ಕೋಲಾರ, ೧೨.ಆಗಸ್ಟ್ (ಹಿ,ಸ. ) ಆಂಕರ್
ಆ್ಯಂಕರ್ : ಕೋಲಾರ ತಾಲ್ಲೂಕಿನ ಸುಗಟೂರು ಹೋಬಳಿಯ ಚಿಟ್ನಹಳ್ಳಿ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ರೇಷ್ಮೇ ಕೃಷಿ ಮಹಾವಿದ್ಯಾಲಯ ಚಿಂತಾಮಣಿಯ ಅಂತಿಮ ವರ್ಷದ ಬಿ, ಎಸ್ಸಿ(ಆನ್ಸ್) ಕೃಷಿ ವಿಧ್ಯಾರ್ಥಿಗಳಿಂದ ಹಮ್ಮಿಕೊಂಡಿರುವ ಗ್ರಾಮೀಣ ಕೃಷಿ ಕಾರ್ಯಾನುಭವ-೨೦೨೫-೨೬ ಶಿಬಿರದಡಿ, ಸಾವಯವ ಕೃಷಿ ಮತ್ತು ಪೋಷಕಾಂಶಗಳ ನಿರ್ವಹಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಾವಯವ ಕೃಷಿ ಎಂದರೇನು ಮತ್ತೆ ಸಾವಯವ ಕೃಷಿಯ ಕೃಷಿ ಮಹತ್ವದ ಬಗ್ಗೆ ತಿಳಿಸಿಕೊಟ್ಟರು.
ಸಾವಯುವ ಕೃಷಿಯ ಉತ್ಪನ್ನಗಳು ಮಾರುಕಟ್ಟೆಯಲ್ಲಿ ೨೦-೩೦% ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದು. ರಾಸಾಯನಿಕ ಅವಶೇಷಗಳನ್ನು ಭೂಮಿಯಲ್ಲಿ ದೂರಮಾಡುವುದರಿಂದ ಮಾನವ ಮತ್ತು ಪಶುಗಳ ಆರೋಗ್ಯವನ್ನು ಕಾಪಾಡಬಹುದು. ಮಣ್ಣಿನ ಫಲವತ್ತತೆ ಕಳೆದುಕೊಳ್ಳದೆ ದೀರ್ಘಕಾಲದ ಉತ್ಪಾದಕತೆಯನ್ನು ಕಾಪಾಡುತ್ತದೆ ಎಂದು ಅರಿವು ಮೂಡಿಸಿದರು.
ಜಲಾಶಯಗಳಲ್ಲಿ ಮಾಲಿನ್ಯ ಉಂಟಾಗುವ ಸಾಧ್ಯತೆ ಕಡಿಮೆಯಾಗುತ್ತದೆ. ರಾಸಾಯನಿಕ ಗೊಬ್ಬರಗಳ ಬದಲಾಗಿ ಸಾವಯವ ಉತ್ಪನ್ನಗಳಾದ ಬೀಜಾಮೃತ, ಜೀವಾಮೃತ, ಪಂಚಗವ್ಯ, ದಶಗವ್ಯ ಗಳನ್ನು ಬಳಸುವುದಾಗಿ ಹೇಳಿದರು. ಮತ್ತು ಅವುಗಳನ್ನು ಹೇಗೆ ತಯಾರಿಸುವುದೆಂದು ತೋರಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಬೇಸಾಯ ಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಟಿ.ಜಿ.ಅಮೃತ ಮಾತನಾಡಿ, ರೈತರಿಗೆ ತಿಪ್ಪೇ ಗೊಬ್ಬರಗಳ ಕೊರತೆ ಇದ್ದಲ್ಲಿ ಹಸಿರೆಲೆ ಗೊಬ್ಬರವಾದ ಸೆಣಬು ಬೆಳೆಯುವುದರಿಂದ ಪೋಷಕಾಂಶಗಳ ಕೊರತೆಯನ್ನು ನೀಗಿಸಬಹುದು. ಮತ್ತು ಸಾವಯವ ಕೃಷಿಯ ದೃಢೀಕರಣ ಪತ್ರವನ್ನು ತೆಗೆದುಕೊಳ್ಳುವುದು ಹೇಗೆ ಎಂದು ತಿಳಿಸಿಕೊಟ್ಟರು.
ತೋಟಗಾರಿಕಾ ಸಹಾಯಕ ನಿರ್ದೇಶಕ ನವೀನ್ ಕುಮಾರ್, ರೈತರಾದ ನಾಗರಾಜ ಸಾವಯುವ ಕೃಷಿಯ ಬಗ್ಗೆ ಸಾಕಷ್ಟು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ರೈತರಾದ ಮುನಿವೆಂಕಟರೆಡ್ಡಿ, ಪುರುಷೋತ್ತಮ, ಚಂದ್ರಶೇಖರ್ ಅಧ್ಯಕ್ಷರು ಹಾಲು ಒಕ್ಕೂಟ ಚಿಟ್ನಹಳ್ಳಿ, ನಾರಾಯಣಸ್ವಾಮಿ, ಸೊಣ್ಣೇಗೌಡ ಹಾಗೂ ವಿದ್ಯಾರ್ಥಿಗಳಾದ ಸೋಹನ್, ಸೃಜನ್, ಸಿದ್ದುಬಾ, ವಿಷ್ಣುತೇಜ್, ಸುಹಾನ್, ಸುನಿಲ್ ಕುಮಾರ್, ಸನತ್ ಕುಮಾರ್, ಶ್ರೇಯಾ, ಸ್ಪೂರ್ತಿ, ಸೋನುಪ್ರಿಯ, ಶ್ವೇತಾ ಶಾಂತಲಾ, ಶ್ವೇತಾ ಎನ್ ಆರ್, ಸ್ಮಿತಾ ಇದ್ದರು.
ಚಿತ್ರ : ಕೋಲಾರ ತಾಲ್ಲೂಕಿನ ಸುಗಟೂರು ಹೋಬಳಿಯ ಚಿಟ್ನಹಳ್ಳಿ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾನಿಲಯದ ವಿಧ್ಯಾರ್ಥಿಗಳು ರೈತರಿಗೆ ಸಾವಯವ ಕೃಷಿ ಮತ್ತು ಪೋಷಕಾಂಶಗಳ ನಿರ್ವಹಣೆ ಕುರಿತು ಅರಿವು ಮೂಡಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್