ನವದೆಹಲಿ, 11 ಆಗಸ್ಟ್ (ಹಿ.ಸ.) :
ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ನವದೆಹಲಿಯ ಬಾಬಾ ಖರಕ್ ಸಿಂಗ್ ಮಾರ್ಗದಲ್ಲಿ ಸಂಸದರ ವಸತಿಗಾಗಿ ನಿರ್ಮಿಸಲಾದ 184 ನೂತನ ಬಹುಮಹಡಿ ಕಟ್ಟಡವನ್ನು ಉದ್ಘಾಟಿಸಿದರು.
ಸಂಸದರ ವಸತಿ ಸಮಸ್ಯೆ ನಿವಾರಣೆ ಮತ್ತು ಸರ್ಕಾರಿ ವೆಚ್ಚ ಕಡಿತಗೊಳಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಕೃಷ್ಣ, ಗೋದಾವರಿ, ಕೋಸಿ, ಹೂಗ್ಲಿ ಎಂಬ ನದಿಗಳ ಹೆಸರಿನ ನಾಲ್ಕು ಗೋಪುರಗಳಲ್ಲಿ 180 ಕ್ಕೂ ಹೆಚ್ಚು ಸಂಸದರು ವಾಸಿಸಲು ವ್ಯವಸ್ಥೆಯಿದೆ. 2014 ನಂತರ ಮಿಷನ್ ಮೋಡ್‌ನಲ್ಲಿ 350 ಕ್ಕೂ ಹೆಚ್ಚು ವಸತಿ ಘಟಕಗಳು ನಿರ್ಮಾಣವಾಗಿದ್ದು, ಸಾರ್ವಜನಿಕ ಹಣ ಉಳಿತಾಯವಾಗಿದೆ ಎಂದು ಪ್ರಧಾನಿ ತಿಳಿಸಿದರು.
ಸುಸ್ಥಿರ ಅಭಿವೃದ್ಧಿ ಮಾನದಂಡಗಳನ್ನು ಅನುಸರಿಸಿದ ಈ ಸಂಕೀರ್ಣವು ಸ್ವಚ್ಛತೆ ಮತ್ತು ರಾಷ್ಟ್ರೀಯ ಏಕತೆಯ ಸಂಕೇತವಾಗಲಿದೆ ಎಂದು ಪ್ರಧಾನಿ ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa