ವಿಜಯಪುರ, 03 ಆಗಸ್ಟ್ (ಹಿ.ಸ.) :
ಆ್ಯಂಕರ್ : ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ವಿಜಯಪುರ ವತಿಯಿಂದ ಮಾಜಿ ಸೈನಿಕರಿಗೆ ಸ್ವ-ಉದ್ಯೋಗ ನಡೆಸಲು ಸೈನಿಕ ವಿಶ್ರಾಂತಿಗೃಹದಲ್ಲಿರುವ ಒಂದು ಮಳಿಗೆಯನ್ನು ಬಾಡಿಗೆ ಆಧಾರದ ಮೇಲೆ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಮಾಜಿ ಸೈನಿಕರು ಆಗಸ್ಟ್ 20ರೊಳಗಾಗಿ ಮಾರಾಟ ಮಳಿಗೆಗಳ ಹಂಚಿಕೆಗಾಗಿ ಗುರುತಿನ ಚೀಟಿ ಲಗತ್ತಿಸಿರುವ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರ ಕಚೇರಿ ಹಾಗೂ ದೂರವಾಣಿ ಸಂಖ್ಯೆ: 08352-250913 ಸಂಪರ್ಕಿಸಬಹುದಾಗಿದೆ ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande