ರಾಯಚೂರು, 09 ಜುಲೈ (ಹಿ.ಸ.) :
ಆ್ಯಂಕರ್ : ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದ ವ್ಯಾಪ್ತಿಯ ನಿರ್ಮಾಣ ಮತ್ತು ನಿರ್ವಹಣೆ ವಿಭಾಗದಿಂದ 33/11ಕೆವಿ ಜವಾಹರ ನಗರ ಸಬ್ ಸ್ಟೇಷನ್‍ನಲ್ಲಿ ನಿರ್ವಹಣಾ ಕಾಮಗಾರಿಯನ್ನು ಕೈಗೊಂಡ ಪ್ರಯುಕ್ತ ನಾಳೆ ಬೆಳಿಗ್ಗೆ 10 ರಿಂದ ಸಂಜೆ 06 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಕೋರಲಾಗಿದೆ.
ನಾಳೆ ಬೆಳಿಗ್ಗೆಯಿಂದ ಪಂಚಮುಖಿ ಕಾಲೋನಿ, ವಾಸವಿ ನಗರ, ಎನ್‍ಜಿಒ ಕಾಲೋನಿ, ನೀಲಕಂಠೇಶ್ವರ ನಗರ, ಎಕ್ಬಾಲ್ ನಗರ, ಅಂಬೇಡ್ಕರ್ ನಗರ, ಫಾರೂಕ್ ಅನ್ವರ್ ಕಂಪನಿ, ಅಯ್ಯ ಬೌಡಿ, ನವಾಬ ಗಡ್ಡಾ, ಗಾಜಗಾರ ಪೇಟೆ, ಹನುಮಾನ್ ಟಾಕೀಸ್, ನಗರೇಶ್ವರ ಟೆಂಪಲ್, ಜವಾಹರ ನಗರ ಸ್ಕೂಲ್, ಬೋಲಮಾನದೋಡ್ಡಿ ರೋಡ್, ವಿದ್ಯಾನಗರ, ವಾಸವಿ ನಗರ, ಎಲ್.ವಿ.ಡಿ ಕಾಲೇಜ್, ಜವಾಹರ ನಗರ, ಟೆಲೆಫೋನ್ ಎಕ್ಸೇಚೆಂಜ್, ರಾಯಚೂರು ವಾಣಿ, ತಿಮ್ಮಾಪೂರು ಪೇಟೆ, ಕೃಷ್ಣದೇವರಾಯ ನಗರ, ಶಂಕರಸಿಂಗ್ ಕಾಲೋನಿ, ಸೇಂಟ್ರಲ್ ಸ್ಕೂಲ್, ಮಾಣಿಕ ಪ್ರಭು ಲೇಔಟ್, ಡೆಂಟಲ್ ಕಾಲೇಜ್, ನವೋದಯ ಎಂಜನೀಯರಿಂಗ್ ಕಾಲೇಜ್, ವಿಜಯಲಕ್ಷ್ಮಿ ಲೇಔಟ್, ಲಕ್ಷ್ಮಣ ಲೇಔಟ್, ಅಮರಖೇಡ್ ಲೇಔಟ್, ಮಾಣಿಕ ನಗರ, ಗವರ್ನಮೆಂಟ್ ಪಾಲಿಟೆಕ್ನಿಕ್, ಐಟಿಐ ಕಾಲೇಜ್, ಸಾವಿತ್ರಿ ಕಾಲೋನಿ ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಹೆಚ್ಚಿನ ಮಾಹಿತಿಗಾಗಿ 24*7 ಗ್ರಾಹಕರ ಸೇವಾ ಕೇಂದ್ರದ ದೂರವಾಣಿ ಸಂಖ್ಯೆ: 08532-226386 ಅಥವಾ 08532-231999ಗೆ ಸಂಪರ್ಕಿಸುವಂತೆ ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದ ಕಾರ್ಯ ನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್