ಪ್ರಯಾಗ್‌ರಾಜ್, 09 ಜುಲೈ (ಹಿ.ಸ.) :
ಆ್ಯಂಕರ್ : ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಜಿಲ್ಲೆಯ ಮೇಜಾ ಠಾಣಾ ವ್ಯಾಪ್ತಿಯ ಬೆಡೌಲಿ ಗ್ರಾಮದ ಕೊಳವೊಂದರಲ್ಲಿ ಬುಧವಾರ ಬೆಳಿಗ್ಗೆ ನಾಲ್ವರು ಬಾಲಕರ ಶವಗಳು ಪತ್ತೆಯಾಗಿವೆ. ಮಂಗಳವಾರ ಸಂಜೆ ಕಾಣೆಯಾಗಿದ್ದ ಮಕ್ಕಳ ಶವಗಳು ಇಂದು ಬೆಳಗ್ಗೆ ಸ್ಥಳೀಯರ ಗಮನಕ್ಕೆ ಬಂದಿವೆ.
ಮೃತ ಮಕ್ಕಳನ್ನು ಹಿರಾ ಆದಿವಾಸಿ ಅವರ ಮಗ ಹುನಾರ್ (5) ಮತ್ತು ಮಗಳು ವೈನವಿ (4), ವಿಮಲ್ ಅವರ ಮಗ ಕಂಧ (5), ಹಾಗೂ ಸಂಜಯ್ ಆದಿವಾಸಿ ಅವರ ಮಗ ಕೇಸರಿ (4) ಎಂದು ಗುರುತಿಸಲಾಗಿದೆ. ಈ ಮಕ್ಕಳು ಮಂಗಳವಾರ ಸಂಜೆ ಆಟವಾಡಲು ಹೊದವರು ಹಿಂತಿರುಗಿರಲಿಲ್ಲ. ಕುಟುಂಬಸ್ಥರು ಹುಡುಕಾಟ ಆರಂಭಿಸಿದರೂ ಫಲವಿಲ್ಲದ ಕಾರಣ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.
ಸಹಾಯಕ ಪೊಲೀಸ್ ಆಯುಕ್ತ ಎಸ್.ಪಿ. ಉಪಾಧ್ಯಾಯ ಅವರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಬುಧವಾರ ಬೆಳಿಗ್ಗೆ ಗ್ರಾಮದ ಕೆರೆಯಲ್ಲಿ ಶವಗಳು ಪತ್ತೆಯಾಗಿವೆ. ಪೊಲೀಸರು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಪ್ರಕರಣದ ಬಗ್ಗೆ ಮುಂದಿನ ತನಿಖೆ ಆರಂಭಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa