ಡಿಜಿಟಲೀಕರಣದಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕ್ರಾಂತಿ : ಗುಡದಿನ್ನಿ
ವಿಜಯಪುರ, 09 ಜುಲೈ (ಹಿ.ಸ.) : ಆ್ಯಂಕರ್ : ಜಾಗತೀಕರಣದ ಪ್ರಸ್ತುತ ಸಂದರ್ಭದಲ್ಲಿ ವ್ಯವಹಾರಗಳು ಬಹುತೇಕ ಡಿಜಿಟಲೀಕರಣಗೊಂಡಿವೆ. ಹೀಗಾಗಿ ಡಿಜಿಟಲೀಕರಣದೀಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಭಾರಿ ಬದಲಾವಣೆ ಆಗಿದೆ. ತಾಂತ್ರೀಕರಣದ ಬದಲಾವಣೆಗೆ ತಕ್ಕಂತೆ ಬ್ಯಾಂಕಿಂಗ್ ಕ್ಷೇತ್ರದಲ್ಲೂ ಡಿಜಿಟಲ್ ಡಿಜಿಟಲೀಕರಣಕ್ಕೆ ಒ
ಡಿಜಿಟಲ್‌


ವಿಜಯಪುರ, 09 ಜುಲೈ (ಹಿ.ಸ.) :

ಆ್ಯಂಕರ್ : ಜಾಗತೀಕರಣದ ಪ್ರಸ್ತುತ ಸಂದರ್ಭದಲ್ಲಿ ವ್ಯವಹಾರಗಳು ಬಹುತೇಕ ಡಿಜಿಟಲೀಕರಣಗೊಂಡಿವೆ. ಹೀಗಾಗಿ ಡಿಜಿಟಲೀಕರಣದೀಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಭಾರಿ ಬದಲಾವಣೆ ಆಗಿದೆ. ತಾಂತ್ರೀಕರಣದ ಬದಲಾವಣೆಗೆ ತಕ್ಕಂತೆ ಬ್ಯಾಂಕಿಂಗ್ ಕ್ಷೇತ್ರದಲ್ಲೂ ಡಿಜಿಟಲ್ ಡಿಜಿಟಲೀಕರಣಕ್ಕೆ ಒಗ್ಗಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷರಾದ ರಾಜಶೇಖರ ಗುಡದಿನ್ನಿ ಅಭಿಪ್ರಾಯಪಟ್ಟರು.

ನಬಾರ್ಡ ಹಾಗೂ ವಿಜಯಪುರ ಜಿಲ್ಲಾ ಕೇಂದ್ರ ಸಹಾಕಾರಿ ಬ್ಯಾಂಕ್ ಸಹಯೋಗದಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಕೇಂದ್ರ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಪ್ಯಾಕ್ಸುಗಳ ಮುಖ್ಯ ಕಾರ್ಯನಿವಾಹಣಾ ಅಧೀಕಾರಿಗಳಿಗೆ ಹಾಗೂ ಬ್ಯಾಂಕಿನ ಗ್ರಾಹಕರಿಗೆ ಎಂಪಿಒಎಸ್ ಮಶಿನ ವಿತರಣಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆಧುನಿಕತೆಗೆ ತಕ್ಕಂತೆ ಬದಲಾವಣೆಗೆ ಹೊಂದಿಕೊಳ್ಳುವುದು ಅನಿವಾರ್ಯವೂ ಹೌದು ಎಂದರು.

ಸರ್ಕಾರ ಹಾಗೂ ಬ್ಯಾಂಕುಗಳು ವ್ಯಾಪಾರ ವ್ಯವಹಾರಗಳಲ್ಲಿ ಪಾರದರ್ಶಕತೆ, ದಕ್ಷತೆ , ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು. ಗ್ರಾಹಕರಿಗೆ ಯಾವುದೇ ರೀತಿಯ ವಿಳಂಬವಿಲ್ಲದೇ ವೇಗವಾಗಿ ವ್ಯವಹಾರಿಕ ಸೇವೆ ನೀಡಬೇಕು. ರುಪೆ ಕಾರ್ಡಗಳ ಬಳಕೆಯಿಂದ ನಗದು ವರ್ಗಾವಣೆಯಲ್ಲಿ ಆಗಬಹುದಾದ ಅಪಾಯ ಮತ್ತು ಸಹವರ್ತಿಗಳ ವೆಚ್ಚ ಕಡಿಮೆ ಮಾಡಬಹುದು ಎಂದು ವಿವರಿಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ನಬಾರ್ಡ ಡಿಡಿಎಂ ವಿಕಾಸ ರಾಠೋಡ ಮಾತನಾಡಿ, ಎಂಪಿಒಎಸ್ ಮಸಿನ್ ಬಳಕೆ ಕುರಿತು ಬ್ಯಾಕಿಂಗ್ ಕ್ಷೇತ್ರದಲ್ಲಿರುವವರು ಅಗತ್ಯ ಜ್ಞಾನ ಹೊಂದಿರಬೇಕಿದೆ. ನಗದು ರಹಿತ ವ್ಯವಹಾರ, ಹಣ ವರ್ಗಾವಣೆ ಮತ್ತು ಮೊಬೈಲ್ ಆ್ಯಪ್ ಗಳ ಬಳಕೆ ಕುರಿತು ಅರಿವು ಹೊಂದಿರುವುದು ಅಗತ್ಯವಾಗಿದೆ ಎಂದರು.

ರೈತ ಜನರು ಬೀಜ, ಗೊಬ್ಬರ, ಕೀಟನಾಶಕ ಸೇರಿದಂತೆ ಕೃಷಿ ಹಾಗೂ ದೈನಂದಿನ ವ್ಯವಹಾರ, ವಸ್ತುಗಳನ್ನು ಖರೀದಿಸಲು ಅಂಗಡಿಗಳಲ್ಲಿಯ ಎಂಪಿಒಎಸ್ ಮಶಿನ್ ಉಪಯೋಗಿಸುವುದು ಸಾಮಾನ್ಯವಾಗಿದೆ. ಈಗಾಗಲೇ ನಬಾರ್ಡ ಸಹಾಯ ಧನದಲ್ಲಿ ಬ್ಯಾಂಕು ಮತ್ತು ಪ್ಯಾಕ್ಸುಗಳಿಗೆ ಮೈಕ್ರೋ ಎಟಿಎಮ್ ಒದಗಿಸಲಾಗಿದ್ದು, ಗ್ರಾಹಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಎಸ್.ಎ.ಢವಳಗಿ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಡಿಜಿಟಿಲೀಕರಣದ ಸಂದರ್ಭದಲ್ಲಿ ನಗದು ರಹಿತ ವ್ಯವಹಾರದ ವ್ಯವಸ್ಥೆಯಲ್ಲಿ ವಿಜಯಪುರ ಡಿಸಿಸಿ ಬ್ಯಾಂಕು ಇತರೆ ವಾಣಿಜ್ಯ ಬ್ಯಾಂಕುಗಳಿಗಿಂತ ಮುಂಚೂಣಿಯಲ್ಲಿದೆ. ಬ್ಯಾಂಕಿನ ಗ್ರಾಹಕರು ನಗದು ರಹಿತ ವ್ಯವಹಾರ ಮಾಡಿ, ಇದರ ಸದುಪಯೋಗ ಪಡೆಯುವಂತೆ ಮನವಿ ಮಾಡಿದರು.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಹುಲ್ಯಾಳ ಗ್ರಾಮದ ಹಂಸದ್ವನಿ ಜನಜಾಗೃತಿ ಗಾಮೀಣಾಭಿವೃಧ್ಧಿ ಸೇವಾ ಸಂಸ್ಥೆ ಕಲಾ ತಂಡದವರು ವಿಜಯಪುರ ಕೇಂದ್ರ ಸಹಕಾರಿ ಬ್ಯಾಂಕಿನಲ್ಲಿರುವ ಬ್ಯಾಂಕ್ ಹಾಗೂ ಸರ್ಕಾರದ ನಾನಾ ಯೋಜನೆಗಳು, ನಾನಾ ಸೇವೆಗಳು, ವಿವಿಧ ವಿಮೆ ಸೌಲಭ್ಯಗಳು ಹಾಗೂ ಡಿಜಿಟಲಿಕರಣದ ಕುರಿತಂತೆ ಮನವರಿಕೆ ಆಗುವ ರೀತಿಯಲ್ಲಿ ಸರಳ ರೀತಿಯಲ್ಲಿ ಕಿರು ನಾಟಕ ಪ್ರದರ್ಶಿಸಿದರು.

ಬ್ಯಾಂಕಿನ ಉಪ ಪ್ರಧಾನ ವ್ಯವಸ್ಥಾಪಕರಾದ ಸತೀಶ ಡಿ.ಪಾಟೀಲ ಸ್ವಾಗತಿಸಿದರು. ಎಮ್.ಜಿ.ಬಿರಾದಾರ ವಂದಿಸಿದರು. ಬ್ಯಾಂಕಿನ ಉಪ ಪ್ರಧಾನ ವ್ಯವಸ್ಥಾಪಕರಾದ ಎಸ್.ಬಿ.ಪಾಟೀಲ, ಪಿ.ವಾಯ್.ಡೆಂಗಿ, ಜೆ.ಬಿ.ಪಾಟೀಲ, ಆರ್.ಎಮ್.ಪಾಟೀಲ, ಐ.ಎಸ್.ಸಂಖ ಸೇರಿದಂತೆ ಜಿಲ್ಲೆಯ ಪ್ಯಾಕ್ಸುಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ವ್ಯಾಪಾರಿ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande