ಅಮರನಾಥ ಯಾತ್ರೆಗೆ ಜಮ್ಮುವಿನಿಂದ ತೆರಳಿದ 7,579 ಭಕ್ತರ ತಂಡ
ಜಮ್ಮು, 09 ಜುಲೈ (ಹಿ.ಸ.) : ಆ್ಯಂಕರ್ : ಬಿಗಿ ಭದ್ರತಾ ವ್ಯವಸ್ಥೆಯ ನಡುವೆ, 7579 ಯಾತ್ರಿಕರ ಎಂಟನೇ ತಂಡ ಇಂದು ಜಮ್ಮುವಿನಿಂದ ಅಮರನಾಥ ಗುಹೆ ಯಾತ್ರೆಗೆ ಹೊರಟಿದೆ. ಭಗವತಿ ನಗರದ ಯಾತ್ರಿ ನಿವಾಸ ಶಿಬಿರದಿಂದ ಈ ತಂಡ ಬೆಳಗ್ಗೆ 302 ವಾಹನಗಳಲ್ಲಿ ಪಯಣ ಶುರುಮಾಡಿದ್ದು, 5719 ಪುರುಷರು, 1577 ಮಹಿಳೆಯರು, 40 ಮ
ಅಮರನಾಥ ಯಾತ್ರೆಗೆ ಜಮ್ಮುವಿನಿಂದ ತೆರಳಿದ 7,579 ಭಕ್ತರ ತಂಡ


ಜಮ್ಮು, 09 ಜುಲೈ (ಹಿ.ಸ.) :

ಆ್ಯಂಕರ್ : ಬಿಗಿ ಭದ್ರತಾ ವ್ಯವಸ್ಥೆಯ ನಡುವೆ, 7579 ಯಾತ್ರಿಕರ ಎಂಟನೇ ತಂಡ ಇಂದು ಜಮ್ಮುವಿನಿಂದ ಅಮರನಾಥ ಗುಹೆ ಯಾತ್ರೆಗೆ ಹೊರಟಿದೆ. ಭಗವತಿ ನಗರದ ಯಾತ್ರಿ ನಿವಾಸ ಶಿಬಿರದಿಂದ ಈ ತಂಡ ಬೆಳಗ್ಗೆ 302 ವಾಹನಗಳಲ್ಲಿ ಪಯಣ ಶುರುಮಾಡಿದ್ದು, 5719 ಪುರುಷರು, 1577 ಮಹಿಳೆಯರು, 40 ಮಕ್ಕಳು, 167 ಸಾಧುಗಳು ಮತ್ತು 76 ಸಾಧ್ವಿಗಳು ಸೇರಿದ್ದಾರೆ.

ಈ ಪೈಕಿ 3031 ಯಾತ್ರಿಕರು ಬೆಳಿಗ್ಗೆ 3:25ಕ್ಕೆ ಬಾಲ್ಟಾಲ್ ಬೇಸ್ ಕ್ಯಾಂಪ್‌ಗೂ, ಉಳಿದ 4548 ಯಾತ್ರಿಕರು 3:40ಕ್ಕೆ ಪಹಲ್ಗಾಮ್ ಕ್ಯಾಂಪ್‌ಗೂ ತೆರಳಿದ್ದಾರೆ. ಅಲ್ಲಿ ವಿರಾಮದ ನಂತರ ಅವರು ಪವಿತ್ರ ಅಮರನಾಥ ಗುಹೆಯತ್ತ ಪಾದಯಾತ್ರೆ ಮುಂದುವರಿಸಲಿದ್ದಾರೆ.

ಅಧಿಕಾರಿಗಳ ಪ್ರಕಾರ, ಯಾತ್ರೆಯ ಆರಂಭದ ಆರು ದಿನಗಳಲ್ಲಿ ಈಗಾಗಲೇ 1.11 ಲಕ್ಷಕ್ಕೂ ಹೆಚ್ಚು ಯಾತ್ರಿಕರು ಪವಿತ್ರ ಗುಹೆಗೆ ದರ್ಶನ ಪಡೆದಿದ್ದಾರೆ. ಕೇವಲ ನಿನ್ನೆ ಒಂದೇ ದಿನದಲ್ಲಿ 18,000ಕ್ಕೂ ಹೆಚ್ಚು ಭಕ್ತರು ಗುಹೆಗೆ ಭೇಟಿ ನೀಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande