ಬೆಂಗಳೂರು, 08 ಜುಲೈ (ಹಿ.ಸ.) :
ಆ್ಯಂಕರ್ : ನಗರದ ತ್ಯಾಗರಾಜ್ ನಗರದ ಶ್ರೀ ಸಾಯಿ ಆದ್ಯಾತ್ಮಿಕ ಕೇಂದ್ರದ ಸಾಯಿ ಮಂದಿರದಲ್ಲಿ ಜುಲೈ 10 ರಂದು ಗುರು ಪೂರ್ಣಿಮೆ ಅಂಗವಾಗಿ ವಿಶೇಷ ಪೂಜೆ, ಧಾರ್ಮಿಕ - ಸಂಸ್ಕೃತಿಕ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿದೆ. ದೇವಸ್ಥಾನವನ್ನ ವಿಶೇಷವಾಗಿ ಹೂವುಗಳಿಂದ ಅಲಂಕರಿಸಲಾಗುವುದು.
ಅಂದು ಬೆಳಿಗ್ಗೆ 9 ಗಂಟೆಗೆ ವ್ಯಾಸ ಪೂಜೆ, ಸಂಜೆ 6 ಗಂಟೆಗೆ ಸತ್ಯನಾರಾಯಣ ಪೂಜೆ, ರಾತ್ರಿ ಶೇಜಾರತಿ ನಡೆಸಲಾಗುವುದು ದಿನಾಂಕ 12 ರಂದುಬೆಳಿಗ್ಗೆ 9 ರಿಂದ ರಾತ್ರಿ 9 ಗಂಟೆಯವರೆಗೆ ನಿರಂತರವಾಗಿ ಭಜನೆ ಕಾರ್ಯಕ್ರಮ ಹೆಮ್ಮಿಕೊಳ್ಳಲಾಗಿದೆ, ಇದರಲ್ಲಿ ಶ್ರೀ ಸಾಯಿ ಸ್ಮರಣ್ ಭಜನಾ ವೃಂದ, ಶ್ರೀ ಅನಂತ ಸಾಯಿ ಸಂಗೀತ ತಂಡ, ತಿಲಕ್ ಕಾರ್ತಿಕ್ ಶಿವ ಚರಣ್ ಮತ್ತು ವೃಂದ, ಸಾಯಿಗೀತಾ ಭಜನಾ ಮಂಡಳಿ, ಸಾಯಿ ಪಾದಾನಂದ ಬಾಲ ವಿಹಾರ ಕೇಂದ್ರ, ಸಾಯಿ ಅಧ್ಯಾತ್ಮಕ ಕೇಂದ್ರ ಇವರುಗಳು ನಿರಂತರ ಭಜನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಗುರುಪೂರ್ಣಿಮೆಯಂದು ಸುಮಾರು ಒಂದು ಲಕ್ಷ ಭಕ್ತರು ಆಗಿಮಿಸುವ ನಿರೀಕ್ಷೆ ಇದೆ.
ಪ್ರತಿ ದಿನ ಆರತಿ ತೀರ್ಥ ಪ್ರಸಾದ ವಿನಿಯೋಗ ಕಾರ್ಯಕ್ರಮ ಇದೆ, ಭಕ್ತರು ಈ ಎಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸದ್ಗುರು ಶ್ರೀ ಸಾಯಿ ಬಾಬಾ, ಶ್ರೀ ನರಸಿಂಹ ಸ್ವಾಮೀಜಿ, ಮತ್ತು ರಾಧಾಕೃಷ್ಣ ಸ್ವಾಮೀಜಿಯವರ ದಿವ್ಯಾನುಗ್ರಹಕ್ಕೆ ಪಾತ್ರರಾಗಲು ಆಡಳಿತ ಮಂಡಳಿಯ ಮುಖ್ಯಸ್ಥರು ಕೊರಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ