ವಿಜಯಪುರ, 08 ಜುಲೈ (ಹಿ.ಸ.) :
ಆ್ಯಂಕರ್ : ಬಿ. ಎಲ್. ಡಿ. ಇ ಸಂಸ್ಥೆಯ ಎ. ವಿ. ಎಸ್ ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆಯಲ್ಲಿ ಜುಲೈ 10 ರಂದು ಉಚಿತ ಅರೋಗ್ಯ ತಪಾಸಣೆ(Free BMD Test Camp) ಆಯೋಜಿಸಲಾಗಿದೆ.
ಈ ಉಚಿತ ಶಿಬಿರದಲ್ಲಿ ಕೀಲುಗಳಲ್ಲಿ ನೋವು, ಕೈ-ಕಾಲು ನೋವು, ಬೆನ್ನು ನೋವು, ಮೂಳೆಗಳಲ್ಲಿ ಕ್ಯಾಲ್ಸಿಯಂ ಕೊರತೆ (ಆಸ್ಟಿಯೊಫೋರೊಸಿಸ್) ಈ ಲಕ್ಷಣಗಳು ಇರುವವರಿಗೆ ಮೂಳೆಗಳ ಸಾಂಧ್ರತೆ ಮಾಪನ ಯಂತ್ರದಿಂದ (BMD ) ಉಚಿತ ತಪಾಸಣೆ ಮಾಡಲಾಗುವುದು.
35 ರಿಂದ 65 ವರ್ಷದೊಳಗಿನ ಸಾರ್ವಜನಿಕರು ಶಿಬಿರದ ಲಾಭ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 7975160825 ಮತ್ತು 9513397413 ನ್ನು ಸಂಪರ್ಕಿಸಬಹುದಾಗಿದೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ಅಶೋಕ ಪಾಟೀಲ ಅವರು ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande