ಅಮೃತ ಯೋಜನೆ ಕಾಮಗಾರಿಗಳ ಪರಿಶೀಲನೆ
ಹಾವೇರಿ, 05 ಜುಲೈ (ಹಿ.ಸ.) : ಆ್ಯಂಕರ್ : ಹಾವೇರಿ ಜಿಲ್ಲೆಯ ಶಿಗ್ಗಾಂವ ಹಾಗೂ ಸವಣೂರ ಪಟ್ಟಣಗಳಲ್ಲಿ ಅಮೃತ ಯೋಜನೆ-2 ಅಡಿಯಲ್ಲಿ ಕುಡಿಯುವ ನೀರು ಸರಬರಾಜು ಕಾಮಗಾರಿಗಳನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪರಿಶೀಲನೆ ನಡೆಸಿದರು. ಶಿಗ್ಗಾಂವಕ್ಕೆ ₹51.02 ಕೋಟಿ ಹಾಗೂ ಸವಣೂರಕ್ಕೆ ₹38.42 ಕೋಟಿ ಅನುದಾನ ಮಂಜೂ
Inspect


ಹಾವೇರಿ, 05 ಜುಲೈ (ಹಿ.ಸ.) :

ಆ್ಯಂಕರ್ : ಹಾವೇರಿ ಜಿಲ್ಲೆಯ ಶಿಗ್ಗಾಂವ ಹಾಗೂ ಸವಣೂರ ಪಟ್ಟಣಗಳಲ್ಲಿ ಅಮೃತ ಯೋಜನೆ-2 ಅಡಿಯಲ್ಲಿ ಕುಡಿಯುವ ನೀರು ಸರಬರಾಜು ಕಾಮಗಾರಿಗಳನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪರಿಶೀಲನೆ ನಡೆಸಿದರು. ಶಿಗ್ಗಾಂವಕ್ಕೆ ₹51.02 ಕೋಟಿ ಹಾಗೂ ಸವಣೂರಕ್ಕೆ ₹38.42 ಕೋಟಿ ಅನುದಾನ ಮಂಜೂರಾಗಿ ಕಾಮಗಾರಿಗಳು ಪ್ರಗತಿಯಲ್ಲಿ ಸಾಗಿವೆ.

ಅಮೃತ 2.0 ಯೋಜನೆಯು ಭಾರತವನ್ನು ಜಲ ಸುರಕ್ಷಿತ ರಾಷ್ಟ್ರವನ್ನಾಗಿ ಮಾಡಲು ಕಟಿಬದ್ಧವಾಗಿದೆ. ಈ ಯೋಜನೆ ಅಡಿಯಲ್ಲಿ ಪ್ರತಿ ಮನೆಗೆ 24x7 ನೀರು, ಶೇ.100 ಒಳಚರಂಡಿ ಸಂಸ್ಕರಣೆ, ತ್ಯಾಜ್ಯನೀರಿನ ಮರುಬಳಕೆ, ಜಲಾಶಯ ಸಂರಕ್ಷಣೆ ಮತ್ತು ಹಸಿರು ಪ್ರದೇಶ ಅಭಿವೃದ್ಧಿ ಪ್ರಾಧಾನ್ಯದಲ್ಲಿವೆ ಎಂದು ಜೋಶಿ ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande