ಅನುರಾಗ್ ಬಸು ಹೊಸ ಚಿತ್ರದ ಬಗ್ಗೆ ಮಾಹಿತಿ ಬಹಿರಂಗ
ಮುಂಬಯಿ, 05 ಜುಲೈ (ಹಿ.ಸ.) : ಆ್ಯಂಕರ್ : ಮೆಟ್ರೋ ಇನ್ ದಿನೋನ್ ಚಿತ್ರ ಯಶಸ್ಸಿನ ನಂತರ ನಿರ್ದೇಶಕ ಅನುರಾಗ್ ಬಸು ತಮ್ಮ ಮುಂದಿನ ಚಿತ್ರಕ್ಕಾಗಿ ಸಜ್ಜಾಗಿದ್ದು, ಈ ಬಾರಿ ಕಾರ್ತಿಕ್ ಆರ್ಯನ್ ಹಾಗೂ ದಕ್ಷಿಣದ ನಟಿ ಶ್ರೀಲೀಲಾ ಜೊತೆಯಾಗಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಅನುರಾಗ್ ಬಸು ಅವರು ಚಿತ್ರದ
Film


ಮುಂಬಯಿ, 05 ಜುಲೈ (ಹಿ.ಸ.) :

ಆ್ಯಂಕರ್ : ಮೆಟ್ರೋ ಇನ್ ದಿನೋನ್ ಚಿತ್ರ ಯಶಸ್ಸಿನ ನಂತರ ನಿರ್ದೇಶಕ ಅನುರಾಗ್ ಬಸು ತಮ್ಮ ಮುಂದಿನ ಚಿತ್ರಕ್ಕಾಗಿ ಸಜ್ಜಾಗಿದ್ದು, ಈ ಬಾರಿ ಕಾರ್ತಿಕ್ ಆರ್ಯನ್ ಹಾಗೂ ದಕ್ಷಿಣದ ನಟಿ ಶ್ರೀಲೀಲಾ ಜೊತೆಯಾಗಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಅನುರಾಗ್ ಬಸು ಅವರು ಚಿತ್ರದ ಅರ್ಧದಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು, ಉಳಿದ ಭಾಗ ಶೀಘ್ರದಲ್ಲೇ ಮುಕ್ತಾಯಗೊಳ್ಳಲಿದೆ. ದೀಪಾವಳಿಯಂದು ಚಿತ್ರ ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಸಂಗೀತಮಯ ಪ್ರೇಮಕಥಾ ಚಿತ್ರಕ್ಕೆ ಪ್ರೀತಮ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. 'ಆಶಿಕಿ 3' ಫ್ರಾಂಚೈಸಿಗೆ ಇದು ಸಂಪರ್ಕವಿರಬಹುದು ಎಂಬ ಊಹಾಪೋಹವಿದ್ದರೂ, ಅಧಿಕೃತ ದೃಢೀಕರಣ ಇನ್ನೂ ಬಂದಿಲ್ಲ.

ಈ ಚಿತ್ರದ ಮೂಲಕ ಶ್ರೀಲೀಲಾ ಬಾಲಿವುಡ್ ಪ್ರವೇಶ ಮಾಡುತ್ತಿದ್ದಾರೆ ಎಂಬುದು ವಿಶೇಷ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande