ಚೀನಾ-ಪಾಕಿಸ್ತಾನ ಮೈತ್ರಿ ಕುರಿತ ಎಚ್ಚರಿಕೆಗೆ ಜೈಶಂಕರ್ ವ್ಯಂಗ್ಯ
ನವದೆಹಲಿ, 30 ಜುಲೈ (ಹಿ.ಸ.) : ಆ್ಯಂಕರ್ : ಚೀನಾ ಮತ್ತು ಪಾಕಿಸ್ತಾನ ನಡುವಿನ ಸೇನಾ ಮೈತ್ರಿ ಕುರಿತು ಪ್ರತಿಪಕ್ಷಗಳು ನೀಡಿದ ಎಚ್ಚರಿಕೆಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಬುಧವಾರ ರಾಜ್ಯಸಭೆಯಲ್ಲಿ ತೀವ್ರವಾಗಿ ಪ್ರತಿಕ್ರಿಯಿಸಿ, ಇತಿಹಾಸದ ತರಗತಿಯಲ್ಲಿ ನಿದ್ರಿಸಿರುವುದರಿಂದ ಇಂತಹ ಮಾತುಗಳು ಬರುತ್ತ
Jayshankar


ನವದೆಹಲಿ, 30 ಜುಲೈ (ಹಿ.ಸ.) :

ಆ್ಯಂಕರ್ : ಚೀನಾ ಮತ್ತು ಪಾಕಿಸ್ತಾನ ನಡುವಿನ ಸೇನಾ ಮೈತ್ರಿ ಕುರಿತು ಪ್ರತಿಪಕ್ಷಗಳು ನೀಡಿದ ಎಚ್ಚರಿಕೆಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಬುಧವಾರ ರಾಜ್ಯಸಭೆಯಲ್ಲಿ ತೀವ್ರವಾಗಿ ಪ್ರತಿಕ್ರಿಯಿಸಿ, ಇತಿಹಾಸದ ತರಗತಿಯಲ್ಲಿ ನಿದ್ರಿಸಿರುವುದರಿಂದ ಇಂತಹ ಮಾತುಗಳು ಬರುತ್ತವೆ ಎಂದು ವ್ಯಂಗ್ಯವಾಡಿದರು.

'ಆಪರೇಷನ್ ಸಿಂಧೂರ್' ಕುರಿತು ಚರ್ಚೆಯಲ್ಲಿ ಭಾಗವಹಿಸಿದ್ದ ಜೈಶಂಕರ್, ಪಾಕ್ ಆಕ್ರಮಿತ ಕಾಶ್ಮೀರವನ್ನು ಬಿಟ್ಟದ್ದು ಚೀನಾ-ಪಾಕ್ ಮೈತ್ರಿಗೆ ಕಾರಣ ಎಂಬ ಪ್ರತಿಪಕ್ಷಗಳ ಹೇಳಿಕೆಗೆ, ಮಾಜಿ ಪ್ರಧಾನಮಂತ್ರಿ ನೆಹರು ಅವರ ಅವಧಿಯ ನೀತಿ ತಪ್ಪುಗಳನ್ನ ಉಲ್ಲೇಖಿಸಿ, ಮೋದಿ ಸರ್ಕಾರ ಅವುಗಳನ್ನು ಸರಿಪಡಿಸುತ್ತಿದೆ ಎಂದು ಹೇಳಿದರು.

ಪಾಕಿಸ್ತಾನ ಸಂಬಂಧಿ ಅಮೆರಿಕದ ನಿಲುವು ಕುರಿತಂತೆ, ಅಮೆರಿಕ-ಭಾರತ ಉಭಯ ದೇಶಗಳ ವಿಭಿನ್ನ ನೀತಿಯು ಸಹಜ. ಭಾರತವು ಭಯೋತ್ಪಾದನೆ ಹಾಗೂ ಮಾತುಕತೆ ಒಂದೇ ಸಮಯದಲ್ಲಿ ನಡೆಯಬಾರದು ಎಂಬ ನಿಲುವಿನಲ್ಲಿ ದೃಢವಾಗಿದೆ ಎಂದು ತಿಳಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande