ಮೆಸ್ಸಿ ಹಾಗೂ ಜೋರ್ಡಿ ಆಲ್ಬಾಗೆ ಒಂದು ಪಂದ್ಯ ನಿಷೇಧ
ನವದೆಹಲಿ, 26 ಜುಲೈ (ಹಿ.ಸ.) : ಆ್ಯಂಕರ್ : ಇಂಟರ್ ಮಿಯಾಮಿ ತಂಡದ ಲಿಯೋನೆಲ್ ಮೆಸ್ಸಿ ಮತ್ತು ಜೋರ್ಡಿ ಆಲ್ಬಾ ಅವರನ್ನು ಈ ವರ್ಷದ ಎಂಎಲ್ಎಸ್ ಆಲ್-ಸ್ಟಾರ್ ಪಂದ್ಯದಲ್ಲಿ ಭಾಗವಹಿಸದ ಕಾರಣ ಮೇಜರ್ ಲೀಗ್ ಸಾಕರ್ ತಲಾ ಒಂದು ಪಂದ್ಯಕ್ಕೆ ಅಮಾನತುಗೊಳಿಸಿದೆ. ಲೀಗ್ ನಿಯಮದಂತೆ, ಪೂರ್ವಾನುಮತಿ ಇಲ್ಲದೆ ಆಲ್-ಸ್ಟಾರ್
Ban


ನವದೆಹಲಿ, 26 ಜುಲೈ (ಹಿ.ಸ.) :

ಆ್ಯಂಕರ್ : ಇಂಟರ್ ಮಿಯಾಮಿ ತಂಡದ ಲಿಯೋನೆಲ್ ಮೆಸ್ಸಿ ಮತ್ತು ಜೋರ್ಡಿ ಆಲ್ಬಾ ಅವರನ್ನು ಈ ವರ್ಷದ ಎಂಎಲ್ಎಸ್ ಆಲ್-ಸ್ಟಾರ್ ಪಂದ್ಯದಲ್ಲಿ ಭಾಗವಹಿಸದ ಕಾರಣ ಮೇಜರ್ ಲೀಗ್ ಸಾಕರ್ ತಲಾ ಒಂದು ಪಂದ್ಯಕ್ಕೆ ಅಮಾನತುಗೊಳಿಸಿದೆ.

ಲೀಗ್ ನಿಯಮದಂತೆ, ಪೂರ್ವಾನುಮತಿ ಇಲ್ಲದೆ ಆಲ್-ಸ್ಟಾರ್ ಪಂದ್ಯದಲ್ಲಿ ಭಾಗವಹಿಸದ ಆಟಗಾರರು ತಮ್ಮ ತಂಡದ ಮುಂದಿನ ಲೀಗ್ ಪಂದ್ಯದಲ್ಲಿ ಆಡಲು ಅನರ್ಹರಾಗುತ್ತಾರೆ. ಈ ಹಿನ್ನೆಲೆಯಲ್ಲಿ ಅವರು ಎಫ್‌ಸಿ ಸಿನ್ಸಿನಾಟಿ ವಿರುದ್ಧದ ಪಂದ್ಯದಲ್ಲಿ ಆಡಲಾರರು.

ಎಂಎಲ್ಎಸ್ ಆಯುಕ್ತ ಡಾನ್ ಗಾರ್ಬರ್, “ಮೆಸ್ಸಿ ಲೀಗ್‌ಗೆ ನೀಡಿದ ಕೊಡುಗೆ ಅಪಾರವಾದರೂ, ನಿಯಮ ಎಲ್ಲರಿಗೂ ಸಮಾನ” ಎಂದು ಸ್ಪಷ್ಟಪಡಿಸಿದರು. ಅವರು ನಿಯಮದ ಪುನರ್ ವಿಮರ್ಶೆಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದೊಂದು ಕಠಿಣ ನಿರ್ಧಾರವಾಗಿದ್ದರೂ, ನಿಯಮ ಪಾಲನೆ ಮುಖ್ಯವಾಗಿದೆ ಎಂದು ಲೀಗ್ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande