ಕಾರ್ಮಿಕರ ರಾಜ್ಯ ವಿಮಾ ನಿಗಮ ನವೀಕೃತ ಯೋಜನೆ : ನೋಂದಣಿಗೆ ಅವಕಾಶ
ವಿಜಯಪುರ, 22 ಜುಲೈ (ಹಿ.ಸ.) : ಆ್ಯಂಕರ್ : ಕಾರ್ಮಿಕರ ರಾಜ್ಯ ವಿಮಾ ನಿಗಮವು ಕಾರ್ಮಿಕರ ಕಲ್ಯಾಣಕ್ಕಾಗಿ SPಖಇಇ 2025- ಉದ್ಯೋಗದಾತರು ಮತ್ತು ಉದ್ಯೋಗಿಗಳ ನೋಂದಣೀಯನ್ನು ಉತ್ತೇಜಿಸುವ ಯೋಜನೆ-2025 ಎಂಬ ನವೀಕೃತ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಡಿಸೆಂಬರ್
ಕಾರ್ಮಿಕರ ರಾಜ್ಯ ವಿಮಾ ನಿಗಮ ನವೀಕೃತ ಯೋಜನೆ : ನೋಂದಣಿಗೆ ಅವಕಾಶ


ವಿಜಯಪುರ, 22 ಜುಲೈ (ಹಿ.ಸ.) :

ಆ್ಯಂಕರ್ : ಕಾರ್ಮಿಕರ ರಾಜ್ಯ ವಿಮಾ ನಿಗಮವು ಕಾರ್ಮಿಕರ ಕಲ್ಯಾಣಕ್ಕಾಗಿ SPಖಇಇ 2025- ಉದ್ಯೋಗದಾತರು ಮತ್ತು ಉದ್ಯೋಗಿಗಳ ನೋಂದಣೀಯನ್ನು ಉತ್ತೇಜಿಸುವ ಯೋಜನೆ-2025 ಎಂಬ ನವೀಕೃತ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಡಿಸೆಂಬರ್ 31ರವರೆಗೆ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಕಾರ್ಮಿಕರ ರಾಜ್ಯ ವಿಮಾ ನಿಗಮದ ಜಿಲ್ಲಾ ಶಾಖಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂಗಡಿಗಳು, ಹೋಟೆಲ್ ಮತ್ತು ರೆಸ್ಟೋರೆಂಟ್ಗಳು, ಸಿನೆಮಾ ಹಾಲ್, ರಸ್ತೆ ಸಾರಿಗೆ ಘಟಕಗಳು, ವಾರ್ತಾಪತ್ರಿಕಾ ಘಟಕಗಳು, ಖಾಸಗಿ ವೈದ್ಯಕೀಯ ಸಂಸ್ಥೆಗಳು. ವಿದ್ಯಾ ಸಂಸ್ಥೆಗಳು ಮತ್ತು ಮುನ್ಸಿಪಲ್ ಕಾಪೆರ್Çರೇಷನ್ ಗಳಲ್ಲಿ ಕಾರ್ಯನಿರ್ವಹಿಸುವ ಗುತ್ತಿಗೆ ಕಾರ್ಮಿಕರು ಹಾಗೂ ತಾತ್ಕಾಲಿಕ, ಸಾಂಧರ್ಭಿಕ ಗುತ್ತಿಗೆ ಕಾರ್ಮಿಕರನ್ನು ಒಳಗೊಂಡಂತೆ ಕಾರ್ಯನಿರತ ಅರ್ಹ ಉದ್ಯೋಗಸ್ಥರು ನೋಂದಾಯಿಸಿಕೊಳ್ಳಲು ಅವಕಾಶವಿರುತ್ತದೆ.

ಒಂದು ಬಾರಿ ನೋಂದಾಯಿಸಿಕೊಂಡರೆ, ನೋಂದಣಿಯಾದ ದಿನಾಂಕದಿಂದ ಉದ್ಯೋಗಿಗಳು ಹಾಗೂ ಅವರ ಕುಟುಂಬದ ಸದಸ್ಯರುಗಳಿಗೆ ವೈದ್ಯಕೀಯ ಸೌಲಭ್ಯಗಳಾದ ಅನಾರೋಗ್ಯ, ಪ್ರಸವ (ಹೆರಿಗೆ), ಅಪಘಾತ ಹಾಗೂ ಉದ್ಯೋಗದ ಸಂದರ್ಭದಲ್ಲಿ ಉದ್ಯೋಗಿಗಳು ಮರಣ ಹೊಂದಿದ್ದರೆ, ನಗದು ಸೌಲಭ್ಯ ಸೇರಿದ್ದಂತೆ ಇಎಸ್ಐ ಕಾಯ್ದೆ 1948 ರ ಅಡಿಯಲ್ಲಿ ಧೀರ್ಘಾವಧಿ ಭದ್ರತೆಯ ರಕ್ಷಣೆಯು ಕಾರ್ಮಿಕರಿಗೆ ದೊರೆಯುತ್ತದೆ.

SPREE 2025 ಅಡಿಯಲ್ಲಿ ನೋಂದಣಿಯನ್ನು ಉದ್ಯೋಗದಾತರು ESIC : https://www.esic.gov.in ಪೆÇೀರ್ಟಲ್ ಹಾಗೂ ಶ್ರಮ್ ಸುವಿಧಾ https://registration.shramsuvidha.gov.in/user/register ಪೆÇೀರ್ಟಲ್ನಲ್ಲೂ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಈ ಕುರಿತು ಸಹಾಯಕ್ಕಾಗಿ https://portal.esic.gov.in/ ಹಾಗೂ https://www.esic.gov.in/ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande