ಮೋಚಿ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ 25 ಲಕ್ಷ ರೂ.ಅನುದಾನ : ಶಾಸಕ ನಾರಾ ಭರತ್ ರೆಡ್ಡಿ
ಬಳ್ಳಾರಿ, 22 ಜುಲೈ (ಹಿ.ಸ.) : ಆ್ಯಂಕರ್ : ಮೋಚಿ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ನಾನೂ ಕೈ ಜೋಡಿಸುವೆ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಹೇಳಿದ್ದಾರೆ. ಮಂಗಳವಾರ ರೂಪನಗುಡಿ ರಸ್ತೆಯ ಮಣಿಕಂಠ ಕಾಲೋನಿಯಲ್ಲಿ ಶ್ರೀ ಶಾಂಭವಿ ದೇವಸ್ಥಾನ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಕಾರ್ಯ
ಮೋಚಿ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ 25 ಲಕ್ಷ ರೂ.ಅನುದಾನ : ಶಾಸಕ ನಾರಾ ಭರತ್ ರೆಡ್ಡಿ


ಮೋಚಿ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ 25 ಲಕ್ಷ ರೂ.ಅನುದಾನ : ಶಾಸಕ ನಾರಾ ಭರತ್ ರೆಡ್ಡಿ


ಮೋಚಿ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ 25 ಲಕ್ಷ ರೂ.ಅನುದಾನ : ಶಾಸಕ ನಾರಾ ಭರತ್ ರೆಡ್ಡಿ


ಬಳ್ಳಾರಿ, 22 ಜುಲೈ (ಹಿ.ಸ.) :

ಆ್ಯಂಕರ್ : ಮೋಚಿ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ನಾನೂ ಕೈ ಜೋಡಿಸುವೆ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಹೇಳಿದ್ದಾರೆ.

ಮಂಗಳವಾರ ರೂಪನಗುಡಿ ರಸ್ತೆಯ ಮಣಿಕಂಠ ಕಾಲೋನಿಯಲ್ಲಿ ಶ್ರೀ ಶಾಂಭವಿ ದೇವಸ್ಥಾನ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮೋಚಿ ಸಮಾಜದ ಹಲವು ದಿನಗಳ ಪ್ರಯತ್ನಕ್ಕೆ 25 ಲಕ್ಷ ರೂ.ಗಳ ಅನುದಾನವನ್ನು ಶೀಘ್ರ ಮಂಜೂರು ಮಾಡಿಸುವೆ ಎಂದು ಹೇಳಿದರು.

ನಾನು ಎಲ್ಲ ಸಮುದಾಯದ ಜನರನ್ನು ಜೊತೆಗೂಡಿಸಿಕೊಂಡು ಹೋಗಬೇಕೆಂಬ ತೀರ್ಮಾನ ಮಾಡಿರುವೆ ಇಲ್ಲಿ ಯಾವುದೇ ಸಮುದಾಯದ ಜನರಿರಲಿ, ಅವರು ಎಷ್ಟು ಸಂಖ್ಯೆಯಲ್ಲಿದ್ದರೂ ಕೂಡ ಅವರ ಬೇಡಿಕೆ ಈಡೇರಿಸುವುದು ನನ್ನ ಆದ್ಯ ಕರ್ತವ್ಯವಾಗಿದೆ ಇದು ಮತಬ್ಯಾಂಕ್ ಅಥವಾ ರಾಜಕೀಯದ ಉದ್ಧೇಶ ಇಲ್ಲ ಎಂದರು.

ಕಾಂಗ್ರೆಸ್ ಮುಖಂಡ ಹೊನ್ನಪ್ಪ ಮಾತನಾಡಿ ಶಾಸಕ ನಾರಾ ಭರತ್ ರೆಡ್ಡಿಯವರು ಕೊಡುಗೈ ದಾನಿಗಳು, ನಿಮ್ಮ ಬೇಡಿಕೆ ಅವರು ಈಡೇರಿಸುತ್ತಾರೆ, ಅವರ ಮೇಲೆ ಮೋಚಿ ಸಮಾಜದ ಆಶೀರ್ವಾದ ಸದಾ ಇರಲಿ ಎಂದರು.

ಮೋಚಿ ಸಮಾಜದ ಮುಖಂಡ, ಪಾಲಿಕೆಯ ಬಿಜೆಪಿ ಸದಸ್ಯ ಗುಡಿಗಂಟಿ ಹನಮಂತು ಮಾತನಾಡಿ, ಶಾಸಕ ಭರತ್ ರೆಡ್ಡಿಯವರು ಕಾಂಗ್ರೆಸ್ಸಿನವರಾದರೂ ಅಭಿವೃದ್ಧಿ ವಿಷಯದಲ್ಲಿ ಪಕ್ಷ ಭೇದ ಮಾಡಿದವರಲ್ಲ ಅವರಿಗೆ ನಮ್ಮ ಸಮಾಜದ ಮೇಲೆ ಪ್ರೀತಿ, ಅವರ ಸಹಕಾರ ಯಾವಾಗಲೂ ಇರುತ್ತದೆ, ಅವರಿಗೆ ಮುಂಬರುವ ದಿನಗಳಲ್ಲಿ ನಮ್ಮ ಸಮಾಜದವರು ಸಹಕರಿಸಬೇಕು ಎಂದರು.

ಪಾಲಿಕೆಯ ಸದಸ್ಯರಾದ ನೂರ್ ಮೊಹಮ್ಮದ್, ಮಿಂಚು ಸೀನಾ, ಕಾಂಗ್ರೆಸ್ ಮುಖಂಡರಾದ ಚಾನಾಳ್ ಶೇಖರ್, ಹಗರಿ ಗೋವಿಂದ, ಮೋಚಿ ಸಮಾಜದ ಮುಖಂಡರಾದ ರಾಮು, ದೇವಣ್ಣ ಮತ್ತಿತರರು ಹಾಜರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande