ನವದೆಹಲಿ, 22 ಜುಲೈ (ಹಿ.ಸ.) :
ಆ್ಯಂಕರ್ : ಉಪರಾಷ್ಟ್ರಪತಿ ಜಗದೀಪ್ ಧಂಖರ್ ರಾಜೀನಾಮೆ ಸಲ್ಲಿಸಿದ ನಂತರ ಈ ಹುದ್ದೆಗೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತೀರ್ಮಾನಿಸಿದೆ ಎಂದು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಧಂಖರ್ ಅವರ ರಾಜೀನಾಮೆಯಿಂದ ನಮಗೆ ಸಂತೋಷವಿಲ್ಲ, ದುಃಖವೂ ಇಲ್ಲ. ಚುನಾವಣೆ ನಡೆಯುವುದು ನಿಶ್ಚಿತ. ನಾವು ಸಿದ್ಧತೆ ಆರಂಭಿಸಿದ್ದೇವೆ, ಎಂದು ಖರ್ಗೆ ಸ್ಪಷ್ಟಪಡಿಸಿದರು.
ಸಂವಿಧಾನದ ವಿಧಿಗಳ ಪ್ರಕಾರ, ಉಪಾಧ್ಯಕ್ಷ ಸ್ಥಾನಕ್ಕೆ ಶೀಘ್ರದಲ್ಲೇ ಚುನಾವಣೆ ನಡೆಯಲಿದೆ. ಎನ್ ಡಿಎಗೆ ಬಹುಮತ ಇದ್ದರೂ, ಕಾಂಗ್ರೆಸ್ ಹೋರಾಟ ಮಾಡಲು ಸಜ್ಜಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa