ಬಂಜರ ಭೂಮಿಗೂ ಬಂತು ಕೋಟಿ ಕೋಟಿ ರೂಪಾಯಿ ಬೆಲೆ ; ಕೃಷಿಯಿಂದ ಅನ್ನದಾತರು ವಿಮ್ಮುಖ
ಕೋಲಾರ, ಜುಲೈ ೨೧(ಹಿ.ಸ.) :
ಆ್ಯಂಕರ್ : ಅದೊಂದು ಕಾಲವಿತ್ತು ಮನೆಯ ಆಸ್ತಿ ಪಾಲು ಹಂಚುವಾಗ ಬಂಜರು ಭೂಮಿಯನ್ನು ಒಬ್ಬ ಮನೆಗೆ ಹಂಚಲಾಗುತ್ತಿತ್ತು. ಮತ್ತೊಬ್ಬರಿಗೆ ಫಲವತ್ತಾದ ಭೂಮಿಯನ್ನು ಹಂಚಲಾಗುತ್ತಿತ್ತು. ಫಲವತ್ತಾದ ಭೂಮಿಯಲ್ಲಿ ಒಳ್ಳೆಯ ಬೆಳೆ ಮಾಡಬಹುದಾಗಿತ್ತು.ಆದರೆ ಈಗ ಭಂಜರು ಭೂಮಿಗೆ ಕೋಟಿ ರೂಪಾಯಿ ಬೆಲೆ ಬಾಳುತ್ತದೆ. ಮೂವತ್ತು ವರ್ಷಗಳ ಹಿಂದೆ ದಿಕ್ಕರಿಸಿದ್ದ ಬಂಜರು ಭೂಮಿಗೆ ಕೋಟಿ ಕೋಟಿ ರೂಪಾಯಿ ಬೆಲೆ ಬಂದಿದೆ. ನಾವು ಕೃಷಿ ಮತ್ತು ಭೂಮಿಯನ್ನು ನೋಡುವ ದೃಷ್ಠಿ ಬದಲಾಗಿದೆ. ವರ್ಷಕ್ಕೆ ಒಂದೋ ಎರಡು ಬೆಳೆ ಮಾಡಲಗುತ್ತಿತ್ತು. ಫಲವತ್ತಾದ ಭೂಮಿ ಇಂದು ಬಂಜರಾಗಿದೆ. ಕೃಷಿಯೂ ಇಲ್ಲ. ಬೇಡವಾದ ಭೂಮಿಗೆ ಈಗ ಕೋಟಿ ಕೋಟಿ ಬೆಲೆ ಬಂದಿದೆ. ಅನ್ನದಾತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ ಕೋಲಾರ ಜಿಲ್ಲಾಧಿಕಾರಿ ಡಾ.ಎಂ.ಆರ್ ವಿಷಾದಿಸಿದರು.
ಕೋಲಾರದಲ್ಲಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಆಶ್ರಯದಲ್ಲಿ ನಡೆದ ೪೬ನೇ ರೈತ ಹುತಾತ್ಮರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಅನ್ನದಾತರು ಯಾವ ದಿಕ್ಕಿನಲ್ಲಿ ಸಾಗುತ್ತಿದ್ದಾರೆ. ಹಣಕ್ಕಾಗಿ ಭೂಮಿಯನ್ನು ಮಾರಾಟ ಮಾಡುತ್ತಿದ್ದಾರೆ. ಭೂಮಿ ಇರುವುದೊಂದೆ. ಅದಕ್ಕೆ ಮಿತಿ ಇದೆ.ವಿಶಾಲವಾಗಿ ಹೇರಳವಾಗಿ ಭೂಮಿ ಇಲ್ಲ. ಇರುವ ಭೂಮಿಯನ್ನು ಬಳಸಿಕೊಂಡು ಅನ್ನದಾತರು ಜಗತ್ತಿಗೆ ಅನ್ನ ನೀಡಬೇಕಾಗಿದೆ. ಭೂಮಿಯನ್ನು ಕಳೆದುಕೊಂಡು ನಾವು ಎಲ್ಲಿಗೆ ಹೋಗುತ್ತಿದ್ದೇವೆ. ಅನ್ನದಾತರು ಸೇರಿದಂತೆ ನಾವು ಯಾವ ಕಡೆ ಯಾವ ಸಂಸ್ಕೃತಿಯ ಕಡೆ ಹೋಗುತ್ತಿದ್ದೇವೆ.ನಮ್ಮ ಪಯಣ ಎತ್ತ ಸಾಗುತ್ತಿದೆ. ಇಂದಿನ ಕಾಲಘಟ್ಟದಲ್ಲಿ ಬದಲಾಗುತ್ತಿರುವ ಕೃಷಿ ಸಂಸ್ಕೃತಿಯ ಬಗ್ಗೆ ಕೇವಲ ಅನ್ನದಾತರಲ್ಲ ಎಲ್ಲರು ಚಿಂತಿಸಬೇಕಾಗಿದೆ ಜಿಲ್ಲಾಧಿಕಾರಿ ರವಿಯವರು ಕಳವಳ ವ್ಯಕ್ತಪಡಿಸಿದರು.
ಹಣಕ್ಕಾಗಿ ಭೂಮಿಯನ್ನು ಬಿಕರಿ ಮಾಡಿಕೊಳ್ಳಲಾಗಗುತ್ತಿದೆ. ಅದರೊಂದಿಗೆ ನಮ್ಮ ಬದುಕನ್ನು ಬಿಕರಿ ಮಾಡಿಕೊಳ್ಳುತ್ತಿದ್ದೇವೆ.ಅನ್ನದಾತರು ಪದೇ ಪದೇ ಹಲವಾರು ಸಮಸ್ಯೆಗಳನ್ನು ಮತ್ತು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಸಂಕಷ್ಠಕ್ಕೆ ಒಳಗಾಗುತ್ತಿದ್ದಾರೆ ಎಂದು ವಿಷಾದಿಸಿದರು.
ಎಂಬತ್ತರ ದಶಕದಲ್ಲಿ ರೈತರು ದಲಿತರು ಬೀದಿಗೆಇಳಿದರೆ ಸರ್ಕಾರಗಳು ಎದುರುತ್ತಿದ್ದವು. ರೈತ ಚಳವಳಿ ದೈತ್ಯ ಶಕ್ತಿಯಾಗಿ ಬೆಳೆದಿತ್ತು. ಅದು ರೈತ ಚಳವಳಿಯ ಅಸ್ಮಿತೆಯಾಗಿತ್ತು.ಆದರೆ ಸಮಸ್ಯೆಗಳ ಅರಿವು ಇದೆ. ಅರಣ್ಯ ಭೂಮಿಯ ಜಂಟಿ ಸರ್ವೆ ಆಗುವತನಕ ಬವಂತವಾಗಿ ಒಕ್ಕಲೆಬ್ಬಿಸಿವುದಿಲ್ಲ. ಜಂಟಿ ಸರ್ವೆನಡೆಯುತ್ತಿದೆ. ಕೋಲಾರ ಜಿಲ್ಲೆಯಲ್ಲಿ ಏಳು ಸಾವಿರ ಎಕರೆ ಭೂಮಿ ಪೋಡಿ ಆಗಬೇಕಾಗಿದೆ. ಈಗಾಗಲೇ ೫ ಸಾವಿರ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ತಿಳಿಸಿದರು.
ಸಂಸ್ಕೃತಿ ಚಿಂತಕ ಕೋಟಿಗಾನಹಳ್ಲಿ ರಾಮಯ್ಯ ಮಾತನಾಡಿ ಸರ್ಕಾಗಳು ಮತ್ತು ಎಂ.ಎನ್. ಸಿ ಕಂಪನಿಗಳು ರೈತರನ್ನು ದರೋಡೆ ಮಾಡುತ್ತಿವೆ.ಕೈಗಾರಿಕಾ ಅಭಿವೃದ್ದಿಯ ಹೆಸರಿನಲ್ಲಿ ರೈತರನ್ನು ಬೀದಿಗೆ ತಳ್ಳುತ್ತಿವೆ. ಪೋಲೀಸರ ಗುಂಡಿಗೆ ಎದೆ ಒಡ್ಡಿ ರೈತರು ರಕ್ತ ಚಲ್ಲಿದ್ಧಾರೆ. ಹುತಾತ್ಮ ರೈತರು ನಮ್ಮ ನಂಬಿಕೆ ಸ್ವಾಭಿಮಾನದ ಅಸ್ಮಿತೆಯಾಗಿದ್ಧಾರೆ ಎಂದು ಹುತಾತ್ಮ ರೈತರುನ್ನು ಸ್ಮರಿಸಿದರು.
ಕೋಲಾರ ಜಿಲ್ಲಾ ಎಸ್ಪಿ ನಿಖಿಲ್ ಮಾತನಾಡಿ ತರಬೇತಿಯ ಅವಧಿಯಲ್ಲಿ ರೈತರ ಸಮಸ್ಯೆಗಳನ್ನು ಹೇಗೆ ಪರಿಹರಿಸ ಬೇಕೆಂದು ತರಬೇತಿ ನೀಡಲಾಗತ್ತದೆ. ರ‍್ಥತರು ತಮ್ಮ ಸಮಸ್ಯೆಗಳ ಬಗ್ಗೆ ಎಂದು ಬೇಕಾದರು ಮುಕ್ತವಾಗಿ ಚರ್ಚಿಸಬಹುದು ಎಂದು ತಿಳಿಸಿದರು.
ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಅಬ್ಬಣಿ ಶಿವಪ್ಪ ಮಾತನಾಡಿ ಆಳುವ ಸರ್ಕಾರಗಳು ರೈತರ ಸಾಲ ಮನ್ನಾ ಮಾಡುತ್ತಿವೆ. ಉಚಿತ ವಿದ್ಯುತ್ ನೀಡುತ್ತಿವೆ. ಕೇವಲ ಓಟಿಗಾಗಿ ಮಾಡುತ್ತಿಲ್ಲ. ಬದಲಾಗಿ ರೈತರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಚಿತ್ರ: ಕೋಲಾರದಲ್ಲಿ ನಡೆದ ರೈತ ಹುತಾತ್ಮ ದಿನಾಚರಣೆಯನ್ನು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಉದ್ಘಾಟಿಸಿದರು. ಸಂಸ್ಕೃತಿ ಚಿಂತಕ ಕೋಟಿಗಾನಹಳ್ಳಿ ರಾಮಯ್ಯ, ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಅಬ್ಬಣಿ ಶಿವಪ್ಪ ಚಿತ್ರದಲ್ಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್