ನವದೆಹಲಿ, 02 ಜುಲೈ (ಹಿ.ಸ.) :
ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಜುಲೈ 2ರಿಂದ 9ರವರೆಗೆ ಐದು ರಾಷ್ಟ್ರಗಳ ಪ್ರವಾಸದಲ್ಲಿದ್ದು, ಅವರು ಘಾನಾ, ಟ್ರಿನಿಡಾಡ್ ಮತ್ತು ಟೊಬಾಗೋ, ಅರ್ಜೆಂಟೀನಾ, ಬ್ರೆಜಿಲ್ ಮತ್ತು ನಮೀಬಿಯಾ ದೇಶಗಳಿಗೆ ಭೇಟಿ ನೀಡಲಿದ್ದಾರೆ. ಜುಲೈ 6-7ರಂದು ಬ್ರೆಜಿಲ್‌ನ ರಿಯೊ ದ ಜನೆರೊನಲ್ಲಿ ನಡೆಯುವ 17ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಅವರು ಭಾಗವಹಿಸಲಿದ್ದಾರೆ.
ಈ ಪ್ರವಾಸದಲ್ಲಿ ಪ್ರಧಾನಿ ವಿವಿಧ ರಾಷ್ಟ್ರದ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದು, ವಾಣಿಜ್ಯ, ಇಂಧನ, ರಕ್ಷಣಾ ಸಹಕಾರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಚರ್ಚೆಗಳು ನಡೆಯಲಿವೆ. ಟ್ರಿನಿಡಾಡ್‌ನಲ್ಲಿ ಭಾರತೀಯ ವಲಸಿಗರ ಆಗಮನದ 180ನೇ ವಾರ್ಷಿಕೋತ್ಸವ ಆಚರಣೆಯಲ್ಲಿ ಭಾಗವಹಿಸಲಿದ್ದಾರೆ. 27 ವರ್ಷಗಳ ನಂತರ ನಡೆಯುತ್ತಿರುವ ನಮೀಬಿಯಾ ಭೇಟಿಯು ಭಾರತ-ನಮೀಬಿಯಾ ಸಂಬಂಧ ಬಲಪಡಿಸುವ ಆಶಯ ಹೊಂದಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa