ಹೊಸಪೇಟೆ, 02 ಜುಲೈ (ಹಿ.ಸ.) :
ಆ್ಯಂಕರ್ : ತುಂಗಭದ್ರಾ ಜಲಾಯದಿಂದ ಬುಧವಾರ ಸಂಜೆ 6 ಗಂಟೆಯಿಂದ 15,136 ಕ್ಯುಸೆಕ್ ಪ್ರಮಾಣದ ನೀರನ್ನು ನದಿಗೆ ಹೆಚ್ಚುವರಿಯಾಗಿ ಬಿಡಲಾಗುತ್ತಿದೆ.
ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ ಓ.ಆರ್.ಕೆ. ರೆಡ್ಡಿ ಅವರು ಕ್ರಸ್ಟ್‍ಗೇಟ್‍ಗಳಿಗೆ ಬುಧವಾರ ಪೂಜೆ ಸಲ್ಲಿಸಿ, ಹೆಚ್ಚುವರಿ ನೀರನ್ನು ಜಲಾಶಯಕ್ಕೆ ಬಿಟ್ಟಿದ್ದಾರೆ. ಪ್ರಸ್ತುತ ಜಲಾಶಯಕ್ಕೆ 30 ಸಾವಿರ ಕ್ಯುಸೆಕ್ ಪ್ರಮಾಣದ ಒಳ ಹರಿವಿದೆ. ಜುಲೈ 10ನೇ ತಾರೀಕಿನವರೆಗೆ ಕಾಲುವೆಗಳ ಕಾಮಗಾರಿ ನಡೆದಿರುವ ಕಾರಣ 10ನೇ ತಾರೀಕಿನಿಂದ ಕಾಲುವೆಗಳಲ್ಲಿ ನೀರು ಹರಿಸಲಾಗುತ್ತದೆ.
ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಡಾ. ಪುರುಷೋತ್ತಮಗೌಡ ಅವರು ಜಲಾಶಯದ ಪೂಜೆಯ ಸಂದರ್ಭದಲ್ಲಿದ್ದರು.
ಒಳ ಹರಿವಿನ ಪ್ರಮಾಣವನ್ನು ಆಧರಿಸಿ ನೀರು ನದಿಗೆ ಬಿಡುವ ಪ್ರಮಾಣದಲ್ಲಿ ವ್ಯತ್ಯಾಸ ಆಗಲಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್