ವಿಜಯಪುರ, 03 ಜುಲೈ (ಹಿ.ಸ.) :
ಆ್ಯಂಕರ್ : ಜಗತ್ತಿನ 15 ಏಷ್ಯನ್ ರಾಷ್ಟ್ರಗಳ ಅಧಿಕಾರಿಗಳ ಎದುರು ವಿಜಯಪುರದ ಇತಿಹಾಸ, ಪರಂಪರೆ, ಶಿಲ್ಪಕಲೆ ಮತ್ತು ಪ್ರವಾಸೋದ್ಯಮದ ಅಪಾರ ಸಾಮಥ್ರ್ಯದ ಕುರಿತು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಪರಿಚಯ ನೀಡುವ ಮೂಲಕ ವಿಜಯಪುರ ಇತಿಹಾಸವನ್ನು ಅನಾವರಣಗೊಳಿಸಿದರು.
ಥೈಲ್ಯಾಂಡ್‍ನ ಬಾಂಕ್‍ಕಾಕ್‍ನಲ್ಲಿ ಏಷ್ಯನ್ ಉತ್ಪಾದಕತೆ ಸಂಸ್ಥೆ ಆಯೋಜಿಸಿದ್ದ ತರಬೇತಿ ಶಿಬಿರದಲ್ಲಿ ಭಾರತ ಸರ್ಕಾರದ ಪ್ರತಿನಿಧಿಯಾಗಿ ಭಾಗವಹಿಸಿರುವ ಜಿಲ್ಲಾಧಿಕಾರಿಗಳು, ಐತಿಹಾಸಿಕ ವಿಜಯಪುರದ ಇತಿಹಾಸವನ್ನು ಜಗತ್ತಿನ ವಿವಿಧ ರಾಷ್ಟ್ರಗಳ ಅಧಿಕಾರಿಗಳಿಗೆ ಪರಿಚಯಿಸಿ, ಆ ದೇಶದ ನಾಗರಿಕರನ್ನು ವಿಜಯಪುರಕ್ಕೆ ಆಹ್ವಾನಿಸಿ, ಇಲ್ಲಿನ ಐತಿಹಾಸಿಕ ಸ್ಥಳಗಳು, ಸಾಂಸ್ಕøತಿಕ ವೈಭವವನ್ನು ವೀಕ್ಷಿಸಲು ಅಹ್ವಾನ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande