ಗದಗ, 18 ಜುಲೈ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪುರಸಭೆ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರಿಗೆ ತಿಳಿಸುವುದೇನೆಂದರೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು, ಸಾರಿಗೆ ಕಾರ್ಮಿಕರು, ಗಿಗ್ ಕೆಲಸಗಾರರು, ಆರೈಕೆ ಕೆಲಸಗಾರರು, ತ್ಯಾಜ್ಯ ಕೆಲಸಗಾರರು, ಮನೆ ಕೆಲಸಗಾರರ ಗುಂಪುಗಳು ಹಾಗೂ ಕುಟುಂಬ ಸದಸ್ಯರುಗಳ ಮಹಿಳಾ ಮತ್ತು ಪುರುಷ ಸ್ವ ಸಹಾಯ ಗುಂಪುಗಳಲ್ಲಿನ ಫಲಾನುಭವಿಗಳ ಸಂಖ್ಯೆ ಮತ್ತು ವಿವರವನ್ನು ಲಕ್ಷ್ಮೇಶ್ವರ ಪುರಸಭೆ ಕಾರ್ಯಾಲಯದ ಡೇ-ನಲ್ಮ ವಿಭಾಗಕ್ಕೆ ಸಲ್ಲಿಸಲು ಕೋರಲಾಗಿದೆ.
ಮಾಹಿತಿ ಸಲ್ಲಿಕೆಗೆ ಕೊನೆಯ ದಿನ ಜುಲೈ 26 ಆಗಿದ್ದು ಹೆಚ್ಚಿನ ಮಾಹಿತಿಗಾಗಿ ಲಕ್ಷ್ಮೇಶ್ವರ ಪುರಸಭೆ ಮುಖ್ಯಾಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.
ಹಿಂದೂಸ್ತಾನ್ ಸಮಾಚಾರ್ / Lalita MP