ಕೋಲಾರ, ೧೮ ಜುಲೈ (ಹಿ.ಸ) :
ಆ್ಯಂಕರ್ : ಮಕ್ಕಳು ಗುರುಹಿರಿಯರನ್ನು ಗೌರವಿಸುವ ಸಂಸ್ಕಾರ ಪಡೆಯುವುದರೊಂದಿಗೆ ಸಾಮಾಜಿಕ ಮತ್ತು ಕಾನೂನಿನ ಜ್ಞಾನ ಪಡೆದು ಅಪರಾಧ ಮುಕ್ತ ಜೀವನ ನಡೆಸಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ನಟೇಶ್ ಕರೆ ನೀಡಿದರು.
ನಗರದ ಪಾಲಸಂದ್ರ0 ಬಡಾವಣೆಯಲ ನವನಳಂದ ಶಾಲೆಯಲ್ಲಿ ಗುರುಪೌರ್ಣಿಮಾ ಸಂಭ್ರಮ ಹಾಗೂ ಕಾನೂನು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಕ್ಕಳಿಗೆ ಶಾಲೆಯಲ್ಲಿ ಶಿಕ್ಷಣದೊಂದಿಗೆ ಸಂಸ್ಕಾರ,ಸ0ಸ್ಕೃತಿ ಶಿಕ್ಷಣದೊಂದಿಗೆ ಇದ್ದರೆ ಮಾತ್ರ ಯಾವುದೇ ವ್ಯಕ್ತಿ ಪರಿಪೂರ್ಣನಾಗಲು ಸಾಧ್ಯ ಎಂದು ತಿಳಿಸಿ, ಕಾನೂನುಗಳ ಕುರಿತು ತಿಳಿದುಕೊಂಡು ಪಾಲಿಸಿ. ಗುರುಹಿರಿಯರಿಗೆ ಗೌರವ ನೀಡುವ ಸಂಸ್ಕಾರ ಮೊದಲು ಕಲಿಯಿರಿ ಎಂದ ಅವರು ವಿದ್ಯೆಗೆ ವಿನಯವೇ ಭೂಷಣವಾಗಿದೆ, ಮಕ್ಕಳು ದುಶ್ಚಟಗಳಿಂದ ದೂರವಿರಿ, ವಿದ್ಯೆಗೆ ಮುನ್ನಾ ಸಮಾಜದಲ್ಲಿ ಬದುಕುವ ಶಿಕ್ಷಣ ಪಡೆಯಿರಿ ಎಂದು ಸಲಹೆ ನೀಡಿದರು.
ಕಾನೂನಿನ ಅರಿವು ಇಲ್ಲವಾದಲ್ಲಿ ಎದುರಾಗುವ ಸಮಸ್ಯೆಗಳ ಕುರಿತು ತಿಳಿಸಿದ ಅವರು, ತಪ್ಪು ಮಾಡಿ ನನಗೆ ಕಾನೂನಿನ ಅರಿವಿರಲಿಲ್ಲ ಎಂದರೆ ಒಪ್ಪಲಾಗದು ಶಿಕ್ಷೆ ಖಚಿತ ಎಂದು ಎಚ್ಚರಿಸಿದ ಅವರು, ಸಮಾಜದಲ್ಲಿ ಎಲ್ಲರೊಂದಿಗೆ ಸೌಹಾರ್ದತೆಯಿಂದ ಬದುಕು ನಡೆಸುವ ಸಂಸ್ಕಾರ ಇಂದು ಅಗತ್ಯವಿದೆ ಎಂದರು.
ಹಿರಿಯ ವಕೀಲ ಎಸ್.ಮುನಿಸ್ವಾಮಿಗೌಡ ಮಾತನಾಡಿ, ಮಾದಕ ವಸ್ತುಗಳ ಬಳಕೆ,ಮಾರಾಟ ಕ್ಷಮಿಸಲಾರದ ಅಪರಾಧ ಇಂತಹ ಕೃತ್ಯಗಳಲ್ಲಿ ತೊಡಗಿ ಜೀವನ ಹಾಳು ಮಾಡಿಕೊಳ್ಳದಿರಿ ಎಂದು ಕಿವಿಮಾತು ಹೇಳಿ, ಕನಿಷ್ಟ ದೈನಂದಿನ ಕಾನೂನುಗಳ ಅರಿತಾಗ ನಿಮ್ಮ ಜೀವನ ಸುಖಮಯವಾಗಿರುತ್ತದೆ, ಅಪರಾಧ ಮುಕ್ತ ಜೀವನ ನಡೆಸಬಹುದು ಎಂದರು.
ಸಹಾಯಕ ಕಾನೂನು ಸೇವಾ ಪ್ರತಿನಿಧಿ ಸಿ.ಅಶ್ವಥ್, ಸುಜಾತಾ ಮತ್ತಿತರರು ಮಾತನಾಡಿ, ಚಾಕೋಲೇಟ್‌ಗಳಲ್ಲಿ ಹೇರಾಯಿನ್, ಕೋಕಾ, ಮುಂತಾದ ಅಮಲು, ನಿಶೆ ಬರುವ ವಸ್ತುಗಳನ್ನು ಮಿಶ್ರಣ ಮಾಡಿ ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಮಾದಕ ವ್ಯಸನಿಗಳನ್ನಾಗಿ ಮಾಡಿ ಕೊನೆಗೆ ಅವರನ್ನು ಸಮಾಜಘಾತುಕ, ಕಾನೂನು ಬಾಹಿರಾ ಕೃತ್ಯಗಳಲ್ಲಿ ತೊಡಗುವಂತೆ ಮಾಡುವ ಷಡ್ಯಂತ್ರ ನಡೆದಿದೆ ಎಂದು ವಿಷಾದಿಸಿ, ಬಾಲ್ಯವಿವಾಹ, ಬಾಲಕಾರ್ಮಿಕತೆ, ಸಂಚಾರಿ ನಿಯಮಗಳ ಕುರಿತು ಅರಿವು ನೀಡಿದರು.
ಶಾಲೆಯ ಕಾರ್ಯದರ್ಶಿ ಟಿ.ಆರ್.ಜಯರಾಂ ಮಾತನಾಡಿ, ಮಕ್ಕಳು ಚಿಕ್ಕಂದಿನಿ0ದಲೇ ಕಾನೂನುಗಳ ಕುರಿತು ತಿಳಿದುಕೊಳ್ಳಿ, ವಾಹನಚಾಲನೆಗೆ ಪರವಾನಗಿ ಬೇಕು, ೧೮ ವರ್ಷವಾಗಿರಬೇಕು, ರಸ್ತೆಯ ಎಡಬದಿಯಲ್ಲಿ ವನಡೆಯಿರಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಎನ್‌ಎಲ್‌ಎಸ್‌ಎ ಸಹಾಯಾಣಿ ೧೫೧೦೦, ಮಕ್ಕಳ ಸಹಾಯವಾಣಿ ೧೦೯೮ ಕುರಿತ ಮಾಹಿತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಖಜಾಂಚಿ ಮಮತಾ ಜಯರಾಂ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಗುರುಪೂಜೆ ಮತ್ತು ಮಕ್ಕಳಿಂದ ಸಾಂಸ್ಕೃತಿಕಕಾರ್ಯಕ್ರಮಗಳು ನಡೆದವು.
ಚಿತ್ರ- ಕೋಲಾರ ನಗರದ ಪಾಲಸಂದ್ರ ಬಡಾವಣೆಯಲ್ಲಿ ನವನಳಂದ ಶಾಲೆಯಲ್ಲಿ ಕೋಲಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಗುರುಪೂಜೆ ನಡೆಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್