ಸಾರ್ವಜನಿಕ ಕುಂದು ಕೊರತೆ ಸಭೆ
ಧಾರವಾಡ, 18 ಜುಲೈ (ಹಿ.ಸ.) : ಆ್ಯಂಕರ್ : ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲ್ಲೂಕಿನ ಹಳ್ಳಿಕೇರಿ ಗ್ರಾಮ ಪಂಚಾಯಿತಿಯಲ್ಲಿ ಇಂದು ಸರ್ಕಾರದ ನಿರ್ದೇಶನದಂತೆ ಹಳ್ಳಿ ಜನರ ಸಮಸ್ಯೆ ಆಲಿಸಿ ಗ್ರಾಮ ಮಟ್ಟದಲ್ಲಿ ಆದಷ್ಟು ಸಮಸ್ಯೆಗಳು ನೀರು, ಬೀದಿದೀಪ, ಸಮುದಾಯ ಶೌಚಾಲಯ ನಿರ್ಮಾಣ ಮತ್ತು ಬಳಕೆ ಹಾಗೂ ರಸ್ತೆ, ಚರಂ
Public meeting


ಧಾರವಾಡ, 18 ಜುಲೈ (ಹಿ.ಸ.) :

ಆ್ಯಂಕರ್ : ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲ್ಲೂಕಿನ ಹಳ್ಳಿಕೇರಿ ಗ್ರಾಮ ಪಂಚಾಯಿತಿಯಲ್ಲಿ ಇಂದು ಸರ್ಕಾರದ ನಿರ್ದೇಶನದಂತೆ ಹಳ್ಳಿ ಜನರ ಸಮಸ್ಯೆ ಆಲಿಸಿ ಗ್ರಾಮ ಮಟ್ಟದಲ್ಲಿ ಆದಷ್ಟು ಸಮಸ್ಯೆಗಳು ನೀರು, ಬೀದಿದೀಪ, ಸಮುದಾಯ ಶೌಚಾಲಯ ನಿರ್ಮಾಣ ಮತ್ತು ಬಳಕೆ ಹಾಗೂ ರಸ್ತೆ, ಚರಂಡಿ ನಿರ್ಮಾಣ, ಮಹಾತ್ಮ ನರೇಗಾ ಯೋಜನೆ ಸಹಿತ ಇನ್ನಿತರ ವಿಷಯಗಳನ್ನು ಬಗೆಹರಿಸುವ ಸಲುವಾಗಿ ಕುಂದುಕೊರತೆ ಸಭೆಯಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ್ ಪಾಟೀಲ್ ರವರು ಸಾರ್ವಜನಿಕರ ಜೊತೆಗೆ ಸಮಾಲೋಚನೆ ನಡೆಸಿದರು.

ಅಣ್ಣಿಗೇರಿ ತಾಲ್ಲೂಕಿನ ಹಳ್ಳಿಕೇರಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಪಾಂಡುರಂಗ ದೇವಸ್ಥಾನ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಾರ್ವಜನಿಕ ಕುಂದುಕೊರತೆ ನಿವಾರಣೆ ಸಭೆ ಉದ್ಘಾಟಿಸಿದರು.

ನಂತರ ಅವರು, ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಅಭಿವೃದ್ಧಿಪಡಿಸಿರುವ ಗ್ರಾಮದ ಸ್ಮಶಾನ, ಕೆರೆಯ ಸೌಂದರ್ಯಕರಣ, ನಿರ್ಮಾಣ ಹಂತದಲ್ಲಿರುವ ಶಾಲಾ ಮೈದಾನ, ಶೌಚಾಲಯ ಪರಿಶೀಲನೆ, ಹಾಗೂ ಕೂಸಿನ ಮನೆ ಮಕ್ಕಳ ಹಾಜರಾತಿ, ಆಹಾರ, ದಾಖಲಾತಿಗಳನ್ನು ಪರಿಶೀಲನೆ ಮಾಡಿದರು. ಮಕ್ಕಳಿಗೆ ನೀಡುವ ಆಹಾರ ಸಾಮಾಗ್ರಿಗಳನ್ನು ಪರೀಕ್ಷಿಸಿದರು. ಕೂಸಿನಮನೆಯನ್ನು ಹೆಚ್ಚು ಸ್ವಚ್ಚತೆಯಿಂದ ಇಟ್ಟುಕೊಳ್ಳಬೇಕು ಹಾಗೂ ಆಹಾರ ಸಾಮಾಗ್ರಿಗಳನ್ನು ಜಾಗರೂಕತೆಯಿಂದ ವೀಕ್ಷಿಸಿ ಮಕ್ಕಳಿಗೆ ನೀಡಬೇಕು. ಸುರಕ್ಷತೆಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ತಿಳಿಸಿದರು.

ನಂತರ ಗ್ರಾಮ ಪಂಚಾಯಿತಿಯ ಡಿಜಿಟಲ್ ಗ್ರಂಥಾಲಯದಲ್ಲಿ ಮಕ್ಕಳ ಜೊತೆಗೆ ಮಾತನಾಡಿದರು. ಸರ್ಕಾರಿ ಶಾಲೆಗಳ ಶಿಕ್ಷಣದ ಗುಣಮಟ್ಟ, ಅಂಗನವಾಡಿಯಲ್ಲಿ ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರ ಮತ್ತು ಶಿಕ್ಷಣ, ಮೂಲಸೌಕರ್ಯ ಪರಿಶೀಲಿಸಿದರು. ಭೋಜನ ವ್ಯವಸ್ಥೆ ಬಗ್ಗೆ ವಿದ್ಯಾರ್ಥಿಗಳು ಮತ್ತು ಅಧಿಕಾರಿಗಳ ಜೊತೆ ಚರ್ಚಿಸಿದರು.

ಉಪಕಾರ್ಯದರ್ಶಿ ಬಿ.ಎಸ್. ಮೂಗನೂರಮಠ, ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಗ್ರಾಮ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು, ಸದಸ್ಯರು, ಮಕ್ಕಳು ಹಾಗೂ ಎಲ್ಲ ಸಾರ್ವಜನಿಕರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande