ಬೆಂಗಳೂರು, 18 ಜುಲೈ (ಹಿ.ಸ.) :
ಆ್ಯಂಕರ್ : ಬೆಂಗಳೂರಿನ ಗಾಂಧಿನಗರ ಕ್ಷೇತ್ರದ ಜಕ್ಕರಾಯನಕೆರೆ ಆಟದ ಮೈದಾನದ ಹಸ್ತಾಂತರ ಕುರಿತಂತೆ ವಿಕಾಸ ಸೌಧದಲ್ಲಿ ಸಚಿವ ದಿನೇಶ್ ಗುಂಡೂರಾವ್ ಸಭೆ ನಡೆಸಿದರು.
ಮೇಟ್ರೋ ಬಂದ ನಂತರ ಜಕ್ಕರಾಯನಕೆರೆಯ ಖಾಲಿ ಪ್ರದೇಶವು ವ್ಯರ್ಥವಾಗಿದೆ. ನಿರ್ವಾತ ಪ್ರದೇಶದಲ್ಲಿ ಪೋಲೀಸ್ ಇಲಾಖೆಯ ಜಪ್ತಿ ಮಾಡಲಾಗಿದ್ದ ಹಳೆಯ ವಾಹನಗಳನ್ನು ಡಂಪಿಗ್ ಮಾಡಲಾಗಿತ್ತು, ತುಂಬ ಹಳೆಯ ವಾಹನಗಳು ಒಂದಡೆ ಸೇರಿಸಲಾಗಿದ್ದ ಕಾರಣ ಕಳೆದ ಮೂರು ತಿಂಗಳ ಹಿಂದೆ ಭಾರೀ ಅಗ್ನಿ ಅವಘಡ ಉಂಟಾಗಿತ್ತು, ಇದರಿಂದ ಯಾವುದೇ ಪ್ರಾಣನಷ್ಟವಾಗಿಲ್ಲ, ಆದರೆ ಅಪಾರ ಪ್ರಮಾಣದ ಸರ್ಕಾರಿ ಆಸ್ತಿ ನಾಶವಾಗಿದೆ. ಈ ಪ್ರದೇಶದಲ್ಲಿರುವ ಹಾವುಗಳಿಂದ ಜನರಿಗೆ ಆಂತಕ ಉಂಟಾಗುತ್ತಿದೆ. ಈ ಜಾಗದ ಸಮಸ್ಯೆಯನ್ನು ಆದಷ್ಟು ಬೇಗ ಒಂದು ಪರಿಹಾರ ಒದಗಿಸಬೇಕು. ಕ್ಷೇತ್ರದ ಜನರಿಗೆ ಉತ್ತಮ ಆರೋಗ್ಯಕಾಪಾಡಿಕೊಳ್ಳಲು ಆಟದ ಮೈದಾನ ಅತ್ಯವಶ್ಯಕವಾಗಿದೆ ಎಂದರು.
ಈ ಪ್ರದೇಶವನ್ನು ಕಡ್ಡಾಯವಾಗಿ ಆಟದ ಮೈದಾನಕ್ಕೆ ನೀಡಲು ಎಲ್ಲಾ ಇಲಾಖೆಗಳು ಸಹಕರಿಸಬೇಕು, ಅವಶ್ಯಕತೆ ಬಿದ್ದಲಿ ಪೊಲೀಸ್ ಇಲಾಖೆಯು ತಮ್ಮ ದೈನಂದಿನ ಕವಾಯತು ನಡೆಸಿಕೊಳ್ಳಬಹುದು. ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರು ಈ ಮೈದಾನವನ್ನು ಒಟ್ಟಾಗಿ ಉಪಯೋಗಿಸಿಕೊಳ್ಳಬಹುದು.
ಕೊಡಲೇ ಈ ಕುರಿತು ಗೃಹ ಸಚಿವ ಜಿ.ಪರಮೇಶ್ವರ ಬಳಿ ಸಂಪೂರ್ಣ ಮಾಹಿತಿಯ ವರದಿ ಮಂಡಿಸಿ ಅವರ ಒಪ್ಪಿಗೆ ಪಡೆಯಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa