ಭಾರತ, ಇಂಡೋನೇಷ್ಯಾ, ಲಾವೋಸ್‌ ಸೌರ ಪ್ಯಾನೆಲ್ ಆಮದು ಮೇಲೆ ಸುಂಕಕ್ಕೆ ಒತ್ತಾಯ
ವಾಷಿಂಗ್ಟನ್, 18 ಜುಲೈ (ಹಿ.ಸ.) : ಆ್ಯಂಕರ್ : ಭಾರತ, ಇಂಡೋನೇಷ್ಯಾ ಮತ್ತು ಲಾವೋಸ್‌ನಿಂದ ಸೌರ ಫಲಕಗಳ ಆಮದು ಮೇಲೆ ಸುಂಕ ವಿಧಿಸುವಂತೆ ಅಮೆರಿಕದ ಪ್ರಮುಖ ಸೌರ ಕಂಪನಿಗಳು ಅಮೆರಿಕದ ವಾಣಿಜ್ಯ ಇಲಾಖೆಗೆ ಅರ್ಜಿ ಸಲ್ಲಿಸಿವೆ. ಈ ದೇಶಗಳು ಪ್ಯಾನೆಲ್‌ಗಳನ್ನು ಅಗ್ಗದ ದರದಲ್ಲಿ ಮಾರಾಟ ಮಾಡುವ ಮೂಲಕ ಅಮೆರಿಕದ ಸ್ಥಳೀ
ಭಾರತ, ಇಂಡೋನೇಷ್ಯಾ, ಲಾವೋಸ್‌ ಸೌರ ಪ್ಯಾನೆಲ್ ಆಮದು ಮೇಲೆ ಸುಂಕಕ್ಕೆ ಒತ್ತಾಯ


ವಾಷಿಂಗ್ಟನ್, 18 ಜುಲೈ (ಹಿ.ಸ.) :

ಆ್ಯಂಕರ್ : ಭಾರತ, ಇಂಡೋನೇಷ್ಯಾ ಮತ್ತು ಲಾವೋಸ್‌ನಿಂದ ಸೌರ ಫಲಕಗಳ ಆಮದು ಮೇಲೆ ಸುಂಕ ವಿಧಿಸುವಂತೆ ಅಮೆರಿಕದ ಪ್ರಮುಖ ಸೌರ ಕಂಪನಿಗಳು ಅಮೆರಿಕದ ವಾಣಿಜ್ಯ ಇಲಾಖೆಗೆ ಅರ್ಜಿ ಸಲ್ಲಿಸಿವೆ. ಈ ದೇಶಗಳು ಪ್ಯಾನೆಲ್‌ಗಳನ್ನು ಅಗ್ಗದ ದರದಲ್ಲಿ ಮಾರಾಟ ಮಾಡುವ ಮೂಲಕ ಅಮೆರಿಕದ ಸ್ಥಳೀಯ ಉದ್ಯಮಕ್ಕೆ ಹಾನಿ ಮಾಡುತ್ತಿವೆ ಎಂದು ಆರೋಪಿಸಲಾಗಿದೆ.

ಈ ಅಭಿಯಾನವನ್ನು ‘ಅಲೈಯನ್ಸ್ ಫಾರ್ ಅಮೆರಿಕನ್ ಸೋಲಾರ್ ಮ್ಯಾನುಫ್ಯಾಕ್ಚರಿಂಗ್ ಅಂಡ್ ಟ್ರೇಡ್’ ಎಂಬ ಸಂಸ್ಥೆ ಮುನ್ನಡೆಸಿದ್ದು, ಫಸ್ಟ್ ಸೋಲಾರ್, ಕ್ಯೂ-ಸೆಲ್ಸ್, ಟ್ಯಾಲನ್ ಪಿವಿ ಮತ್ತು ಮಿಷನ್ ಸೋಲಾರ್ ಕಂಪನಿಗಳು ಇದರ ಭಾಗವಾಗಿವೆ.

2022ರಲ್ಲಿ ಈ ಮೂರು ದೇಶಗಳಿಂದ $289 ಮಿಲಿಯನ್ ಮೌಲ್ಯದ ಪ್ಯಾನೆಲ್‌ಗಳನ್ನು ಆಮದು ಮಾಡಲಾಗಿದ್ದು, 2023ರಲ್ಲಿ ಅದು $1.6 ಬಿಲಿಯನ್‌ಗೆ ಏರಿಕೆಯಾಗಿದೆ. ಸುಂಕ ವಿಧಿಸದಿದ್ದರೆ, ದೇಶೀಯ ಉತ್ಪಾದನೆಗೆ ಮತ್ತಷ್ಟು ಹಾನಿಯಾಗುತ್ತದೆ ಎಂದು ಕಂಪನಿಗಳು ಎಚ್ಚರಿಸಿವೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande