ಬೆಂಗಳೂರು, 17 ಜುಲೈ (ಹಿ.ಸ.) :
ಆ್ಯಂಕರ್ : ಡೆವಿಲ್ ಚಿತ್ರದ ಹಾಡು ಚಿತ್ರೀಕರಣಕ್ಕಾಗಿ ಸ್ಟಾರ್ ನಟ ದರ್ಶನ್ ಥೈಲ್ಯಾಂಡ್‌ಗೆ ತೆರಳಿದ್ದು, ಚಿತ್ರೀಕರಣ ಆರಂಭವಾಗಿದೆ. ಹಸಿರು ಬಣ್ಣದ ಆಕರ್ಷಕ ಬಟ್ಟೆಯಲ್ಲಿ ಮಿಂಚುತ್ತಿರುವ ದರ್ಶನ್ ವಿದೇಶಿ ಪ್ರವಾಸಿಗರ ಜೊತೆಗೆ ಕಾಣಿಸಿಕೊಂಡ ಪೋಟೋ ಬಹಿರಂಗವಾಗಿದೆ.
ಕಳೆದ ಮಂಗಳವಾರ ರಾತ್ರಿ ದರ್ಶನ್ ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೀಶ್ ಹಾಗೂ ಡೆವಿಲ್ ತಂಡದೊಂದಿಗೆ ಥೈಲ್ಯಾಂಡ್ ಪ್ರಯಾಣಿಸಿದ್ದರು. ಇದೀಗ ಥೈಲ್ಯಾಂಡ್‌ನ ಬಂಗ್ಕಾಕ್, ಫುಕೆಟ್ ಹಾಗೂ ಕ್ರಾಬಿ ಮುಂತಾದ ಪ್ರವಾಸಿ ಸ್ಥಳಗಳಲ್ಲಿ ನಟಿ ರಚನಾ ರೈ ಜೊತೆಗೆ ಡ್ಯುಯೆಟ್ ಹಾಡುಗಳ ಚಿತ್ರೀಕರಣ ನಡೆಯುತ್ತಿದೆ.
ಚಿತ್ರದ ನಿರ್ದೇಶಕರು ಹಾಡುಗಳಿಗೆ ವಿದೇಶಿ ಬ್ಯಾಕ್‌ಡ್ರಾಪ್ ಆಯ್ದಿದ್ದು, ನಾಲ್ಕು ದಿನಗಳ ಕಾಲ ಭರ್ಜರಿಯಾಗಿ ಚಿತ್ರೀಕರಣ ನಡೆಯಲಿದೆ. ನಂತರ ದರ್ಶನ್ ಕೆಲವು ದಿನಗಳ ಕಾಲ ಥೈಲ್ಯಾಂಡ್‌ನಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ. ಈ ತಿಂಗಳ ಕೊನೆಯ ವಾರದಲ್ಲಿ ಭಾರತಕ್ಕೆ ಮರಳುವ ನಿರೀಕ್ಷೆಯಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa