ನವದೆಹಲಿ, 13 ಜುಲೈ (ಹಿ.ಸ.) :
ಆ್ಯಂಕರ್ : ಮಹಾರಾಷ್ಟ್ರದ ಔರಂಗಾಬಾದ್ (ಸಂಭಾಜಿನಗರ) ನ ಆರಿಕ್ ಕೈಗಾರಿಕಾ ನಗರದಲ್ಲಿ 20,000 ಚದರ ಅಡಿ ವಿಸ್ತೀರ್ಣದಲ್ಲಿ ಹೊಸ ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಲಾಗುತ್ತದೆ. ಭಾರತೀಯ ಕೈಗಾರಿಕಾ ಒಕ್ಕೂಟದ ಸಹಯೋಗದಲ್ಲಿ ಈ ಕೇಂದ್ರ ನಿರ್ಮಾಣವಾಗಲಿದ್ದು, ಮುಂದಿನ ವಾರ ಈ ಸಂಬಂಧ ಒಪ್ಪಂದ ಸಹಿ ಸಾಧ್ಯತೆ ಇದೆ.
ಕೈಗಾರಿಕಾ ಕಾರ್ಯದರ್ಶಿ ಅಮರ್‌ದೀಪ್ ಸಿಂಗ್ ಭಾಟಿಯಾ ಅವರು ಸ್ಥಳಕ್ಕೆ ಭೇಟಿ ನೀಡಿ ಮೂಲಸೌಕರ್ಯ ಮತ್ತು ಕೈಗಾರಿಕಾ ಪ್ರಗತಿಯನ್ನು ಪರಿಶೀಲಿಸಿದರು. ಸಂಶೋಧನೆ-ವಿಕಸನ ಕೇಂದ್ರಗಳು, ಜಾಗತಿಕ ಸಾಮರ್ಥ್ಯ ಕೇಂದ್ರಗಳು, ಮತ್ತು ಉದ್ಯಮಗಳಿಗೆ ಹೆಚ್ಚು ಬೆಂಬಲ ನೀಡಲಿದೆ ಎಂದು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa