ಪೂರ್ವ ಏಷ್ಯಾ ಕಪ್‌ ಫುಟ್‌ಬಾಲ್ : ದಕ್ಷಿಣ ಕೊರಿಯಾಗೆ ಸತತ ಎರಡನೇ ಗೆಲುವು
ಯೋಂಗಿನ್, 12 ಜುಲೈ (ಹಿ.ಸ.) : ಆ್ಯಂಕರ್ : ಪೂರ್ವ ಏಷ್ಯಾ ಕಪ್‌ ಫುಟ್‌ಬಾಲ್ ಟೂರ್ನಿಯಲ್ಲಿ ಆತಿಥೇಯ ದಕ್ಷಿಣ ಕೊರಿಯಾ 2-0 ಅಂತರದಲ್ಲಿ ಹಾಂಗ್ ಕಾಂಗ್‌ ವಿರುದ್ಧ ಗೆದ್ದು ಸತತ ಎರಡನೇ ಜಯ ಸಾಧಿಸಿದೆ. ಪಂದ್ಯದ 27ನೇ ನಿಮಿಷದಲ್ಲಿ ಕಾಂಗ್ ಸಾಂಗ್-ಯೂನ್ ಮೊದಲ ಗೋಲು ದಾಖಲಿಸಿದರು. 67ನೇ ನಿಮಿಷದಲ್ಲಿ ಲೀ ಹೋ-ಜೆ
Football


ಯೋಂಗಿನ್, 12 ಜುಲೈ (ಹಿ.ಸ.) :

ಆ್ಯಂಕರ್ : ಪೂರ್ವ ಏಷ್ಯಾ ಕಪ್‌ ಫುಟ್‌ಬಾಲ್ ಟೂರ್ನಿಯಲ್ಲಿ ಆತಿಥೇಯ ದಕ್ಷಿಣ ಕೊರಿಯಾ 2-0 ಅಂತರದಲ್ಲಿ ಹಾಂಗ್ ಕಾಂಗ್‌ ವಿರುದ್ಧ ಗೆದ್ದು ಸತತ ಎರಡನೇ ಜಯ ಸಾಧಿಸಿದೆ.

ಪಂದ್ಯದ 27ನೇ ನಿಮಿಷದಲ್ಲಿ ಕಾಂಗ್ ಸಾಂಗ್-ಯೂನ್ ಮೊದಲ ಗೋಲು ದಾಖಲಿಸಿದರು. 67ನೇ ನಿಮಿಷದಲ್ಲಿ ಲೀ ಹೋ-ಜೆ ಶಕ್ತಿಯುತ ಹೆಡರ್ ಮೂಲಕ ಎರಡನೇ ಗೋಲು ಸೇರಿಸಿದರು. ದ.ಕೊರಿಯಾ ತಂಡವು 78% ಚೆಂಡು ಹಿಡಿತದಲ್ಲಿಟ್ಟುಕೊಂಡು, 20 ಶಾಟ್‌ಗಳಲ್ಲಿ 6 ನೇರ ಶಾಟ್‌ಗಳನ್ನು ನಡೆಸಿತು.

ಚೀನಾವನ್ನು 3-0 ಅಂತರದಿಂದ ಸೋಲಿಸಿದ್ದ ದಕ್ಷಿಣ ಕೊರಿಯಾ ಈಗ 6 ಅಂಕಗಳೊಂದಿಗೆ ಟೇಬಲ್ಲಿನಲ್ಲಿ ಮುಂಚೂಣಿಯಲ್ಲಿದೆ. ಜುಲೈ 15ರಂದು ಜಪಾನ್ ವಿರುದ್ಧ ಅಂತಿಮ ಲೀಗ್ ಪಂದ್ಯ ಆಡಲಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande