ಗುಜರಾತ್ ಸೇತುವೆ ದುರಂತ : ಸಾವಿನ ಸಂಖ್ಯೆ 21ಕ್ಕೆ ಏರಿಕೆ
ವಡೋದರಾ, 11 ಜುಲೈ (ಹಿ.ಸ.) : ಆ್ಯಂಕರ್ : ವಡೋದರಾ ಮತ್ತು ಆನಂದ್ ನಡುವಿನ ಮಹಿಸಾಗರ್ ನದಿಗೆ ನಿರ್ಮಿಸಲಾದ ಸೇತುವೆ ಜುಲೈ 9 ರಂದು ಕುಸಿದು ಬಿದ್ದ ಪರಿಣಾಮ, ಇದುವರೆಗೆ 21 ಜನರು ಸಾವನ್ನಪ್ಪಿದ್ದಾರೆ. ನದಿಯಿಂದ ಮೂರು ಟ್ರಕ್‌ಗಳು, ಒಂದು ಬೈಕ್ ಮತ್ತು ಎರಡು ಶವಗಳನ್ನು ರಕ್ಷಣಾ ಸಿಬ್ಬಂದಿ ಹೊರತೆಗಿದ್ದಾರೆ. ಗ
Bridge


ವಡೋದರಾ, 11 ಜುಲೈ (ಹಿ.ಸ.) :

ಆ್ಯಂಕರ್ : ವಡೋದರಾ ಮತ್ತು ಆನಂದ್ ನಡುವಿನ ಮಹಿಸಾಗರ್ ನದಿಗೆ ನಿರ್ಮಿಸಲಾದ ಸೇತುವೆ ಜುಲೈ 9 ರಂದು ಕುಸಿದು ಬಿದ್ದ ಪರಿಣಾಮ, ಇದುವರೆಗೆ 21 ಜನರು ಸಾವನ್ನಪ್ಪಿದ್ದಾರೆ. ನದಿಯಿಂದ ಮೂರು ಟ್ರಕ್‌ಗಳು, ಒಂದು ಬೈಕ್ ಮತ್ತು ಎರಡು ಶವಗಳನ್ನು ರಕ್ಷಣಾ ಸಿಬ್ಬಂದಿ ಹೊರತೆಗಿದ್ದಾರೆ. ಗಾಯಗೊಂಡ ವ್ಯಕ್ತಿಯೊಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಆರೋಗ್ಯ ಸಚಿವ ರಿಷಿಕೇಶ್ ಪಟೇಲ್ ಸ್ಥಳಕ್ಕೆ ಭೇಟಿ ನೀಡಿ, ಅಪಘಾತಕ್ಕೆ ಪೀಠ ಮತ್ತು ಕೀಲು ಕುಸಿತವೇ ಕಾರಣ ಎಂದು ತಿಳಿಸಿದರು. ರಾಜ್ಯದ ರಸ್ತೆ ಮತ್ತು ಕಟ್ಟಡ ಇಲಾಖೆ ಈ ಕುರಿತು ಉನ್ನತ ಮಟ್ಟದ ತನಿಖೆ ಕೈಗೊಂಡಿದ್ದು, 30 ದಿನಗಳಲ್ಲಿ ವಿವರವಾದ ವರದಿ ಸಲ್ಲಿಸಲು ಸೂಚಿಸಲಾಗಿದೆ. ಘಟನೆಗೆ ಪ್ರಾಥಮಿಕ ನಿರ್ಲಕ್ಷ್ಯ ಹಿನ್ನೆಲೆಯಲ್ಲಿ ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

ಸೇತುವೆ ಕುಸಿತದ ವೇಳೆ ನದಿಗೆ ಬಿದ್ದ ಟ್ರಕ್‌ನಲ್ಲಿರುವ ಸಲ್ಫ್ಯೂರಿಕ್ ಆಮ್ಲ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದ್ದು, ಕಾರ್ಯಾಚರಣೆ ಇನ್ನೂ ಮುಂದುವರಿದಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande