ಕೋಲಾರದಲ್ಲಿ ನಗರ ಸಾರಿಗೆ ಸಂಚಾರ ಆರಂಭ
ಕೋಲಾರದಲ್ಲಿ ನಗರ ಸಾರಿಗೆ ಸಂಚಾರ ಆರಂಭ
ಕೋಲಾರ ರಸ್ತೆ ಸಾರಿಗೆ ಸಂಸ್ಥೆಯಿ0ದ ಆರಂಭಿಸಲಾದ ನಗರ ಸಾರಿಗೆ ಸಂಚಾರಕ್ಕೆ ಸೋಮವಾರ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರ ಭೈರತಿ ಸುರೇಶ್ ಚಾಲನೆ ನೀಡಿದರು.


ಕೋಲಾರ, ೩೦ ಜೂನ್ (ಹಿ.ಸ) ಆಂಕರ್ :

ಆ್ಯಂಕರ್ : ಕೋಲಾರದಲ್ಲಿ ನೂತನವಾಗಿ ಆರಂಭಿಸಲಾದ ನಗರ ಸಾರಿಗೆ ಸಂಚಾರಕ್ಕೆ ನಗರಾಭಿವೃದ್ಧಿ ಹಾಗೂ ಕೋಲಾರ ಜಿಲ್ಲಾ ಉಸ್ತುವರಿ ಸಚಿವ ಬಿ.ಎಸ್.ಸುರೇಶ್ ಸೋಮವಾರ ಚಾಲನೆ ನೀಡಿದರು.

ನೂತನವಾಗಿ ಆರಂಭಿಸಲಾಗಿರುವ ನಗರ ಸಾರಿಗ ಬಸ್‌ಗಳು ನಾಲ್ಕು ಮಾರ್ಗಗಳಲ್ಲಿ ಕೋಲಾರ ಕೇಂದ್ರ ಬಸ್ ನಿಲ್ದಾಣದಿಂದ ಸಂಚರಿಸಲಿವೆ. ಕಳೆದ ೧೧ ವರ್ಷಗಳ ಹಿಂದೆ ಆರಂಭಿಸಲಾದ ನಗರ ಸಾರಿಗೆ ಸಂಚಾರ ಹಲವು ಕಾರಣಗಳಿಂದ ಸ್ಥಗಿತಗೊಂಡಿತ್ತು.

ಕೋಲಾರ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಾಥ್ ಮಾತನಾಡಿ ನಾಲ್ಕು ಬಸ್‌ಗಳು ಎಂಬತ್ತು ಟ್ರಿಪ್‌ಗಳಲ್ಲಿ ಸಂಚರಿಸಲಿವೆ. ಸಮೀಕ್ಷೆ ನಡೆಸಲಾಗಿದ್ದು, ನಾಲ್ಕು ಮಾರ್ಗಗಳಲ್ಲಿ ನಗರ ಸಾರಿಗೆ ಸಂಚಾರಕ್ಕೆ ಬೇಡಿಕೆ ಇದೆ. ಪ್ರತಿ ಅರ್ಧ ಕಿ.ಮೀಟರ್‌ಗೆ ನಿಲುಗಡೆ ಇದೆ. ಬಿಎಂಟಿಸಿ ಮಾದರಿಯಲ್ಲಿ ಬಸ್‌ಗಳ ವಿನ್ಯಾಸ ಮಾಡಲಾಗಿದೆ. ಬಸ್ಸ್ಗಳಲ್ಲಿ ಡಿಜಿಟಲ್ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ನಿರ್ವಾಹನಕರು ಚಿಲ್ಲರೆ ನೀಡುವ ಸಮಸ್ಯೆ ಉದ್ಘವಿಸುವುದಿಲ್ಲ ಎಂದು ತಿಳಿಸಿದರು.

ಕೋಲಾರ ಬಸ್ ನಿಲ್ದಾಣದಲ್ಲಿ ಪ್ರತ್ಯೇಕ ಬಸ್ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆಯಿಂದ ಸಂಜೆಯವರೆಗೆ ಬಸ್‌ಗಳು ಸಂಚರಿಸಲಿವೆ. ನಗರದ ನಾಲ್ಕು ದಿಕ್ಕುಗಳಲ್ಲಿ ಸಂಚರಿಸುವ ಕಾರಣ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಶಕ್ತಿ ಯೋಜನೆಯ ಮೂಲಕ ಸಹ ಮಹಿಳೆಯರು ಸಂಚರಿಸಬಹುದಾಗಿ ಎಂದು ತಿಳಿಸಿದರು.

ಚಿತ್ರ : ಕೋಲಾರ ರಸ್ತೆ ಸಾರಿಗೆ ಸಂಸ್ಥೆಯಿ0ದ ಆರಂಭಿಸಲಾದ ನಗರ ಸಾರಿಗೆ ಸಂಚಾರಕ್ಕೆ ಸೋಮವಾರ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರ ಭೈರತಿ ಸುರೇಶ್ ಚಾಲನೆ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande