ಚಂಡೀಗಢ, 27 ಜೂನ್ (ಹಿ.ಸ.) :
ಆ್ಯಂಕರ್ : ಪಂಜಾಬ್‌ನ ಗುರುದಾಸ್ಪುರದಲ್ಲಿ ನಿನ್ನೆ ರಾತ್ರಿ ಅಪರಿಚಿತ ದುಷ್ಕರ್ಮಿಗಳು ಗ್ಯಾಂಗ್‌ಸ್ಟರ್ ಜಗ್ಗು ಭಗವಾನ್‌ಪುರಿಯಾ ಅವರ ತಾಯಿ ಹರ್ಜೀತ್ ಕೌರ್ ಹಾಗೂ ಸಹಚರ ಕರಣ್‌ವೀರ್ ಸಿಂಗ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಬಂಬಿಹಾ ಗ್ಯಾಂಗ್ ಈ ದಾಳಿ ಹೊಣೆ ಹೊತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿ ತಾವು ಇದಕ್ಕೆ ಜವಾಬ್ದಾರರಾಗಿದ್ದೇವೆಂದು ಪ್ರಕಟಿಸಿದೆ.
ಘಟನೆಯಲ್ಲಿ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದು, ಪೊಲೀಸರು ಈ ಹತ್ಯೆಯನ್ನು ಗ್ಯಾಂಗ್ ವಾರ್‌ನ ಭಾಗವೆಂದು ಶಂಕಿಸಿದ್ದು, ತನಿಖೆ ಪ್ರಗತಿಯಲ್ಲಿ ಇದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa