18 Jul 2025, 21:19 HRS IST

ಹಾವೇರಿಯಲ್ಲಿ ಬ್ಯಾಂಕುಗಳ ಪ್ರಗತಿ ಪರಿಶೀಲನಾ ಸಭೆ
ಹಾವೇರಿ, 26 ಜೂನ್ (ಹಿ.ಸ.): ಆ್ಯಂಕರ್:ಹಾವೇರಿಯ ಜಿಲ್ಲಾ ಪಂಚಾಯತ್ ಕಾರ್ಯಾಲಯದ ಸಭಾಂಗಣದಲ್ಲಿ ಇಂದು ಜಿಲ್ಲಾ ಮಟ್ಟದ ಬ್ಯಾಂಕುಗಳ ಪ್ರಗತಿ ಪರಿಶೀಲನಾ ಸಮಿತಿ ಹಾಗೂ ಜಿಲ್ಲಾ ಸಲಹಾ ಸಮಿತಿ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು , ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಸಂಸದ ಬಸವರಾಜ ಬೊಮ್ಮಾಯಿ ವಹಿಸಿದರು. ಸಭೆ
Meeting


ಹಾವೇರಿ, 26 ಜೂನ್ (ಹಿ.ಸ.):

ಆ್ಯಂಕರ್:ಹಾವೇರಿಯ ಜಿಲ್ಲಾ ಪಂಚಾಯತ್ ಕಾರ್ಯಾಲಯದ ಸಭಾಂಗಣದಲ್ಲಿ ಇಂದು ಜಿಲ್ಲಾ ಮಟ್ಟದ ಬ್ಯಾಂಕುಗಳ ಪ್ರಗತಿ ಪರಿಶೀಲನಾ ಸಮಿತಿ ಹಾಗೂ ಜಿಲ್ಲಾ ಸಲಹಾ ಸಮಿತಿ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು , ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಸಂಸದ ಬಸವರಾಜ ಬೊಮ್ಮಾಯಿ ವಹಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ರುಚಿ ಬಿಂದಲ್, ಲೀಡ್ ಬ್ಯಾಂಕಿನ ಮ್ಯಾನೇಜರ್ ಜೀವನ ಜಿ.ಎನ್, ಆರ್‌ಬಿಐ ಲೀಡ್ ಬ್ಯಾಂಕ್ ಪ್ರತಿನಿಧಿ ಸೂರಜ್ ಎಸ್, ಬ್ಯಾಂಕ್ ಆಫ್ ಬರೋಡಾದ ರಿಜಿನಲ್ ಮ್ಯಾನೇಜರ್ ಪಂಕಜಕುಮಾರ ಸುಮನ್, ನಬಾರ್ಡ್‌ನ ಡಿಡಿಎಂ ರಂಗನಾಥ ಎಸ್, ಹಾಗೂ ಕೆವಿಜಿ ಬ್ಯಾಂಕ್‌ನ ರಿಜಿನಲ್ ಮ್ಯಾನೇಜರ್ ಸೋಮಶೇಖರ ಎನ್ ಎನ್ ಉಪಸ್ಥಿತರಿದ್ದರು.

ಸಭೆಯಲ್ಲಿ ಜಿಲ್ಲಾ ಮಟ್ಟದ ಬ್ಯಾಂಕುಗಳ ಸಾಲ ವಿತರಣೆ, ಕೃಷಿ ಸಾಲದ ಸ್ಥಿತಿ, ಉದ್ಯಮಿಗಳಿಗೆ ಸಹಾಯಧನ, ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚಿಸಲಾಯಿತು. ಸಂಸದ ಬೊಮ್ಮಾಯಿ ಅವರು ಬ್ಯಾಂಕುಗಳನ್ನು ಗ್ರಾಮೀಣ ಜನತೆಗೆ ಹೆಚ್ಚು ಆರ್ಥಿಕ ಸೌಲಭ್ಯ ಒದಗಿಸುವಂತೆ ಸೂಚಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande