ಜುಲೈ 09 ರಂದು ಅಂಚೆ ಕಚೇರಿ ದೂರುಗಳ ಕುರಿತು ‘ಡಾಕ್ ಅದಾಲತ್’
ಬಳ್ಳಾರಿ, 23 ಜೂನ್ (ಹಿ.ಸ.) : ಆ್ಯಂಕರ್ : ಅಂಚೆ ಇಲಾಖೆ ಬಳ್ಳಾರಿ ವಿಭಾಗದ ವತಿಯಿಂದ ಜುಲೈ 09 ರಂದು ಬೆಳಿಗ್ಗೆ 11 ಗಂಟೆಗೆ ಬಳ್ಳಾರಿ ವಿಭಾಗದ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ‘ಡಾಕ್ ಅದಾಲತ್’ ಏರ್ಪಡಿಸಲಾಗಿದೆ. ಅಂಚೆ ಕಚೇರಿಗಳಿಗೆ ಸಂಬಂಧಿಸಿದಂತೆ ಅಂಚೆ ವಿಷಯಗಳ ಕುರಿತು ಕುಂದು-ಕೊರತೆಗಳಿದ್ದಲ್ಲಿ ತಮ್ಮ
ಜುಲೈ 09 ರಂದು ಅಂಚೆ ಕಚೇರಿ ದೂರುಗಳ ಕುರಿತು ‘ಡಾಕ್ ಅದಾಲತ್’


ಬಳ್ಳಾರಿ, 23 ಜೂನ್ (ಹಿ.ಸ.) :

ಆ್ಯಂಕರ್ : ಅಂಚೆ ಇಲಾಖೆ ಬಳ್ಳಾರಿ ವಿಭಾಗದ ವತಿಯಿಂದ ಜುಲೈ 09 ರಂದು ಬೆಳಿಗ್ಗೆ 11 ಗಂಟೆಗೆ ಬಳ್ಳಾರಿ ವಿಭಾಗದ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ‘ಡಾಕ್ ಅದಾಲತ್’ ಏರ್ಪಡಿಸಲಾಗಿದೆ.

ಅಂಚೆ ಕಚೇರಿಗಳಿಗೆ ಸಂಬಂಧಿಸಿದಂತೆ ಅಂಚೆ ವಿಷಯಗಳ ಕುರಿತು ಕುಂದು-ಕೊರತೆಗಳಿದ್ದಲ್ಲಿ ತಮ್ಮ ಕುಂದು-ಕೊರತೆಗಳನ್ನು ವಿವರವಾಗಿ ಬರೆದು ಅಂಚೆ ಅಧೀಕ್ಷಕರು, ಬಳ್ಳಾರಿ ವಿಭಾಗ, ಬಳ್ಳಾರಿ-583102 ಈ ವಿಳಾಸಕ್ಕೆ ಜುಲೈ 08 ರ ಸಂಜೆ 04 ಗಂಟೆಯೊಳಗೆ ಅಥವಾ ಇದಕ್ಕೂ ಮುಂಚಿತವಾಗಿ ಕಳುಹಿಸಬೇಕು.

ಕುಂದು-ಕೊರತೆಗಳನ್ನು doballari.ka@indiapost.gov.in ಗೆ ಸಹ ಕಳುಹಿಸಬಹುದು ಎಂದು ಬಳ್ಳಾರಿ ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande