ಮೀನುಗಾರಿಕೆ ಇಲಾಖೆ : ಅರ್ಜಿ ಆಹ್ವಾನ
ಬಳ್ಳಾರಿ, 23 ಜೂನ್ (ಹಿ.ಸ.) : ಆ್ಯಂಕರ್ : ಮೀನುಗಾರಿಕೆ ಇಲಾಖೆಯ ವತಿಯಿಂದ 2025-26 ನೇ ಸಾಲಿನ ನಾನಾ ಯೋಜನೆಗಳಡಿ ಜಲಾಶಯಗಳಿಗೆ ಬಲಿತ ಬಿತ್ತನೆ ಮೀನುಮರಿಗಳನ್ನು ಸರಬರಾಜು ಮಾಡಲು ಆಸಕ್ತ ನೋಂದಾಯಿತ ಮೀನುಮರಿ ಪಾಲನಾದಾರರಿಂದ ಅರ್ಜಿ ಆಹ್ವಾನಿಸಲಾಗಿದೆ. ಸರ್ಕಾರ ನಿಗಪಡಿಸಿದ ದರಗಳಲ್ಲಿ (ಸಾಗಾಣಿಕೆ ವೆಚ್ಚ
ಮೀನುಗಾರಿಕೆ ಇಲಾಖೆ : ಅರ್ಜಿ ಆಹ್ವಾನ


ಬಳ್ಳಾರಿ, 23 ಜೂನ್ (ಹಿ.ಸ.) :

ಆ್ಯಂಕರ್ : ಮೀನುಗಾರಿಕೆ ಇಲಾಖೆಯ ವತಿಯಿಂದ 2025-26 ನೇ ಸಾಲಿನ ನಾನಾ ಯೋಜನೆಗಳಡಿ ಜಲಾಶಯಗಳಿಗೆ ಬಲಿತ ಬಿತ್ತನೆ ಮೀನುಮರಿಗಳನ್ನು ಸರಬರಾಜು ಮಾಡಲು ಆಸಕ್ತ ನೋಂದಾಯಿತ ಮೀನುಮರಿ ಪಾಲನಾದಾರರಿಂದ ಅರ್ಜಿ ಆಹ್ವಾನಿಸಲಾಗಿದೆ.

ಸರ್ಕಾರ ನಿಗಪಡಿಸಿದ ದರಗಳಲ್ಲಿ (ಸಾಗಾಣಿಕೆ ವೆಚ್ಚ ಸೇರಿ) ಉತ್ತಮ ತಳಿಯ 80-100 ಗಾತ್ರದ ಮೀನುಮರಿಗಳನ್ನು ಸರಬರಾಜು ಮಾಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿಗಳನ್ನು ಇಲಾಖೆಯ ವೆಬ್‍ಸೈಟ್ WWW.fisheries.karnataka.gov.in ಗೆ ಭೇಟಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜುಲೈ 18 ಕೊನೆಯ ದಿನ.

ಹೆಚ್ಚಿನ ಮಾಹಿತಿಗಾಗಿ ನಗರದ ನಾಗಲಕೆರೆ ಹತ್ತಿರದ ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರ ಕಚೇರಿ ಅಥವಾ ಮೊ.9449593156 ಗೆ ಹಾಗೂ ಆಯಾ ತಾಲ್ಲೂಕು, ವಲಯ ಮೀನುಗಾರಿಕೆ ಇಲಾಖೆಯ ಕಚೇರಿಗಳಿಗೆ ಸಂಪರ್ಕಿಸಬಹುದು ಎಂದು ಮೀನುಗಾರಿಕೆ ಉಪ ನಿರ್ದೇಶಕ ಶಿವಣ್ಣ ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande