ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು : ಶಾಸಕ ಸಿ ಸಿ ಪಾಟೀಲ್
ಗದಗ, 21 ಜೂನ್ (ಹಿ.ಸ.) : ಆ್ಯಂಕರ್ : ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿಗಳಿಗೆ ಕೈಗೊಳ್ಳುತ್ತಿರುವ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು ಎಂದು ನರಗುಂದ ಶಾಸಕ ಸಿ.ಸಿ.ಪಾಟೀಲ ತಿಳಿಸಿದರು. ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಹಾಗೂ ಉದ್ಘಾಟನಾ ಕಾರ್ಯಕ್ರಮ ನೆರವೇರಿ
ಪೋಟೋ


ಗದಗ, 21 ಜೂನ್ (ಹಿ.ಸ.) :

ಆ್ಯಂಕರ್ : ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿಗಳಿಗೆ ಕೈಗೊಳ್ಳುತ್ತಿರುವ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು ಎಂದು ನರಗುಂದ ಶಾಸಕ ಸಿ.ಸಿ.ಪಾಟೀಲ ತಿಳಿಸಿದರು.

ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಹಾಗೂ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು.

ಕಾಮಗಾರಿಗಳಿಗೆ ಭೂಮಿ ಪೂಜೆ ಕಾರ್ಯಕ್ರಮ: 2024-25 ನೇ ಸಾಲಿನ ಹೊಂಬಳ ಗ್ರಾಮದ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ, ಹೊಂಬಳ ಗ್ರಾಮದ 5 ನೇ ವಾರ್ಡಿನ ರಘು ಬಸಪ್ಪ ಹುಣಸಿಮರದ ಇವರ ಮನೆಯಿಂದ ಬಸವರಾಜ ಹುಣಸಿಮರದ ಇವರ ಮನೆಯವರಿಗೆ ಸಿ.ಸಿ.ಗಟಾರ ಸಿ.ಡಿ. ನಿರ್ಮಾಣ ಕಾಮಗಾರಿ ಭೂಮಿ ಪೂಜೆ, ಹೊಂಬಳ ಗ್ರಾಮದ ಶ್ರೀ ಹೊನ್ನಕೇರಿ ಮಲ್ಲಯ್ಯ ಸಮುದಾಯ ಭವನ ನಿರ್ಮಾಣ ಭೂಮಿ ಪೂಜೆ , ಹೊಂಬಳ ಗ್ರಾಮದ ಹರಣಸಿಕಾರಿ ಜನಾಂಗದ ಸಮುದಾಯ ಭವನ ನಿರ್ಮಾಣ ಒಟ್ಟಾರೆ ಅಂದಾಜು ಮೊತ್ತ 418 ಲಕ್ಷ ರೂ. ವೆಚ್ಚದ ಮೇಲ್ಕಂಡ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.

ಕಾಮಗಾರಿಗಳ ಉದ್ಘಾಟನೆ : ಅಂದಾಜು ಮೊತ್ತ 25.30 ಲಕ್ಷ ರೂ. ವೆಚ್ಚದ ಹೊಂಬಳ ಗ್ರಾಮದ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯ 4 ಕೊಠಡಿಗಳ ಉದ್ಘಾಟನೆ, ಅಂದಾಜು ಮೊತ್ತ 13.90 ಲಕ್ಷ ರೂ. ವೆಚ್ಚದ ಹೊಂಬಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಎಂ.ಕೆ.ಬಿ.ಎಸ್. ಶಾಲೆಯ 1 ಕೊಠಡಿ , ಅಂದಾಜು ಮೊತ್ತ 13.90 ಲಕ್ಷ ರೂ. ವೆಚ್ಚದಡಿ ಹೊಂಬಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯ 1 ಕೊಠಡಿ ಇವುಗಳ ಉದ್ಘಾಟನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಹೊಂಬಳ ಗ್ರಾಮ ಪಂಚಾಯತ್ ಅಧ್ಯಕ್ಷೆ ದಾವನಬಿ ಮುಲ್ಲಾನವರ, ಉಪಾಧ್ಯಕ್ಷರಾದ ನೀಲಮ್ಮ ಬಾಳಮ್ಮನವರ, ಬಸವರಾಜ ಹುಣಸಿಮರದ, ಶಾಲಾ ಶಿಕ್ಷಣ ಇಲಾಖೆಯ ಆರ್.ಎಸ್.ಬುರಡಿ, ಎಸ್‌ಡಿಎಂಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮೆಹಬೂಬ ತುಂಬರಮಟ್ಟಿ, ಹಿಂದುಳಿದ ವರ್ಗಗಳ ತಾಲೂಕಾ ಅಧಿಕಾರಿ ಬಸವರಾಜ ಬಳ್ಳಾರಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮಲ್ಲಯ್ಯ ಕೊರನವರ, ಬಿ.ಇ.ಓ ವಿ.ವಿ.ನಡುವಿನಮನಿ, ಗಣ್ಯರು, ಅಧಿಕಾರಿಗಳು ಹಾಜರಿದ್ದರು.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande