ಕ್ರೀಡಾ ಇಲಾಖೆ : ಜೂನ್ 06 ರ ಮಂಗಳವಾರ ಆಯ್ಕೆ ಶಿಬಿರ
ಬಳ್ಳಾರಿ, 02 ಜೂನ್ (ಹಿ.ಸ.) : ಆ್ಯಂಕರ್ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ 2025-26ನೇ ಸಾಲಿನ ಕ್ರೀಡಾ ವಸತಿ ಶಾಲೆ ಅಥವಾ ನಿಲಯಗಳಿಗೆ 5ನೇ ತರಗತಿಗೆ ಅರ್ಹ ಕ್ರೀಡಾಪಟುಗಳನ್ನು ಆಯ್ಕೆ ಮಾಡಿ ಪ್ರವೇಶಾವಕಾಶ ಕಲ್ಪಿಸಲು ಉದ್ದೇಶಿಸಲಾಗಿದ್ದು, ಅರ್ಹ ಕ್ರೀಡಾಪಟುಗಳು ಭಾಗವಹಿಸಬಹುದಾಗಿದೆ. ಆ
ಕ್ರೀಡಾ ಇಲಾಖೆ : ಜೂನ್ 06 ರ ಮಂಗಳವಾರ ಆಯ್ಕೆ ಶಿಬಿರ


ಬಳ್ಳಾರಿ, 02 ಜೂನ್ (ಹಿ.ಸ.) :

ಆ್ಯಂಕರ್ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ 2025-26ನೇ ಸಾಲಿನ ಕ್ರೀಡಾ ವಸತಿ ಶಾಲೆ ಅಥವಾ ನಿಲಯಗಳಿಗೆ 5ನೇ ತರಗತಿಗೆ ಅರ್ಹ ಕ್ರೀಡಾಪಟುಗಳನ್ನು ಆಯ್ಕೆ ಮಾಡಿ ಪ್ರವೇಶಾವಕಾಶ ಕಲ್ಪಿಸಲು ಉದ್ದೇಶಿಸಲಾಗಿದ್ದು, ಅರ್ಹ ಕ್ರೀಡಾಪಟುಗಳು ಭಾಗವಹಿಸಬಹುದಾಗಿದೆ.

ಆಯ್ಕೆ ಶಿಬಿರವು ಜೂನ್ 06 ರ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗುವುದು. ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳ ದೈಹಿಕ ಪರೀಕ್ಷೆ ಕೈಗೊಳ್ಳಲಾಗುವುದು. ಭಾಗವಹಿಸುವ ಕ್ರೀಡಾ ಪಟುಗಳು 5ನೇ ತರಗತಿಗೆ 4ನೇ ತರಗತಿ ಪಾಸ್ ಆಗಿರಬೇಕು. ವಯಸ್ಸು 01.06.2025 ಕ್ಕೆ 11 ವರ್ಷ ಒಳಗಿರಬೇಕು.

ಆಯ್ಕೆ ಶಿಬಿರದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಪ್ರಯಾಣ ಭತ್ಯೆ ಮತ್ತು ದಿನಭತ್ಯೆ ಇಲಾಖೆಯಿಂದ ನೀಡಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಅಥವಾ ಅಥ್ಲೆಟಿಕ್ ತರಬೇತುದಾರರಾದ ಮಂಜುನಾಥ ಕೆ.ಎನ್(ಮೊ.9535318271) ಇವರನ್ನು ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande